ನವದೆಹಲಿ: ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಜಾಹೀರಾತಿನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಝೊಮ್ಯಾಟೋ ಬಾಯ್ಕಟ್‍ಗೆ ಕರೆ ನೀಡಿದ ಬೆನ್ನಲ್ಲೇ ಝೊಮ್ಯಾಟೋ ಕ್ಷಮೆಯಾಚಿಸಿದೆ.
Advertisement
ಝೊಮ್ಯಾಟೋ ತನ್ನ ಜಾಹೀರಾತಿನಲ್ಲಿ ಹೃತಿಕ್ ರೋಷನ್, ಉಜ್ಜೈನಿಯಲ್ಲಿನ ಭಗವಾನ್ ಮಹಾಕಾಳೇಶ್ವರನ ಉಲ್ಲೇಖ ಮಾಡಿ, ‘ಪ್ಲೇಟ್ ಇಷ್ಟವಾಯಿತೇ, ನೀವು ಉಜ್ಜೈನಿಯಲ್ಲಿದ್ದರೆ, ಮಹಾಕಾಳೇಶ್ವರನಿಂದ ತರಿಸಿದರೆ ಆಯಿತು’ ಎಂದು ಹೇಳಿದ್ದರು. ಇದು ಹಿಂದೂ ದೇವರು ಮಹಾಕಾಳೇಶ್ವರನಿಗೆ ಅಪಮಾನ ಎಂದು ಹಿಂದೂ ಸಂಘಟನೆಗಳಿಂದ ಝೊಮ್ಯಾಟೋ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ
Advertisement
We have something to share – pic.twitter.com/qG64VCd0jp
— zomato care (@zomatocare) August 21, 2022
Advertisement
ಯಾವ ಸಂಸ್ಥೆಯು ಮಾಂಸಹಾರಿ ಭೋಜನವನ್ನು ಸಹ ವಿತರಿಸುವುದೋ, ಅವರು ಮಹಾಕಾಲೇಶ್ವರರ ಹೆಸರಿನಲ್ಲಿ ಜಾಹೀರಾತು ತಯಾರಿಸಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಆದ್ದರಿಂದ ಈ ಜಾಹೀರಾತನ್ನು ತಯಾರಿಸಿದ ಝೊಮ್ಯಾಟೋ ಹಿಂದೂಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹಿಂದೂ ಸಂಘಟನೆಗಳ ಆಗ್ರಹವಾಗಿತ್ತು. ವಿವಾದದ ಬೆನ್ನಲ್ಲೇ ಕೂಡಲೇ ಎಚ್ಚೆತ್ತ ಝೊಮ್ಯಾಟೋ ಪತ್ರದ ಮೂಲಕ ಕ್ಷಮೆಯಾಚಿಸಿದೆ. ಇದನ್ನೂ ಓದಿ: ಸಂಸತ್ತಿನ ಒಳಗಡೆ ಫೋಟೋ ಇರುವಾಗ ಸರ್ಕಲ್‍ಗೆ ಸಾವರ್ಕರ್ ಹೆಸರು ಇಟ್ಟರೆ ತಪ್ಪೇನು – ಭರತ್ ಶೆಟ್ಟಿ ಪ್ರಶ್ನೆ
Advertisement
Live Tv
[brid partner=56869869 player=32851 video=960834 autoplay=true]