– ಚಾಕ್ಲೇಟ್ ಖರೀದಿಸಲು ಬಂದಿದ್ದ ಬಾಲಕಿ
– ಆರೋಪಿ ವಿರುದ್ಧ ದೂರು ದಾಖಲು
ಗಾಂಧಿನಗರ: 55 ವರ್ಷದ ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಯ ಕೆನ್ನೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ ವಿಲಕ್ಷಣ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ.
Advertisement
ಘಟನೆಗೆ ಸಂಬಂಧಿಸಿದಂತೆ ಆರೊಪಿ ವಿರುದ್ಧ ಅಹಮ್ಮದಾಬಾದ್ ಪೊಲೀಸ್ ಠಾಣೆಯಲದಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
Advertisement
ಬಾಲಕಿ ಬುಧವಾರ ಮಧ್ಯಾಹ್ನ ಕಿರಾಣಿ ಅಂಗಡಿಗೆ ತೆರಳಿದ್ದಳು. ಈ ವೇಳೆ ನೆರೆಮನೆಯವ ಎನ್ನಲಾದ ವ್ಯಕ್ತಿ ಆಕೆಯನ್ನು ಅಂಗಡಿಯೊಳಗೆ ತಳ್ಳಿ ಕೆನ್ನೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
Advertisement
ನನ್ನ ಮಗಳು ಕಿರಾಣಿ ಅಂಗಡಿಗೆ ಚಾಕ್ಲೇಟ್ ತೆಗೆದುಕೊಂಡು ಬರಲೆಂದು ಹೋಗಿದ್ದಳು. ಈ ವೇಳೆ ಮಾಲೀಕ ಆಕೆಯನ್ನು ಅಂಗಡಿಯೊಳಗೆ ಬಲವಂತವಾಗಿ ಎಳೆದು ಆಕೆಗೆ ಕಚ್ಚಿದ್ದಾನೆ. ಪರಿಣಾಮ ಮಗುವಿನ ಕೆನ್ನೆಗೆ ಗಾಯಗಳಾಗಿವೆ ಎಂದು ಮಾಧ್ಯಮವೊಂದಕ್ಕೆ ಬಾಲಕಿಯ ತಂದೆ ತಿಳಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಬಾಲಕಿಯ ತಂದೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.