ಕೀವ್: ಉಕ್ರೇನ್‌ನ ಬುಚಾ ನಗರದಲ್ಲಿ ನಡೆಯುತ್ತಿರುವ ಘಟನೆಗಳು ಕ್ಷಮಿಸಲಾಗದವು. ಆದರೂ ಉಕ್ರೇನ್ ಮತ್ತು ರಷ್ಯಾ ಮಾತುಕತೆ ಮುಂದುವರಿಸುವಂತಹ ಕಠಿಣ ಆಯ್ಕೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.
ಉಕ್ರೇನ್ ಅಧ್ಯಕ್ಷ ಮಂಗಳವಾರ ಯುದ್ಧವನ್ನು ಕೊನೆಗೊಳಿಸಲು ರಷ್ಯಾದೊಂದಿಗೆ ಮಾತುಕತೆ ನಡೆಸುವುದನ್ನು ಬಿಟ್ಟು ಉಕ್ರೇನ್‌ಗೆ ಬೇರೆ ಯಾವುದೇ ದಾರಿಯಿಲ್ಲ. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈಯಕ್ತಿಕವಾಗಿ ಮಾತುಕತೆ ನಡೆಸಲು ಒಪ್ಪುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು- ಅಧಿಕಾರ ವಹಿಸಿಕೊಂಡ ಒಂದೇ ದಿನಕ್ಕೆ ಹಣಕಾಸು ಸಚಿವ ರಾಜೀನಾಮೆ
Advertisement
Advertisement
ಉಕ್ರೇನ್‌ನ ಬುಚಾ ನಗರದಲ್ಲಿ ಇದೀಗ ರಷ್ಯಾವನ್ನು ಕ್ಷಮಿಸಲಾರದಂತಹ ಹತ್ಯಾಕಾಂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಅಮೆರಿಕದ ಟೈಮ್ಸ್ ಸ್ಕ್ವೇರ್‌ನಲ್ಲಿ ಮೊದಲ ಬಾರಿಗೆ ನಮಾಜ್- ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳಿವೆ ಎಂದ ಮುಸ್ಲಿಮರು
Advertisement
ಉಕ್ರೇನ್ ರಾಜಧಾನಿ ಕೀವ್ ಸುತ್ತಲಿನ ನಗರಗಳಲ್ಲಿ ಇತ್ತೀಚೆಗೆ ನೂರಾರು ಶವಗಳು ಬೀದಿ ಬೀದಿಗಳಲ್ಲಿ ಕಂಡುಬಂದಿದ್ದು ಈ ಮೂಲಕ ರಷ್ಯಾ ಸೈನಿಕರ ಕ್ರೂರತೆ ಬಯಲಾಗಿದೆ. ಜನರ ಕೈಗಳನ್ನು ಕಟ್ಟಿಹಾಕಿ, ಬಾಯಿಗೆ ಗುಂಡು ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.