ಧಾರವಾಡ: ಕಳೆದ ರಾತ್ರಿಯಿಂದ ಧಾರವಾಡದಲ್ಲಿ ಮನೆ ಮನೆಗೆ ಫುಡ್ ಡಿಲೆವರಿ ಕೊಡುವ ಝೊಮ್ಯಾಟೋ ಆ್ಯಪ್ ಬಂದ್ ಆಗಿದೆ. ಝೊಮ್ಯಾಟೋದಲ್ಲಿ ಡೆಲಿವರಿ ಕೆಲಸ ಮಾಡುವ ಧಾರವಾಡದ ಎಲ್ಲ ಸಿಬ್ಬಂದಿ ಆ್ಯಪ್ ಬಂದ್ ಮಾಡಿ ಪ್ರತಿಭಟನೆ ಮಾಡುತಿದ್ದಾರೆ.
Advertisement
ಅತ್ಯಂತ ದೂರದಲ್ಲಿರುವ ಮನೆಗಳಿಗೆ ಫುಡ್ ಡೆಲಿವರಿ ಮಾಡಲು ಆಗುವುದಿಲ್ಲ. ಪೆಟ್ರೋಲ್ ದರ ಹೆಚ್ಚಳವಾಗಿದ್ದರಿಂದ ನಮಗೆ ಏನೂ ಹಣ ಉಳಿಯುತ್ತಿಲ್ಲ, ಹೀಗಾಗಿ ಡೆಲಿವರಿ ಹಣ ಹೆಚ್ಚು ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಫೋಟೋ ಪಾಲಿಟಿಕ್ಸ್-ಮೋದಿ ಭಾವಚಿತ್ರ ಅಳವಡಿಕೆಗೆ ಜೆಡಿಎಸ್ ವಿರೋಧ
Advertisement
Advertisement
ಪ್ರತಿ ದಿನ 200 ರೂಪಾಯಿ ಪೆಟ್ರೋಲಿಗೆ ಹೋಗುತ್ತಿದ್ದು, ನಮಗೆ ಕೇವಲ 100 ರೂಪಾಯಿ ಮಾತ್ರ ಉಳಿಯುತ್ತಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಅಲ್ಲದೇ ಹೊಸದಾಗಿ ಝೊಮ್ಯಾಟೋಗೆ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿರುವವರು ನಮಗೆ ಹೆಚ್ಚಿನ ಡೆಲಿವರಿ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಕಂಪನಿ ಹೆಚ್ಚಿನ ಹಣ ಕೊಟ್ಟರೆ ಮಾತ್ರ ಫುಡ್ ಡೆಲಿವರಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.