ಜೋಹಾನ್ಸ್‌ಬರ್ಗ್: ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ (49) (Heath Streak) ಅವರು ನಿಧನರಾಗಿದ್ದಾರೆ. ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
1993ರಲ್ಲಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟಿದ್ದ ಹೀತ್ ಸ್ಟ್ರೀಕ್, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‌ನಲ್ಲೇ 8 ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಬ್ಯಾಕಪ್ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್ – ವಿಶ್ವಕಪ್ ಆಡುವ ಸಂಜು ಸ್ಯಾಮ್ಸನ್ ಕನಸು ಭಗ್ನ?
Advertisement
Sad news coming through that Heath Streak has crossed to the other side. RIP @ZimCricketv legend. The greatest all rounder we produced. It was a pleasure playing with you. See you on the other side when my bowling spell comes to an end…????
— Henry Olonga (@henryolonga) August 22, 2023
Advertisement
ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್ 2000 ಮತ್ತು 2004ರ ವಿಶ್ವಕಪ್ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 1,990 ರನ್, ಏಕದಿನ ಕ್ರಿಕೆಟ್‌ನಲ್ಲಿ 2,943 ರನ್ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್ ಗಳಿಸಿದ್ದು ಏಕೈಕ ಟೆಸ್ಟ್ ಶತಕವಾಗಿದೆ. ಇದನ್ನೂ ಓದಿ: AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್ ನಿರೂಪಕಿಯರು ಇವರೇ
Advertisement
Goodbye my friend. I consider it an honour and a privilege to have shared the field with you as a teammate and an opponent. Rest easy #RIPStreaky pic.twitter.com/9TVoCC71ek
— Scott Styris (@scottbstyris) August 22, 2023
Advertisement
2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹೀತ್ ಸ್ಟ್ರೀಕ್ ಆ ಬಳಿಕ 2 ವರ್ಷಗಳ ಒಪ್ಪಂದದೊಂದಿಗೆ 2006 ರಲ್ಲಿ ಇಂಗ್ಲೆಂಡ್‌ನ ಕೌಂಟಿ ತಂಡವಾದ ವಾರ್ವಿಕ್‌ಶೈರ್‌ನ ನಾಯಕರಾಗಿ ಆಯ್ಕೆಯಾದರು. ಆದ್ರೆ ವೈಯಕ್ತಿಕ ಕಾರಣಗಳಿಂದ ಅವರು ಈ ಒಪ್ಪಂದವನ್ನ ಶೀಘ್ರದಲ್ಲೇ ಕೊನೆಗೊಳಿಸಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ನಂತರ ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಜಿಂಬಾಬ್ವೆ ತಂಡದ ಮಾಜಿ ಸ್ಪಿನ್ ಮಾಂತ್ರಿಕ ಹೆನ್ರಿ ಒಲೊಂಗಾ ಈ ವಿಷಯವನ್ನ ತಮ್ಮ ಟ್ವಿಟ್ಟರ್ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಕಂಬನಿ ಮಿಡಿದಿದ್ದಾರೆ.
Web Stories