ಚಿತ್ರದುರ್ಗ: ಸಚಿವ ಜಮೀರ್ ಖಾನ್ (Zameer Ahmed Khan) ಅವರ ಧರ್ಮ ಹಾಗು ವಕ್ಫ್ ಬೋರ್ಡ್‌ಗೆ ನ್ಯಾಯ ಒದಗಿಸುವ ಪ್ರಯತ್ನದಲ್ಲಿ ಇದ್ದಾರೆ ಎಂದು ಮಾದಾರ ಚನ್ನಯ್ಯ ಶ್ರೀ ತಿರುಗೇಟು ನೀಡಿದರು.
ಚಿತ್ರದುರ್ಗದ (Chitradurga) ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಸಂಬಂಧಿಸಿದಂತೆ ರಾಜ್ಯದಲ್ಲಿ ಗೊಂದಲ ನಿರ್ಮಾಣವಾಗಿದೆ. ಹೀಗಾಗಿ 1975ರ ವಕ್ಫ್ ಸಂಬಂಧಿತ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್ – ಕನಿಷ್ಠ 20 ಮಂದಿ ದಾರುಣ ಸಾವು
Advertisement
Advertisement
ವಕ್ಫ್ (Waqf Board) ವಿಚಾರದಲ್ಲಿ ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯುವುದಾಗಿ ಸಿಎಂ ಹೇಳಿದ್ದಾರೆ. ಆದರೆ ಮುಂದಿನ ಸರ್ಕಾರಗಳು ಮತ್ತೆ ಜಾರಿಗೆ ತಂದರೆ ಅದನ್ನು ತಡೆಯಲು ಆಗುವುದಿಲ್ಲ. ಹೀಗಾಗಿ ವಕ್ಫ್ ಗೊಂದಲಕ್ಕೆ ಇತಿಶ್ರೀ ಹಾಡಲು ಸೂಕ್ತ ಕ್ರಮದ ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: 2,000 ಜನ ವಾಸಿಸುವ ಇಡೀ ಗ್ರಾಮದ ಮೇಲೆ ವಕ್ಫ್ ವಕ್ರದೃಷ್ಟಿ
Advertisement
ಜೊತೆಗೆ 1975ರ ತಿದ್ದುಪಡಿಗೆ ಸೂಕ್ತ ತಿದ್ದುಪಡಿ ಮಾಡಬೇಕು. ಈಗಾಗಲೇ ನೀಡಿರುವ ನೋಟಿಸ್ ಬಗ್ಗೆ ಕಾನೂನು ಹೋರಾಟ ಮಾಡಬಹುದು. ಹೀಗಾಗಿ, ರಾಜ್ಯ ಸರ್ಕಾರ ಕೂಡಲೇ ಕಾನೂನಾತ್ಮಕ ತಿದ್ದುಪಡಿ ಮಾಡಬೇಕಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆಸ್ತಿ, ಮಠ ಹಾಗು ಮಂದಿರಗಳ ಮೇಲಿನ ಹಕ್ಕು ಚಲಾವಣೆಗೆ ಬ್ರೇಕ್ ಹಾಕಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಜೆಪಿಯವರು ಆರಾಮವಾಗಿ ಇದ್ದಾರೆ, ಪ್ರತಿಭಟನೆ ಮಾಡಲಿ: ರಾಮಲಿಂಗಾ ರೆಡ್ಡಿ ಲೇವಡಿ
Advertisement
ಈ ವಿಚಾರದಲ್ಲಿ ಕಾನೂನಾತ್ಮಕ ತಿದ್ದುಪಡಿ ಬಿಟ್ಟರೆ ಬೇರೆ ದಾರಿಯಿಲ್ಲ. ಆದರೆ ಸಚಿವರು ತಮ್ಮ ಖಾತೆಗೆ ನ್ಯಾಯ ಕೊಡುವ ಪ್ರಯತ್ನದಲ್ಲಿದ್ದು, ಅವರ ಧರ್ಮಕ್ಕೆ ಹಾಗು ವಕ್ಫ್ ಬೋರ್ಡ್‌ಗೆ ನ್ಯಾಯ ಕೊಡುವ ಪ್ರಯತ್ನದಲ್ಲಿದ್ದಾರೆ. ನಾವು ಸಹ ನಮ್ಮ ಆಸ್ತಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ಸಚಿವ ಜಮೀರ್ ಖಾನ್ ಹೆಸರು ಪ್ರಸ್ತಾಪಿಸದೇ ಮಾದಾರ ಚನ್ನಯ್ಯಶ್ರೀ (Madara Channaiah Swamiji) ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಬಡವರ ವಿರೋಧಿಗಳು – ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ರಾಮಲಿಂಗಾರೆಡ್ಡಿ