ಬೆಂಗಳೂರು: ಝೀಕಾ.. ಇದು ಡೆಂಘೀ, ಮಲೇರಿಯಾಗಿಂತಲೂ ಭಯಾನಕ. ಒಂದು ವೇಳೆ ಝೀಕಾ ಸೋಂಕು ಗರ್ಭಿಣಯರಿಗೆ ಹರಡಿದ್ರೆ ಹುಟ್ಟೋ ಮಕ್ಕಳು ಜೀವನಪರ್ಯಂತ ಬುದ್ಧಿಮಾಂದ್ಯರಾಗ್ತಾರೆ. ನಮ್ಮ ರಾಜ್ಯದಲ್ಲೂ ಝೀಕಾ ಸೋಂಕಿನ ಭೀತಿ ಎದುರಾಗಿದೆ. ಅದಕ್ಕೆ ಕಾರಣ ಪಕ್ಕದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಝೀಕಾ ವೈರಸ್. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ.
Advertisement
ಗರ್ಭಿಣಿಯರಿಗೆ ಜ್ವರವಿದ್ರೆ ತಕ್ಷಣವೇ ಎಲ್ಲಾ ಸ್ಯಾಂಪಲ್‍ಗಳನ್ನು ನಿಮ್ಹಾನ್ಸ್ ಮತ್ತು ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಝೀಕಾ ವೈರಸ್ ಟೆಸ್ಟ್ ಮಾಡಿಸುವಂತೆ ಸೂಚಿಸಿದೆ. ಈ ವೈರಸ್‍ನಿಂದ ಮಗುವಿನ ಮೆದುಳು ಬೆಳವಣಿಗೆ ಆಗದೆ ಇರೋದ್ರಿಂದ ಸ್ಕ್ಯಾನಿಂಗ್ ರಿಪೋರ್ಟ್ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.
Advertisement
ಏರ್‍ಪೋರ್ಟ್ ಮತ್ತು ತಮಿಳುನಾಡು-ಕರ್ನಾಟಕ ಗಡಿ, ತಮಿಳರು ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ನಿಗಾ ವಹಿಸುವಂತೆ ನಿರ್ದೇಶಿಸಲಾಗಿದೆ. ಜೊತೆಗೆ ತಮಿಳರ ಏರಿಯಾಗಳಿಗೆ ತೆರಳಿ ಪರಿಶೀಲಿಸುವಂತೆಯೂ ಸೂಚಿಸಲಾಗಿದೆ. ಆದ್ರೆ ಸಮಾಧಾನಕಾರಿ ಸಂಗತಿ ಅಂದ್ರೆ ಇದುವೆರೆಗೆ ನಮ್ಮ ರಾಜ್ಯದಲ್ಲಿ ಝೀಕಾ ಪಾಸಿಟಿವ್ ಕಂಡುಬಂದಿಲ್ಲ. ಆದರೂ ಮಾದರಿ ಪರೀಕ್ಷೆಗೆ ಸೂಚಿಸಿದ್ದೇವೆ ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಷರೀಫ್ ಹೇಳಿದ್ದಾರೆ.