ನವದೆಹಲಿ: ಆರ್ಡರ್ ಮಾಡಿದರೆ ತಡವಾಗಿ ಫುಡ್ ಡೆಲಿವರಿ ಮಾಡ್ತಾರೆ ಅಂತ ಡೆಲಿವರಿ ಬಾಯ್ಸ್ ಮೇಲೆ ಗ್ರಾಹಕರು ಜಗಳಕ್ಕೆ ಬೀಳುವುದು, ಹಣ ಕೊಡದೇ ಸತಾಯಿಸುವಂತಹ ಹಲವಾರು ಪ್ರಕರಣಗಳನ್ನು ಗಮನಿಸಿದ್ದೇವೆ. ಇಂತಹ ಸನ್ನಿವೇಶಗಳಿಗೆ ಅಂತ್ಯವಾಡಬೇಕು ಎಂಬ ದೃಷ್ಟಿಯಿಂದ ಝೊಮ್ಯಾಟೊ (ZOMATO) ಹೊಸ ಯೋಜನೆಯೊಂದನ್ನು ರೂಪಿಸಿದೆ.
ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೊ, ಆರ್ಡರ್ ಮಾಡಿದ ಕ್ಷಣದಿಂದ ಕೇವಲ 10 ನಿಮಿಷದಲ್ಲಿ ಗ್ರಾಹಕರ ಮನೆಗೆ ಆರ್ಡರ್ ತಲುಪಿಸುವ ಹೊಸ ಫೀಚರ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಪದ್ಮ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಪ್ರಧಾನಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗಿ
Advertisement
Advertisement
ಝೊಮ್ಯಾಟೊ ಸಹ ಸಂಸ್ಥಾಪಕ ದೀಪಿಂದರ್ ಗೋಯಲ್ ಹೊಸ ಫೀಚರ್ ಕುರಿತು ಟ್ಟಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಝೊಮ್ಯಾಟೊದಿಂದ ಕೇವಲ 10 ನಿಮಿಷದಲ್ಲಿ ಫುಡ್ ಡೆಲಿವರಿ ಮಾಡುವ ಯೋಜನೆ ಶೀಘ್ರವೇ ಬರಲಿದೆ. ಇದು ಮೊದಲು ಮುಂದಿನ ತಿಂಗಳು ಗುರ್ಗಾಂವ್‌ನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
Advertisement
Announcement: 10 minute food delivery is coming soon on Zomato.
Food quality – 10/10
Delivery partner safety – 10/10
Delivery time – 10 minutes
Here’s how Zomato Instant will achieve the impossible while ensuring delivery partner safety – https://t.co/oKs3UylPHh pic.twitter.com/JYCNFgMRQz
— Deepinder Goyal (@deepigoyal) March 21, 2022
Advertisement
ಆಹಾರ ತ್ವರಿತ ವಿತರಣೆಯಿಂದ, ನಿಮ್ಮ ಆಹಾರವು ತಾಜಾ, ಬಿಸಿಯಾಗಿರುತ್ತದೆ. ಇದು ನಿಜಕ್ಕೂ ಗ್ರಾಹಕ ಸ್ನೇಹಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ
ಈವರೆಗೆ ಝೊಮ್ಯಾಟೊ ಮೂಲಕ ಫುಡ್ ಡೆಲಿವರಿ ಸಮಯವನ್ನು 30 ನಿಮಿಷಕ್ಕೆ ಸರಾಸರಿಗೊಳಿಸಲಾಗಿತ್ತು. ಆದರೆ ಅದು ತುಂಬಾ ನಿಧಾನ ಎಂಬುದು ಗ್ರಾಹಕರ ಆಕ್ಷೇಪವಾಗಿತ್ತು. ಹೊಸ ಫೀಚರ್‌ನಿಂದ ಹೆಚ್ಚು ಅನುಕೂಲ ಆಗಲಿದೆ ಎಂದು ಅವರು ಹೇಳಿದ್ದಾರೆ.
ಕೇವಲ 10 ನಿಮಿಷದಲ್ಲಿ ಫುಡ್ ಡೆಲಿವರಿ ಏಕೆ ಮಾಡಬೇಕು, ಹೇಗೆ ಮಾಡವುದು ಎಂಬ ಬಗ್ಗೆ ದೀಪಿಂದರ್ ಗೋಯಲ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾರಿಗೆ ಬೇಕು ʼದಿ ಕಾಶ್ಮೀರ್ ಫೈಲ್ಸ್ʼ: ತೆಲಂಗಾಣ ಸಿಎಂ ಪ್ರಶ್ನೆ