ಮುಂಬೈ: ಅಕ್ಟೋಬರ್ 12 ರಂದು ಗುಂಡೇಟಿಗೆ ಬಲಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಅವರ ಪುತ್ರ ಜೀಶನ್ ಸಿದ್ದಿಕಿ (Zeeshan Siddique) ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಅಜಿತ್ ಪವಾರ್ (Ajit Pawer) ನೇತೃತ್ವದ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಪವಾರ್ ಅವರ ಸಮ್ಮುಖದಲ್ಲಿ ಶುಕ್ರವಾರ ಬೆಳಗ್ಗೆ ಅವರು ಸೇರ್ಪಡೆಯಾದರು.
Advertisement
2019ರ ಚುನಾವಣೆಯಲ್ಲಿ ಮುಂಬೈಯ ವಂಡ್ರೆ ಪೂರ್ವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಇವರನ್ನು ಆಗಸ್ಟ್‌ನಲ್ಲಿ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದರು. ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕೆ ಕಾಂಗ್ರೆಸ್ ಈ ಕ್ರಮ ತೆಗೆದುಕೊಂಡಿತ್ತು.
Advertisement
#WATCH | Maharashtra: Son of late NCP leader Baba Siddique, former Mumbai Youth Congress president Zeeshan Siddiqui joins the NCP in Mumbai.
NCP announces Zeeshan Siddiqui as party candidate from Bandra East Constituency for #MaharashtraElection2024 pic.twitter.com/EgjoHht4Lx
— ANI (@ANI) October 25, 2024
ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ಜೀಶನ್ ಸಿದ್ದಿಕ್, ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಮತ್ತು ಎಂವಿಎ ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅವರು ಮೋಸ ಮಾಡುವ ಉದ್ದೇಶ ಹೊಂದಿದ್ದರು. ಆ ಕಷ್ಟದ ಸಮಯದಲ್ಲಿ, ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನೀಲ್ ತಾಟ್ಕರೆ ನನ್ನನ್ನು ನಂಬಿದ್ದರು ಎಂದು ತಿಳಿಸಿದರು.
Advertisement
ನಾನು ವಂಡ್ರೆ (ಪೂರ್ವ)ದಿಂದ ಸ್ಪರ್ಧಿಸುತ್ತೇನೆ. ಎಲ್ಲ ಜನರ ಪ್ರೀತಿ ಮತ್ತು ಬೆಂಬಲದಿಂದ ನಾನು ಖಂಡಿತವಾಗಿಯೂ ಬಾಂದ್ರಾ ಪೂರ್ವವನ್ನು ಮತ್ತೊಮ್ಮೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.
Advertisement
ಎಂವಿಎ ಮೈತ್ರಿ ಉದ್ಧವ್ ಠಾಕ್ರೆ ಬಣದ ಶಿವಸೇನೆಗೆ ಅಭ್ಯರ್ಥಿಗೆ ಪೂರ್ವ ಕ್ಷೇತ್ರದ ಟಿಕೆಟ್ ನೀಡಿದೆ.
Watch | “Congress and Maha Vikas Aghadi leaders were in touch with me for the past few days. But they intended to deceive,” said #ZeeshanSiddiqui, son of #BabaSiddique and sitting Congress MLA from #Bandra (East) as he joined NCP 13 days after father Baba Siddique’s murder
Know… pic.twitter.com/wqDtpHFMn3
— The Times Of India (@timesofindia) October 25, 2024
ಮಾಜಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಬಾಬಾ ಸಿದ್ದಿಕಿ ಅವರು ಹಿಂದೆ ಅವಿಭಜಿತ ವಂಡ್ರೆ ಕ್ಷೇತ್ರದಿಂದ ಎರಡು ಅವಧಿಗೆ ಕಾಂಗ್ರೆಸ್ ಶಾಸಕರಾಗಿದ್ದರು. 2008 ರಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡನೆಯಾಯಿತು. ಮೂರನೇ ಅವಧಿಯಲ್ಲಿ ವಂಡ್ರೆ (ಪಶ್ಚಿಮ) ಪ್ರತಿನಿಧಿಸಿ ಗೆದ್ದಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಯನ್ನು ಸೇರಿದ್ದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ನ.23 ರಂದು ಫಲಿತಾಂಶ ಪ್ರಕಟವಾಗಲಿದೆ.