ಲಕ್ನೋ: ಕಾನ್ಪುರದಲ್ಲಿ ಮತ್ತೆ ಮೂವರು ಮಂದಿಗೆ ಝಿಕಾ ವೈರಸ್ ದೃಢಪಟ್ಟಿದೆ.
ಕಾನ್ಪುರದಲ್ಲಿ ದಿನೇ ದಿನೇ ಜಿಕಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯ ಪ್ರಕಾರ, ಇಲ್ಲಿಯವರೆಗೂ 17 ಮಂದಿ ಝಿಕಾ ವೈರಸ್‍ನಿಂದ ಚೇತರಿಸಿಕೊಂಡಿದ್ದಾರೆ. ಮತ್ತು ಒಟ್ಟು 91 ಸಕ್ರಿಯ ಪ್ರಕರಣಗಳು ವರದಿಯಾಗಿದೆ.
Advertisement
Advertisement
ಭಾನುವಾರ ಮೂವರು ಭಾರತೀಯ ವಾಯುಪಡೆ ಸಿಬ್ಬಂದಿ ಸೇರಿದಂತೆ ಇನ್ನೂ 10 ಮಂದಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಒಟ್ಟು 89 ಪ್ರಕರಣಗಳಿದ್ದ ಝಿಕಾ ವೈರಸ್ ಇದೀಗ 91ಕ್ಕೆ ಏರಿಕೆಯಾಗಿದೆ. ಶನಿವಾರ 13 ಮಂದಿಯಲ್ಲಿ ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಜೊತೆಗೆ ಕನ್ನೌಜ್ ಜಿಲ್ಲೆಯಿಂದಲೂ ಒಂದು ಪ್ರಕರಣ ವರದಿಯಾಗಿತ್ತು. ಇದನ್ನೂ ಓದಿ: ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಕೊಲೆ ಆರೋಪಿ!
Advertisement
ಒಟ್ಟು 89 ಸೋಂಕಿತರಲ್ಲಿ 55 ಮಂದಿ ಪುರುಷರಾಗಿದ್ದು, 34 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 23 ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಲ್ಲದೇ ಸೋಂಕಿತರಲ್ಲಿ 12 ಮಂದಿ ಭಾರತೀಯ ವಾಯುಪಡೆ (ಐಎಎಫ್) ಸಿಬ್ಬಂದಿಯರಿದ್ದು, ಇದರಲ್ಲಿ 11 ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದಾರೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ಹೇಳಿದ್ದಾರೆ.
Advertisement
ಆರೋಗ್ಯ ತಂಡಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 525 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವೈರಾಲಜಿ ಲ್ಯಾಬ್ ಮತ್ತು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗಾಗಿ ಕಳುಹಿಸಿದೆ. ಇದನ್ನೂ ಓದಿ: ವಿವಾಹವಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ 18 ಬಾರಿ ಇರಿದ ಪ್ರಿಯಕರ!
105 positive Zika virus cases detected in Kanpur in past month;17 recovered. District admin, health dept & municipal council, strategically worked on increasing surveillance, sanitisation & investigation: UP CM Yogi Adityanath on Zika virus outbreak in Kanpur pic.twitter.com/WtKE14NSRC
— ANI UP (@ANINewsUP) November 10, 2021
ಅಕ್ಟೋಬರ್ 23 ಐಎಎಫ್‍ನ ವಾರಂಟ್ ಅಧಿಕಾರಿಯೊಬ್ಬರಲ್ಲಿ ಝಿಕಾ ವೈರಸ್ ಮೊದಲ ಬಾರಿಗೆ ಪತ್ತೆಯಾಯಿತು. ಇದೀಗ ನಗರದಲ್ಲಿ ಒಟ್ಟು 3,283 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಲಕ್ನೋದ ಕೆಜಿಎಂಯು ಮತ್ತು ಪುಣೆಯ ಎನ್‍ಐವಿಯ ವೈರಾಲಜಿ ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
Kanpur | A total of 79 positive cases of Zika virus have been reported in the district so far,” says Dr. Nepal Singh, Chief Medical Officer of Kanpur pic.twitter.com/6lf7DIyPIx
— ANI UP (@ANINewsUP) November 6, 2021
ರೋಗದ ಹರಡುವಿಕೆಯನ್ನು ಪರಿಶೀಲಿಸಲು, ಆರೋಗ್ಯ ತಂಡಗಳು ಆಂಟಿ-ಲಾರ್ವಾ ಸಿಂಪರಣೆ ಮತ್ತು ಜ್ವರ ರೋಗಿಗಳನ್ನು ಗುರುತಿಸುವುದು, ಗಂಭೀರವಾಗಿ ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರನ್ನು ಪರೀಕ್ಷಿಸುವುದು ಸೇರಿದಂತೆ ನೈರ್ಮಲ್ಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಕಣ್ಗಾವಲು ಹೆಚ್ಚಿಸಲು ಮತ್ತು ಝಿಕಾ ವೈರಸ್‍ಗಾಗಿ ಮನೆ-ಮನೆಗೆ ಮಾದರಿ ಮತ್ತು ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಅಧಿಕಾರಿಗಳನ್ನು ಕೇಳಲಾಗಿದೆ.