CricketLatestLeading NewsMain PostSports

ಝೀರೋ.. ಝೀರೋ.. ಝೀರೋ – ಶೂನ್ಯ ಸುತ್ತಿದ ಕೊಹ್ಲಿಗೆ ರಾಕಿಭಾಯ್ ಸ್ಟೈಲ್‌ನಲ್ಲಿ ಟ್ರೋಲ್

ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 3ನೇ ಬಾರಿಗೆ ಗೋಲ್ಡನ್ ಡಕ್‌ ಔಟ್ ಆಗುವ ಮೂಲಕ ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ.

15ನೇ ಆವೃತ್ತಿಯ ಐಪಿಎಲ್‌ನಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದ್ದು, ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಹೈದ್ರಾಬಾದ್ ಹಾರಾಟಕ್ಕೆ ಬ್ರೇಕ್ ಹಾಕಿದ ‘ಗ್ರೀನ್‌ಬಾಯ್ಸ್’- RCBಗೆ 67 ರನ್‌ಗಳ ಭರ್ಜರಿ ಜಯ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ವಿರಾಟ್, ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆದರು. ಈ ಮೂಲಕ ಹೈದರಾಬಾದ್ ವಿರುದ್ಧವೇ 2ನೇ ಸಲ ಗೋಲ್ಡನ್ ಡಕ್‌ಔಟ್ ಆಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಮೊದಲ ಎಸೆತದಲ್ಲಿ ಔಟ್ ಆಗಿದ್ದರು. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

ಕೆಜಿಎಫ್-2 ಚಿತ್ರದಲ್ಲಿ ರಾಕಿ ಭಾಯ್ ಅವರ ಜನಪ್ರಿಯ `ವೈಲೆನ್ಸ್, ವೈಲೆನ್ಸ್, ವೈಲೆನ್ಸ್’ ಡೈಲಾಗ್‌ಗೆ ಕೊಹ್ಲಿ ಅವರನ್ನು ಟ್ರೋಲ್ ಮಾಡಲಾಗಿದೆ. `ಝೀರೋ… ಝೀರೋ… ಝೀರೋ…ಐ ಡೋಂಟ್ ಲೈಕ್ ಇಟ್… ಐ ಅವಾಯ್ಡ್…. ಬಟ್ ಝೀರೋ ಲೈಕ್ಸ್ ಮಿ… ಐ ಕಾಂಟ್ ಅವಾಯ್ಡ್’ ಎಂದು ವ್ಯಂಗ್ಯ ಮಾಡಲಾಗಿದೆ.

ಇದರೊಂದಿಗೆ ವಿರಾಟ್, ಅನುಷ್ಕಾ ಶರ್ಮಾ ಅವರೊಂದಿಗೆ ಜಾಲಿಮೂಡ್‌ನಲ್ಲಿರುವ ಫೋಟೋ ಒಂದನ್ನು ಹಾಕಿದ್ದು, `ಐಪಿಎಲ್ ಲೀಗ್ ಹೇಗಾದರೂ ಮುಗಿಯಲಿ, ಒಂದು ವಿರಾಮ ತೆಗೆದುಕೊಳ್ಳಿ’ ಎಂದು ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

ಒಟ್ಟಾರೆ ಈವರೆಗೆ ಕೊಹ್ಲಿ 9ನೇ ಬಾರಿಗೆ ಶೂನ್ಯಕ್ಕೆ ಔಟ್ ಆಗಿದ್ದು, ಇದರಲ್ಲಿ 6 ಗೋಲ್ಡನ್ ಡಕ್ ಸೇರಿವೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ 3ನೇ ಸಲ ಗೋಲ್ಡನ್ ಡಕ್‌ಔಟ್ ಆಗಿದ್ದಾರೆ. 1 ಪಂದ್ಯದಲ್ಲಿ ಮಾತ್ರ ಅರ್ಧ ಶತಕ ಗಳಿಸಿದ ಕೊಹ್ಲಿ ಕಳೆದ 12 ಪಂದ್ಯಗಳಲ್ಲಿ 19.6ರ ಸರಾಸರಿಯಲ್ಲಿ 216 ರನ್ ಗಳಿಸಿದ್ದಾರೆ.

Leave a Reply

Your email address will not be published.

Back to top button