ನವದೆಹಲಿ: ಮುಸ್ಲಿಂ ವ್ಯಕ್ತಿ ಆಹಾರವನ್ನು ತಂದಿದ್ದಕ್ಕೆ ಆರ್ಡರ್ ಕ್ಯಾನ್ಸಲ್ ಮಾಡಿದ ಸುದ್ದಿ ಇದೀಗ ದೇಶದೆಲ್ಲಡೆ ಚರ್ಚೆಯಾಗುತ್ತಿದೆ. ಈ ನಡುವೆ ನೋವಾಗಿದೆ, ನಾನು ಏನೂ ಮಾಡಬಹುದು, ನಾನು ಬಡವ ಎಂದು ಮುಸ್ಲಿಂ ಡೆಲಿವರಿ ಬಾಯ್ ಫಯಾಜ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫಯಾಜ್, ಆಹಾರವನ್ನು ಆರ್ಡರ್ ಮಾಡಿದ ವ್ಯಕ್ತಿಯ ವಿಳಾಸ ಕೇಳಲು ನಾನು ಅವರಿಗೆ ಕರೆ ಮಾಡಿದೆ. ಆದರೆ ಅವರು ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ ಎಂದು ಹೇಳಿದ್ದರು. ಬಳಿಕ ಕಾರಣ ತಿಳಿದ ಮೇಲೆ ನನಗೆ ಬಹಳ ನೋವಾಗಿದೆ. ಆದರೆ ನಾನು ಏನೂ ಹೇಳಲು ಸಾಧ್ಯ. ಜನರು ಹೇಗೆ ಹೇಳುತ್ತಾರೋ ಹಾಗೆ. ನಾವು ಈ ಬಗ್ಗೆ ಏನೂ ಮಾಡಲು ಸಾಧ್ಯ. ನಾನು ಬಡವ ಹಾಗಾಗಿ ಇದನ್ನು ಸಹಿಸಿಕೊಳ್ಳಬೇಕು ಎದು ಹೇಳಿದ್ದಾರೆ.
Advertisement
Advertisement
ಆಗಿದ್ದೇನು?
ಮಂಗಳವಾರ ಅಮಿತ್ ಶುಕ್ಲಾ ಎಂಬರು ತಮ್ಮ ಆರ್ಡರ್ ಕ್ಯಾನ್ಸಲ್ ಮಾಡಿ ಝೊಮ್ಯಾಟೊ ಆ್ಯಪ್ ಅನ್ ಇನ್‍ಸ್ಟಾಲ್ ಮಾಡಿಕೊಂಡು ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಝೊಮ್ಯಾಟೊ ಆರ್ಡರ್ ನಾನು ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗುತ್ತಿತ್ತು. ನಾನು ಡೆಲಿವರಿ ಬಾಯ್ ನನ್ನು ಬದಲಿಸಿ ಎಂದು ಕೇಳಿದ್ದಕ್ಕೆ ಆಗಲ್ಲ ಎಂದಿದ್ದರು. ಕೊನೆಗೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹಣ ರಿಫಂಡ್ ಮಾಡಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿತು. ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ರಿಫಂಡ್ ಬೇಕಾಗಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಅಮಿತ್ ಟ್ವಿಟ್ಟರ್ ನಲ್ಲಿ ಝೊಮ್ಯಾಟೊಗೆ ಟ್ಯಾಗ್ ಮಾಡಿಕೊಂಡಿದ್ದರು.
