ಮೈಸೂರು: ಬೇಸಿಗೆ ಬಿಸಿಲಿಗೆ ತತ್ತರಿಸುತ್ತಿರುವ ಪ್ರಾಣಿಗಳನ್ನು ತಂಪಾಗಿಸಲು ಜಿಲ್ಲೆಯ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ಹೊಸ ಪ್ಲಾನ್ ಮಾಡಿದ್ದಾರೆ. ಬಿಸಿಲಿನ ಬೇಗೆಯಿಂದ ಪ್ರಾಣಿಗಳನ್ನು ಕೂಲ್ ಆಗಿ ಇಡಲು ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ.
ಹೌದು, ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಒಂದು ಪ್ರಸಿದ್ಧ ಸ್ಥಳ. ಇಲ್ಲಿ ಪ್ರತಿ ದಿನವು ಸಾವಿರಾರು ಪ್ರವಾಸಿಗರು ಆಗಮಿಸಿ, ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಾರೆ. ಸದ್ಯ ಬೇಸಿಗೆ ಬೀಸಿಲು ತುಸು ಜೋರಾಗಿಯೇ ಇರುವುದರಿಂದ ಪ್ರಾಣಿಗಳಿಗೆ ಬಿಸಿಲಿನ ತಾಪ ತಪ್ಪಿಸಲು ಮೃಗಾಲಯ ಸಿಬ್ಬಂದಿ ನೂತನ ಪ್ಲಾನ್ ಮಾಡಿದ್ದಾರೆ. ಸ್ಪ್ರಿಂಕ್ಲರ್ ಮೂಲಕ ಪ್ರಾಣಿಗಳಿಗೆ ನೀರು ಸಿಂಪಡಣೆ ಮಾಡುತ್ತಿದ್ದು, ನೀರಿನಲ್ಲಿ ಚಿನ್ನಾಟವಾಡ್ತಾ ಪ್ರಾಣಿಗಳು ಕೊಂಚ ಬೇಸಿಲಿನ ಬೇಗೆಯಿಂದ ರಿಲ್ಯಾಕ್ಸ್ ಪಡೆಯುತ್ತಿವೆ.
Advertisement
Advertisement
ನೀರು ಸಿಂಪಡಣೆ ಜೊತೆಗೆ ಪ್ರಾಣಿಗಳಿಗೆ ದ್ರವ ಆಹಾರಗಳನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಕರಡಿಗಳಿಗೆ ಐಸ್‍ಬಾಕ್ಸ್ ನಲ್ಲಿ ಕಲ್ಲಂಗಡಿ ವಿತರಣೆ, ಚಿಂಪಾಜಿಗಳಿಗೆ ಎಳನೀರು ವಿತರಣೆ, ಹೀಗೆ ಎಲ್ಲಾ ಪ್ರಾಣಿಗಳಿಗು ನೀರಿನ ಅಂಶ ಇರುವ ಆಹಾರವನ್ನು ಇಲ್ಲಿ ನೀಡಲಾಗುತ್ತಿದೆ. ಈ ಮೂಲಕ ಪ್ರಾಣಿಗಳು ಕೂಲ್ ಆಗಿರುವಂತೆ ಮೃಗಾಲಯ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv