ಕೈಯಿಂದಲೇ ವೇಗವಾಗಿ ಓಡುವ ಅಥ್ಲೀಟ್ ಜಿಯಾನ್ ಕ್ಲಾರ್ಕ್ (Zion Clark) ಈಗ ಮತ್ತೆ ಎರಡು ಗಿನ್ನಿಸ್ ದಾಖಲೆಗಳನ್ನು ಬರೆದಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜಿಯಾನ್ ಕ್ಲಾರ್ಕ್ ಸಾಧನೆಯ ವೀಡಿಯೋವನ್ನು ಪೋಸ್ಟ್ ಮಾಡಿದೆ.
ಕೌಡಲ್ ರಿಗ್ರೆಸಿವ್ ಸಿಂಡ್ರೋಮ್ ಎಂಬ ಕಾಯಿಲೆಯಿಂದಾಗಿ ಕಾಲುಗಳಿಲ್ಲದೆ, ಕೈಗಳ ಮೇಲೆಯೇ ಅವಲಂಬಿತವಾಗಿರುವ ಅಥ್ಲೀಟ್ ಜಿಯಾನ್ ಕ್ಲಾರ್ಕ್ ಈಗ ಇನ್ನೆರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ. ಇದನ್ನೂ ಓದಿ: ಬ್ರಿಟನ್ ಪ್ರಧಾನಿಯಾದ ಗಂಟೆಗಳೊಳಗೆ ಸುನಾಕ್ ಹೊಸ ಕ್ಯಾಬಿನೆಟ್‌ಗೆ ಸಿದ್ಧತೆ
It's TWO new records for the man with no excuses, Zion Clark ???? pic.twitter.com/cdZuT4nE2J
— Guinness World Records (@GWR) October 26, 2022
ಈಚೆಗೆ ಲಾಸ್ ಏಂಜಲೀಸ್‌ನ ಜಿಮ್‌ನಲ್ಲಿ ಮೂರು ನಿಮಿಷಗಳಲ್ಲಿ ಕೈಗಳಿಂದ ಅತಿ ಹೆಚ್ಚು ಬಾಕ್ಸ್ ಜಂಪ್ ಮತ್ತು ಡೈಮಂಡ್ ಪುಷ್-ಅಪ್ ಮಾಡಿ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಅವರು ಕೇವಲ 4.78 ಸೆಕೆಂಡುಗಳಲ್ಲಿ ತಮ್ಮ ಕೈಗಳ ಮೂಲಕ 20 ಮೀಟರ್‌ಗಳನ್ನು ಓಡಿದ್ದರು. ಆ ಮೂಲಕ ಎರಡು ಕೈಗಳಲ್ಲಿ ಓಡುವ ವಿಶ್ವದ ಅತ್ಯಂತ ವೇಗದ ವ್ಯಕ್ತಿ ಎಂಬ ದಾಖಲೆಯನ್ನು ನಿರ್ಮಿಸಿದ್ದರು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ (Guinness World Record) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜಿಯಾನ್ ಕ್ಲಾರ್ಕ್ ಸಾಧನೆಯ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಎರಡು ಹೊಸ ದಾಖಲೆಗಳು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ
ಮೊದಲ ದಾಖಲೆಯಲ್ಲಿ, ಕ್ಲಾರ್ಕ್ ಸಲೀಸಾಗಿ ನೆಲದಿಂದ ಕನಿಷ್ಠ 24 ಇಂಚು ಎತ್ತರವಿರುವ ಪೆಟ್ಟಿಗೆಯ ಮೇಲೆ ಹಾರಿದ್ದಾರೆ. ತಮ್ಮದೇ ಸಾಧನೆಯನ್ನು ಮೆಟ್ಟಿ ನಿಂತ ಅವರು ಮತ್ತೊಮ್ಮೆ 33 ಇಂಚು ಜಿಗಿದು ಹೊಸ ದಾಖಲೆ ಬರೆದರು.
ಅಲ್ಲದೇ ಮತ್ತೊಂದೆಡೆ ಕಡಿಮೆ ನಿಮಿಷದಲ್ಲಿ ಡೈಮಂಡ್ ಪುಷ್-ಅಪ್ ಮಾಡಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅಥ್ಲೀಟ್ ಕ್ಲಾರ್ಕ್ ಮೂರು ನಿಮಿಷಗಳಲ್ಲಿ 248 ಡೈಮಂಡ್ ಪುಷ್-ಅಪ್‌ಗಳನ್ನು ಮಾಡಿ ಸಾಧನೆ ಮಾಡಿದ್ದಾರೆ.