Advertisement
https://twitter.com/ZomatoIN/status/1156429449258250240?ref_src=twsrc%5Etfw%7Ctwcamp%5Etweetembed%7Ctwterm%5E1156429449258250240%7Ctwgr%5E363937393b636f6e74726f6c&ref_url=https%3A%2F%2Fwww.indiatoday.in%2Ftrending-news%2Fstory%2Fcustomer-cancels-zomato-order-for-sending-non-hindu-delivery-boy-their-classy-reply-wins-internet-1575491-2019-07-31
Advertisement
ಮತ್ತೊಂದು ಟ್ವೀಟ್‍ನಲ್ಲಿ ಝೊಮ್ಯಾಟೊ ಆ್ಯಪ್ ಅನ್ ಇನ್‍ಸ್ಟಾಲ್ ಬಗ್ಗೆ ಹೇಳಿಕೊಂಡಿರುವ ಅಮಿತ್, ನಾನು ಆ ವ್ಯಕ್ತಿಯಿಂದ ಆಹಾರ ಸ್ವೀಕರಿಸಲ್ಲ ಎಂದು ಹೇಳುತ್ತಿದ್ದರೂ ಕಂಪನಿ ನನ್ನ ಮೇಲೆ ಒತ್ತಡ ಹಾಕುತ್ತಿದೆ. ಆರ್ಡರ್ ಕ್ಯಾನ್ಸಲ್ ಮಾಡಿದ್ರೂ ರಿಫಂಡ್ ಮಾಡಿಲ್ಲ. ಈ ಸಂಬಂಧ ನಮ್ಮ ವಕೀಲರ ಬಳಿ ಚರ್ಚಿಸುತ್ತೇನೆ ಎಂದು ಹೇಳುವ ಮೂಲಕ ಕೋರ್ಟ್ ಮೊರೆ ಹೋಗುವ ಮಾಹಿತಿ ನೀಡಿದ್ದರು. ಈ ಟ್ವೀಟಿಗೆ ಪ್ರತಿಕ್ರಿಯಿಸಿರುವ ಝೊಮ್ಯಾಟೊ, ಆಹಾರಕ್ಕೆ ಯಾವುದೇ ಧರ್ಮವಿರಲ್ಲ. ಆಹಾರವೇ ಒಂದು ಧರ್ಮ ಎಂದು ಚಿಕ್ಕದಾಗಿ ಬರೆದು ಖಡಕ್ ತಿರುಗೇಟು ನೀಡಿತ್ತು.
We are proud of the idea of India – and the diversity of our esteemed customers and partners. We aren’t sorry to lose any business that comes in the way of our values. ???????? https://t.co/cgSIW2ow9B
— Deepinder Goyal (@deepigoyal) July 31, 2019
ಈ ಕುರಿತು ಪ್ರತಿಕ್ರಿಯಿಸಿರುವ ಝೊಮ್ಯಾಟೊ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾರ್ಟನರ್ ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯಲ್ಲಿ ದುಃಖ ಆಗಲಾರದು ಎಂದು ಬರೆದು ಕೊನೆಗೆ ತ್ರಿವರ್ಣ ಧ್ವಜದ ಟಿಕ್ಕರ್ ಹಾಕಿಕೊಂಡಿದ್ದಾರೆ.
https://twitter.com/UberEats_IND/status/1156552511509024768
ಭಾರೀ ಚರ್ಚೆ: ಈಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದ್ದು ಈ ಹಿಂದೆ ವಾಜಿದ್ ಎಂಬವರು ಹಲಾಲವಲ್ಲದ ಆಹಾರ ಕಳುಹಿಸಿದ್ದಕ್ಕೆ ನಾನು ಈ ಆಹಾರ ಸ್ವೀಕರಿಸುವುದಿಲ್ಲ ಎಂದಿದ್ದರು. ಇದಕ್ಕೆ ಝೊಮ್ಯಾಟೋ ನಿಮ್ಮ ಆರ್ಡರ್ ನಂಬರ್ ಕಳುಹಿಸಿ ಎಂದು ಕೇಳಿಕೊಂಡಿತ್ತು. ಈ ವಿಚಾರವನ್ನು ಪ್ರಸ್ತಾಪಿಸಿ ಜನ ಒಂದು ಧರ್ಮದವರಿಗೆ ಈ ರೀತಿ, ಇನ್ನೊಂದು ಧರ್ಮದವರಿಗೆ ಈ ರೀತಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಝೂಮ್ಯಾಟೋದ ನಿರ್ಧಾರಕ್ಕೆ ಉಬರ್ ಈಟ್ಸ್ ಬೆಂಬಲ ನೀಡಿದೆ. “ಆಹಾರಕ್ಕೆ ಯಾವುದೇ ಧರ್ಮವಿರಲ್ಲ. ಆಹಾರವೇ ಒಂದು ಧರ್ಮ” ಎಂದು ಬರೆದಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ನಿಮ್ಮ ನಿರ್ಧಾರ ಪರ ಇದ್ದೇವೆ ಎಂದು ಹೇಳಿಕೊಂಡಿದೆ.
#boycottzomato Asking for Halal Meat is Fundamental Right but Asking for a Hindu Rider is Bigotry.
Hail the Secular Logic.
Am going to uninstall @ZomatoIN
For it's double standard #IStandWithAmit#IStandWithAmit#boycottzomato pic.twitter.com/95kZUhfmq7
— Sunny Saini (@sunny2388400) August 1, 2019