– ಜೋಡಿಗಳಿಗೆ ಸೇಫ್ ಹೌಸ್ನಲ್ಲಿ ರಕ್ಷಣೆ
ನವದೆಹಲಿ: ಅಂತರ್ಜಾತಿ ವಿವಾಹವಾಗುವ ಮತ್ತು ವಿವಾಹವಾಗುವ ಯೋಜನೆಯನ್ನು ಹೊಂದಿರುವ ಜೋಡಿಗಳ ರಕ್ಷಣೆ, ಹಿತದೃಷ್ಟಿಯಿಂದ ದೆಹಲಿ ಸರ್ಕಾರ ಸುತ್ತೋಲೆಯನ್ನ ಹೊರಡಿಸಿದೆ.
Advertisement
ಅಂತರ್ಜಾತಿ ಅಥವಾ ಅಂತರ್ ಧರ್ಮ ವಿವಾಹವಾದ ದಂಪತಿತಬ್ಬನ ಕಿರುಕುಳದಿಂದ ರಕ್ಷಿಸಲು ದೆಹಲಿ ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗಿದೆ. ಈ ವಲಯಗಳ ಜವಾಬ್ದಾರಿಯನ್ನು ಪೊಲೀಸ್ ಉಪ ಆಯುಕ್ತರು ವಹಿಸಲಿದ್ದಾರೆ.
Advertisement
Advertisement
ಅಂತರ್ಜಾತಿ ವಿವಾಹದ ದಂಪತಿಗಳು ತಮ್ಮ ಕುಟುಂಬಗಳಿಂದ ಅಥವಾ ಸ್ಥಳೀಯ ಸಮುದಾಯದಿಂದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ದಂಪತಿಗಳಿಗೆ ಸರ್ಕಾರ ಸುರಕ್ಷಿತ ಮನೆಯಲ್ಲಿ (ಸೇಫ್ ಹೌಸ್) ವಸತಿ ಕಲ್ಪಿಸಲಾಗುವುದು ಎಂದು ಎಸ್ಒಪಿ ಸೂಚಿಸುತ್ತದೆ. ದೆಹಲಿ ಮಹಿಳಾ ಆಯೋಗದ 181 ಟೋಲ್-ಫ್ರೀ ಮಹಿಳಾ ಸಹಾಯವಾಣಿ ಕರೆ ಮಾಡಿ ತಿಳಿಸಬಹುದಾಗಿದೆ. ದಂಪತಿಗಳಿಗೆ ನೆರವು ನೀಡವಲ್ಲಿ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತದೆ.
Advertisement
ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ ಎಸ್ಒಪಿ ದೂರವಾಣಿ ಕರೆ ಮಾಡುವ ದಂಪತಿಯ ತೊಂದರೆ ಕರೆಗಳನ್ನು ನಿರ್ವಹಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಂಪತಿಗಳಿಂದ ಪಡೆದ ದೂರನ್ನು ಡಿಸಿಪಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ರವಾನಿಸುತ್ತಾರೆ. ದಂಪತಿಗಳಿಗೆ ಸುರಕ್ಷಿತ ಮನೆಯಲ್ಲಿ ಉಳಿಯುವುದನ್ನು ಎಸ್ಒಪಿ ಸೂಚಿಸುತ್ತದೆ. ದಂಪತಿಗೆ ಸಾಕಷ್ಟು ಭದ್ರತೆ ನೀಡಲಾಗುತ್ತದೆ. ಒಂದುವೇಳೆ ದಂಪತಿಗಳು ಸುರಕ್ಷಿತ ಮನೆಯಲ್ಲಿ ಉಳಿಯಲು ಬಯಸದಿದ್ದರೆ, ಬೆದರಿಕೆ ಗ್ರಹಿಕೆ ದೂರಿನ ಆಧಾರದ ಮೇಲೆ ಅವರಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.