ನೆಲಮಂಗಲ(ಬೆಂಗಳೂರು): ಸಮಾಜದಲ್ಲಿರುವ ದಿವ್ಯಾಂಗರ ನೆರವಿಗೆ ಸರ್ಕಾರ ಎಷ್ಟೇ ಮುಂದಾದರೂ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ದಿವ್ಯಾಂಗರ ಸಹಕಾರಕ್ಕೆ ಮುಖಂಡರೊಬ್ಬರು ನಿಂತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ 100 ಮಂದಿ ದಿವ್ಯಾಂಗರಿಗೆ ತಲಾ 10 ಸಾವಿರ ನೀಡಿ ಮಾನವೀಯತೆಯೊಂದಿಗೆ ವೈಯಕ್ತಿಕವಾಗಿ ನೀಡಲು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಟಿ.ಆರ್.ರಾಜು ಮುಂದಾಗಿದ್ದಾರೆ. ಇಂದು ಸಾಂಕೇತಿಕವಾಗಿ ತ್ಯಾಮಗೊಂಡ್ಲು ಹೋಬಳಿಯ ಓಬಾಳಪುರ ಗ್ರಾಮದ ರಮೇಶ್ ಹಾಗೂ ಜಯಮ್ಮಗೆ ತಲಾ 10 ಸಾವಿರ ವಿತರಿಸಿದರು.
ಅಪಘಾತಗೀಡಾಗಿ ದಿವ್ಯಾಂಗರಾದ ರಮೇಶ್ ಮಾತನಾಡಿ, ಕಳೆದ ಕೆಲ ತಿಂಗಳ ಹಿಂದೆ ತ್ಯಾಮಗೊಂಡ್ಲುವಿನ ಅರಿವೇಸಂದ್ರದ ಬಳಿ ಅಪಘಾತವಾಗಿ ಕಾಲು ಮುರಿದಿದೆ. ಸದ್ಯ ಕಾಲು ಊದಿಕೊಂಡು ವಿಚಿತ್ರವಾಗಿ ಕೀವು ತುಂಬಿಕೊಂಡಿದೆ. ಇದೀಗ ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ. ಮುಖಂಡರು ಆರ್ಥಿಕ ಸಹಕಾರ ಮಾಡಿರುವುದು ಅನುಕೂಲವಾಗಿದೆ ಎಂದರು. ಇದನ್ನೂ ಓದಿ: ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ಆಚರಣೆ
ಇದೇ ವೇಳೆ ಮಾಜಿ ಜಿ.ಪಂ.ಸದಸ್ಯ ಟಿ.ಆರ್ ರಾಜು ಮಾತನಾಡಿ, ಸಮಾಜದಲ್ಲಿ ದಿವ್ಯಾಂಗರಿಗೆ ಸ್ಥಾನಮಾನ ನೀಡಬೇಕು, ನನ್ನ ಅಳಿಲು ಸೇವೆಯನ್ನು ಇಂದು ಮಾಡಿದ್ದೇನೆ. ಸಾಂಕೇತಿಕವಾಗಿ ಇಬ್ಬರಿಗೆ ವಿತರಿಸಿ, ಮುಂದಿನ ದಿನಗಳಲ್ಲಿ ಎಲ್ಲರಿಗೂ ವಿತರಿಸುತ್ತೇವೆ ಎಂದರು.
ಈ ವೇಳೆಯಲ್ಲಿ ದಲಿತ ಕೂಲಿ ಮತ್ತು ಕಾರ್ಮಿಕರ ರಾಜ್ಯಾಧ್ಯಕ್ಷ ಗಂಗಬೈಲಪ್ಪ, ಗ್ರಾ.ಪಂ.ಸದಸ್ಯ ಶ್ರೀಧರ್, ತಾವರೆಕೆರೆ ರಮೇಶ್, ಜಿ.ರಾಮಣ್ಣ, ಅನಿ, ಇನ್ನೀತರರಿದ್ದರು.