ಜೈಪುರ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಪುಟ್ಟ ಬಾಲಕನೋರ್ವ ಜೊತೆಗಿರುವ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ. ಅಂದು ಪುಟ್ಟ ಬಾಲಕನಾಗಿದ್ದ ಈ ಹುಡುಗ ಇಂದು ಧೋನಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅಡುವಷ್ಟುರ ಮಟ್ಟಿಗೆ ಬೆಳೆದಿದ್ದಾನೆ.
Advertisement
ಹಳೆಯ ಫೋಟೋ ಒಂದರಲ್ಲಿ ಧೋನಿ ಜೊತೆಗೆ ಪುಟ್ಟ ಬಾಲಕನೋರ್ವ ನಿಂತು ಫೋಟೋಗೆ ಪೋಸ್ ನೀಡಿದ್ದ. ಆ ಬಾಲಕ ಇಂದು ಧೋನಿಯೊಂದಿಗೆ ಐಪಿಎಲ್ನಲ್ಲಿ ಆಡುತ್ತಿದ್ದಾನೆ. ಹೌದು ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್ರೌಂಡರ್ 19 ವರ್ಷದ ರಿಯಾನ್ ಪರಾಗ್ ಧೋನಿಯೊಂದಿಗೆ ಫೋಟೋದಲ್ಲಿರುವ ಆ ಪುಟ್ಟ ಬಾಲಕ. ಅಂದು ಸಣ್ಣ ಬಾಲಕನಾಗಿದ್ದ ವೇಳೆ ಧೋನಿಯೊಂದಿಗೆ ನಿಂತು ಛಾಯಚಿತ್ರ ತೆಗೆದುಕೊಂಡಿದ್ದರು. ಆ ಫೋಟೋವನ್ನು ಇದೀಗ ರಾಜಸ್ಥಾನ ರಾಯಲ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ತಂಡದ ಸ್ಟಾರ್ ಆಟಗಾರರ ಬೆಳವಣಿಗೆಯನ್ನು ಕೊಂಡಾಡಿದೆ. ಇದನ್ನೂ ಓದಿ: ರಿಯಾನ್ ಪರಾಗ್ ವಿಶಿಷ್ಟ ಸಂಭ್ರಮಾಚರಣೆಗೆ ಫ್ಯಾನ್ಸ್ ಫಿದಾ
Advertisement
Advertisement
ರಾಜಸ್ಥಾನ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಧೋನಿ ಜೊತೆ ಇರುವ ಪರಾಗ್ ಅವರ ಪುಟ್ಟ ಬಾಲಕನ ಫೋಟೋ ಮತ್ತು ಇತ್ತೀಚಿನ ಚಿತ್ರವೊಂದನ್ನು ಸೇರಿಸಿ ಪೋಸ್ಟ್ ಮಾಡಿ, ನೀವು ವಿಕಸನಗೊಳ್ಳುತ್ತೀರಿ, ನೀವು ಕಲಿಯುತ್ತಿರಿ, ನೀವು ಬೆಳೆಯುತ್ತಿರಿ, ಧೋನಿಯೊಂದಿಗೆ ಫ್ಯಾನ್ ಬಾಯ್ ರಿಯನ್ ಪರಾಗ್ ಎಂದು ಎಂದು ಬರೆದುಕೊಂಡಿದೆ.
Advertisement
"You evolve, you learn, you grow." ???? pic.twitter.com/Kdc14oC7K7
— Rajasthan Royals (@rajasthanroyals) June 9, 2021
ಈ ಹಿಂದೆ ಐಪಿಎಲ್ನಲ್ಲಿ ಆಡುವಾಗ ಪರಾಗ್ ಈ ಫೋಟೋವನ್ನು ನೆನಪಿಸಿಕೊಂಡು ನಾನು 6 ವರ್ಷದ ಬಾಲಕನಾಗಿರುವಾಗ ಧೋನಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ. ಆದರೆ ಇದೀಗ ನಾನು ಧೋನಿಗೆ ಬೌಲಿಂಗ್ ಮಾಡುತ್ತೇನೆ. ಧೋನಿ ವಿರುದ್ಧ ಫೀಲ್ಡಿಂಗ್ ಮಾಡುತ್ತೇನೆ. ನಾನು ಬ್ಯಾಟಿಂಗ್ ಮಾಡುವಾಗ ವಿಕೆಟ್ ಹಿಂದೆ ಧೋನಿಯನ್ನು ಕಾಣುತ್ತೇನೆ ಎಂದು ಸಹ ಆಟಗಾರನೊಂದಿಗೆ ಸಂಭ್ರಮ ಹಂಚಿಕೊಂಡಿದ್ದರು. ಇದನ್ನೂ ಓದಿ: ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್
From Dhoni's fanboy to match winner: Riyan's beautiful IPL journey
From a viral picture with @msdhoni to his love for soft toys, @JUnadkat finds the innocent side of @ParagRiyan! By @Moulinparikh. @rajasthanroyals #RRvMI
Watch the full video – https://t.co/UAnhLj501L pic.twitter.com/xC43Wn5ToA
— IndianPremierLeague (@IPL) April 21, 2019
ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2019ರಲ್ಲಿ ಪಾದಾರ್ಪಣೆ ಮಾಡಿದರು ಆ ಬಳಿಕ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2019ರಿಂದ 2021ರ ವರೆಗೆ ಐಪಿಎಲ್ನಲ್ಲಿ ರಾಜಸ್ಥಾನ ತಂಡದ ಪರ ಒಟ್ಟು 26 ಪಂದ್ಯಗಳನ್ನು ಆಡಿ 324 ರನ್ ಮತ್ತು 3 ವಿಕೆಟ್ ಪಡೆದು ಭರವಸೆಯ ಯುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.