– ಪೊಲೀಸರಿಂದ ಮಹಿಳೆಯ ಬಂಧನ
ಪಾಟ್ನಾ: ಪೊಲೀಸ್ ಅಧಿಕಾರಿಯ ಮುಖದ ಮೇಲೆ ಟೀ ಚೆಲ್ಲಿದ್ದಕ್ಕೆ ಮಹಿಳಾ ವ್ಯಾಪಾರಿಯನ್ನು ಪೊಲಿಸರು ಬಂಧಿಸಿದ್ದಾರೆ.
ಈ ಘಟನೆ ಬಿಹಾರದ ಮುಜಾಫರ್ ನಗರದಲ್ಲಿ ನಡೆದಿದೆ. ಮಹಿಳೆಯನ್ನು ಸರಿತಾ ದೇವಿ ಎಂದು ಗುರುತಿಸಲಾಗಿದ್ದು, ಈಕೆ ರಸುಲ್ಪುರ ಸಲೀಂ ಗ್ರಾಮದ ನಿವಾಸಿ. ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ(ಎಸ್ಕೆಎಂಸಿಹೆಚ್) ಆವರಣದಲ್ಲಿ ಸರಿತಾ ಟೀ ಮಾರಾಟ ಮಾಡುತ್ತಿದ್ದಳು. ಭಾನುವಾರ ಸಂಜೆ ಇಬ್ಬರು ಸಹಾಯಕರೊಂದಿಗೆ ಪೊಲೀಸ್ ಅಧಿಕಾರಿ ಸುಮನ್ ಝಾ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಕಾಲೇಜು ಆವರಣದಿಂದ ಟೀ ಶಾಪ್ ತೆರವುಗೊಳಿಸುವಂತೆ ತಾಕೀತು ಮಾಡಿದ್ದಾರೆ.
Advertisement
Advertisement
ಘಟನೆಯ ಬಳಿಕ ಝಾ ಅವರು ಮಹಿಳೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಹೀಗಾಗಿ ಆರೋಪಿ ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಹೆಚ್ಒ ಸುನಿಲ್ ರಝಾಕ್ ತಿಳಿಸಿದ್ದಾರೆ.
Advertisement
ಘಟನೆ ಸಂಬಂಧ ಮಹಿಳೆಯನ್ನು ಬಂಧಿಸಿದ್ದು, ತಲೆಮರೆಸಿಕೊಂಡ ಮತ್ತಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ. ಶೀಘ್ರವೇ ಅವರನ್ನು ಕೂಡ ಬಂಧಿಸಲಾಗುವುದು ಎಂದು ಝಾ ಹೇಳಿದ್ದಾರೆ. ಬಿಸಿಬಿಸಿ ಟೀ ಮೈಮೇಲೆ ಬಿದ್ದಿದ್ದರಿಂದ ಝಾ ಮೇಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದ್ಯ ಅವರ ಸ್ಥಿತಿ ಸುಧಾರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement
ಕಾಲೇಜು ಆವರಣದಲ್ಲಿ ಅಕ್ರಮವಾಗಿ ಟೀ ಸ್ಟಾಲ್ ಹಾಗೂ ಸ್ನ್ಯಾಕ್ಸ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಾವು ದಾಳಿ ಮಾಡಿ ಮಹಿಳೆಯನ್ನು ಪ್ರಶ್ನಿಸಿದೆ. ಇದರಿಂದ ಆಕೆ ಕೋಪಗೊಂಡಳು. ಅಲ್ಲದೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ನಂತರ ಬಿಸಿಬಿಸಿ ಟೀ ಅನ್ನು ನನ್ನ ಮುಖಕ್ಕೆ ಎರಚಿದಳು. ಈ ವೇಳೆ ನಾನು ಕೆಳಗೆ ಬಿದ್ದೆ. ಕೂಡಲೇ ಕಾಲೇಜು ಆವರಣದಲ್ಲಿದ್ದ ಸೆಕ್ಯುರಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಎಂದು ಝಾ ನಡೆದ ಘಟನೆಯನ್ನು ವಿವರಿಸಿದ್ದಾರೆ.