ನವದೆಹಲಿ: ಅಂತರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಏವಿಯೇಷನ್ ವಾಚ್ಡಾಗ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ಶುಕ್ರವಾರ ತಿಳಿಸಿದೆ.
Advertisement
ಭಾರತಕ್ಕೆ ಹೊರಗಿನಿಂದ ಬರುವ ಪ್ರಯಾಣಿಕರ ಸೇವೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಸುತ್ತೋಲೆಯನ್ನು 2021ರ ಮಾರ್ಚ್ 31ರವರೆಗೂ 2359 ಗಂಟೆಗಳ ಕಾಲ ವಿಸ್ತರಿಸಲಾಗಿದೆ ಹಾಗೂ ಈ ಸುತ್ತೋಲೆಗಳು ಕಾರ್ಗೋ ಕಾರ್ಯಚರಣೆ ನಡೆಸುತ್ತಿರುವ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ವಾಯುಯಾನ ಸಂಸ್ಥೆ ತಿಳಿಸಿದೆ. ಆದರೆ ಕೆಲವು ಆಯ್ದ ಮಾರ್ಗಗಳಿಗೆ ಅಂತರಾಷ್ಟ್ರೀಯ ವಿಮಾನಗಳಿಗೆ ಸಂಚಾರಿಸಲು ನಿಧಾನವಾಗಿ ಅನುಮತಿ ನೀಡಬಹುದು.
Advertisement
Advertisement
2020ರ ಮಾರ್ಚ್ನಲ್ಲಿ ಕೊರೊನಾ ಸಾಂಕ್ರಮಿಕ ರೋಗದಿಂದ ಅಂತರಾಷ್ಟ್ರೀಯ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಕೆಲವು ತಿಂಗಳ ಬಳಿಕ ಕೆಲವು ನಿರ್ಬಂಧಗಳ ಆಧಾರದ ಮೇಲೆ ವಿಮಾನ ಸಂಚಾರ ಆರಂಭಗೊಂಡಿದ್ದು, ಆರ್ಥಿಕ ಬಿಕ್ಕಟ್ಟು ಇದೀಗ ಕೊಂಚ ಸುಧಾರಿಸಿದೆ.
Advertisement
ಕಳೆದ ವರ್ಷ ಡಿಸೆಂಬರ್ನಲ್ಲಿ ಯುರೋಪಿನಲ್ಲಿ ಕೊರೊನಾ ವೈರಸ್ ಹೊಸ ತಳಿ ಪತ್ತೆಯಾಗಿದ್ದರಿಂದ ಅಂತರಾಷ್ಟ್ರೀಯ ವಿಮಾನಗಳ ಮೇಲೆ ನಿಷೇಧ ಹೇರಲಾಗಿತ್ತು. ಬಳಿಕ ನಿಷೇಧವನ್ನು ರದ್ದುಗೊಳಿಸಲಾಗಿತ್ತು.