ನವದೆಹಲಿ: ಆನ್‌ಲೈನ್ ಪ್ರಮುಖ ಆಹಾರ ವಿತರಣಾ ವೇದಿಕೆ ಆಗಿರುವ ಝೊಮ್ಯಾಟೊ (Zomato) ಸಹ ಸಂಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಗುಂಜನ್ ಪಾಟಿದಾರ್ (Gunjan Patidar) ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಝೊಮ್ಯಾಟೊ ಸ್ಥಾಪನೆಯಾದ ಮೊದಲ ಕೆಲ ಉದ್ಯೋಗಿಗಳಲ್ಲಿ (Employees) ಪಾಟಿದಾರ್ ಸಹ ಒಬ್ಬರು. ಅಲ್ಲದೇ ಪಾಟಿದಾರ್ ಕಂಪನಿಗಾಗಿ ಕೋರ್ ಟೆಕ್ ಸಿಸ್ಟಮ್‌ಗಳನ್ನ ನಿರ್ಮಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ತಾಂತ್ರಿಕ ಕಾರ್ಯವನ್ನು ಮುನ್ನಡೆಸಿದ್ದಾರೆ. ಝೊಮ್ಯಾಟೊ ನಿರ್ಮಾಣಕ್ಕೆ ಅವರ ಕೊಡುಗೆ ಅತ್ಯಮೂಲ್ಯವಾಗಿದೆ. ಆದ್ರೆ ಅವರು ರಾಜೀನಾಮೆಗೆ ಕಾರಣವನ್ನ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಆರ್ಡರ್ ಮಾಡಿದ 10 ನಿಮಿಷಕ್ಕೆ ನಿಮ್ಮ ಮನೆ ಬಾಗಿಲಿಗೆ ಫುಡ್ ಡೆಲಿವರಿ- ಝೊಮ್ಯಾಟೊ ಹೊಸ ಫೀಚರ್
ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಮತ್ತೊಬ್ಬ ಸಹ-ಸಂಸ್ಥಾಪಕರಾಗಿದ್ದ ಮೋಹಿತ್ ಗುಪ್ತಾ (Mohit Gupta) ರಾಜೀನಾಮೆ ನೀಡಿದ್ದರು. ನಾಲ್ಕೂವರೆ ವರ್ಷಗಳ ಹಿಂದೆ ಝೊಮ್ಯಾಟೊಗೆ ಸೇರಿದ್ದ ಗುಪ್ತಾ 2020ರಲ್ಲಿ ಸಿಇಒ (CEO) ಸ್ಥಾನದಿಂದ ಸಹ ಸಂಸ್ಥಾಪಕರಾದರು. ಇದನ್ನೂ ಓದಿ: ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!
ಅಲ್ಲದೇ ಕಳೆದ ವರ್ಷ ನೂತನ ಉಪಕ್ರಮಗಳ ಮುಖ್ಯಸ್ಥ ರಾಹುಲ್ ಗಂಜೂ, ಮಾಜಿ ಅಧ್ಯಕ್ಷ ಸಿದ್ಧಾರ್ಥ್ ಝವಾರ್ ಸೇರಿ ಹಲವು ಉನ್ನತ ಮಟ್ಟದ ಅಧಿಕಾರಿಗಳು ಝೊಮ್ಯಾಟೊದಿಂದ ನಿರ್ಗಮಿಸಿದ್ದಾರೆ.