ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಟೀಕೆ ಮಾಡಿದ್ದಕ್ಕೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಟ್ವಿಟ್ಟರ್ನಲ್ಲಿ ಸಿದ್ದರಾಮಯ್ಯನವರಿಗೆ ಟ್ವೀಟೇಟ್ ನೀಡಿದ್ದಾರೆ.
ಚೀನಾ ಎರಡು ಕಿಲೋಮೀಟರ್ ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಚೀನಾ ಗಡಿ ಒಳಗೆ ನುಸುಳಿದೆ ಎಂದು ನೋಡಿ ಬಂದಿದ್ದೀರಾ? ಒಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಫಸ್ಟ್ ಹ್ಯಾಂಡ್ ಇನ್ಫಾರ್ಮೆಶನ್ ಇರುತ್ತದೆಂಬುದು ಸಾಮಾನ್ಯ ಬುದ್ಧಿ ಇದ್ದವರಿಗೂ ತಿಳಿಯುತ್ತದೆ.
Advertisement
ಚೀನಾ ಎರಡು ಕಿಲೋಮೀಟರ್ ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೆ ಎಂದು @siddaramaiah ಕೇಳಿದ್ದಾರೆ. ಚೀನಾ ಗಡಿ ಒಳಗೆ ನುಸುಳಿದೆ ಎಂದು ನೋಡಿ ಬಂದಿದ್ದೀರಾ? ಒಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ First Hand Information ಇರುತ್ತದೆಂಬುದು ಸಾಮಾನ್ಯ ಬುದ್ಧಿ ಇದ್ದವರಿಗೂ ತಿಳಿಯುತ್ತದೆ. https://t.co/cQYYXMugag
— C T Ravi ???????? ಸಿ ಟಿ ರವಿ (@CTRavi_BJP) July 7, 2020
Advertisement
ಮಹಾರಾಷ್ಟ್ರದ ವಿಪಕ್ಷ ನಾಯಕ ಶ್ರೀ ದೇವೇಂದ್ರ ಫಡ್ನವಿಸ್ ಆಸ್ಪತ್ರೆ ದತ್ತು ತೆಗೆದುಕೊಳ್ಳುವ ಹಾಗೂ ನೇರವಾಗಿ ಆಸ್ಪತ್ರೆಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡಿದರು. ನಿಮ್ಮ ಗ್ರೌಂಡ್-ನಲ್ಲಿ ಎಲ್ಲಿ ಕೆಲಸ ಮಾಡಿದ್ದೀರಿ? ನಿಮ್ಮದು ಕೇವಲ ಟೀಕೆ ಮಾತ್ರ.
Advertisement
ಮಹಾರಾಷ್ಟ್ರದ ವಿಪಕ್ಷ ನಾಯಕ ಶ್ರೀ ದೇವೇಂದ್ರ ಪಡ್ನವಿಸ್ ಆಸ್ಪತ್ರೆ ದತ್ತು ತೆಗೆದುಕೊಳ್ಳುವ ಹಾಗೂ ನೇರವಾಗಿ ಆಸ್ಪತ್ರೆಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡಿದರು. ನಿಮ್ಮ ಗ್ರೌಂಡ್-ನಲ್ಲಿ ಎಲ್ಲಿ ಕೆಲಸ ಮಾಡಿದ್ದೀರಿ? ನಿಮ್ಮದು ಕೇವಲ ಟೀಕೆ ಮಾತ್ರ. https://t.co/1YYEFAc4IR
— C T Ravi ???????? ಸಿ ಟಿ ರವಿ (@CTRavi_BJP) July 7, 2020
Advertisement
ತಾನು ಕಳ್ಳ, ಪರರ ನಂಬ. ನಿಮಗೆ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಇರುವಂತೆ ಬಿಎಲ್ ಸಂತೋಷ್ ಅವರಿಗೆ ಒಳಗೊಂದು ಹೊರಗೊಂದು ಇಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ಮಾಡುತ್ತಾರೆ. ತಪ್ಪು ಮಾಡಿದಾಗ ತಿಳಿಹೇಳುತ್ತಾರೆ. ಬಿಎಲ್ ಸಂತೋಷ್ ಅವರಂತ ಬದುಕನ್ನೇ ರಾಷ್ಟ್ರಕ್ಕೆ ಸಮರ್ಪಿಸಿಕೊಂಡವರಿಗೆ ನಿಮಗಿರುವ ಸಣ್ಣ ಬುದ್ಧಿ ಇರಲ್ಲ ಬಿಡಿ.
ತಾನು ಕಳ್ಳ, ಪರರ ನಂಬ…
ನಿಮಗೆ, @KPCCPresident ಬಗ್ಗೆ ಇರುವಂತೆ @blsanthosh ಅವರಿಗೆ ಒಳಗೊಂದು ಹೊರಗೊಂದು ಇಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ಮಾಡುತ್ತಾರೆ. ತಪ್ಪು ಮಾಡಿದಾಗ ತಿಳಿಹೇಳುತ್ತಾರೆ. @blsanthosh
ಅವರಂತ ಬದುಕನ್ನೇ ರಾಷ್ಟ್ರಕ್ಕೆ ಸಮರ್ಪಿಸಿಕೊಂಡವರಿಗೆ ನಿಮಗಿರುವ ಸಣ್ಣ ಬುದ್ಧಿ ಇರಲ್ಲ ಬಿಡಿ. https://t.co/2s3FrsVvTj
— C T Ravi ???????? ಸಿ ಟಿ ರವಿ (@CTRavi_BJP) July 7, 2020
ಸಿದ್ದರಾಮಮಯ್ಯ ಟೀಕೆ ಏನು?
ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್.ಎಸ್ ಎಸ್ ನಾಯಕ ಬಿಎಲ್ಸಂತೋಷ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ.
ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ಬಿಎಲ್ ಸಂತೋಷ್ ಕೇಳಿದ್ದಾರೆ, ಅದನ್ನು ಕೊಡೋಣ. ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ.
.@blsanthosh has questioned if I, as a Leader of Opposition, had meetings with the officers regarding #Covid19.
I would be happy to share the details to Santosh G if he comes to my office at Vidhana Soudha.
1/2 pic.twitter.com/y69MruJD44
— Siddaramaiah (@siddaramaiah) July 7, 2020
ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಸಂತೋಷ್ ಅವರೇನು ರಕ್ಷಣಾ ಸಚಿವರೇ? ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿ ನರೇಂದ್ರ ಮೋದಿ. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ ಹಿಂದೆ ಸರಿದದ್ದು ಎನ್ನೂವುದನ್ನು ತಿಳಿಸಲಿ.
.@blsanthosh has asked for the audit report of ₹ 1 Cr contributed by @INCKarnataka during lockdown. We will be more than willing to provide the details.
But our Indians, who had contributed their hard earned money, are even more eager to see the audit report of PMCaresFund.
2/2
— Siddaramaiah (@siddaramaiah) July 7, 2020
ಬಿಎಲ್ ಸಂತೋಷ್ ಅವರೇ ಯಡಿಯೂರಪ್ಪನವರಿಗೆ ನೀವು ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಭಾಸ್ಗಿರಿ ಕೊಡಬಹುದೇನೋ ?