– ಬಾಂಬರ್ ಸಿಗದೇ ಹೋಗಿದ್ರೆ ಬಿಜೆಪಿ ಮುಸ್ಲಿಂರ ಮೇಲೆ ಗೂಬೆ ಕೂರುಸ್ತಿತ್ತು
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಆತಂಕ ಹುಟ್ಟಿಸುತ್ತಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡ ಶಾಸಕ ಹ್ಯಾರಿಸ್ ಭೇಟಿಯಾಗಿ ಬಳಿಕ ಮಾತನಾಡಿದ ಜಮೀರ್, ಬಿಜೆಪಿ ಸರ್ಕಾರದ ಬಗ್ಗೆ ಅನುಮಾನಗಳು ಕಾಡತೊಡಗಿದೆ. ಶಾಸಕ ಹ್ಯಾರಿಸ್, ತನ್ವೀರ್ ಸೇಠ್ ಮೇಲೆ ನಡೆದ ಘಟನೆಗಳಿಂದ ಒಂದು ರೀತಿ ರಾಜ್ಯದಲ್ಲಿ ಏನ್ ನಡೆಯುತ್ತಿದ್ದೆ ಎಂದು ವಿಚಲಿತರಾಗಿದ್ದೇವೆ. ಬಿಜೆಪಿ ಸರ್ಕಾರ ನನಗೆ ಕೊಟ್ಟಿರುವ ಭದ್ರತೆಯನ್ನ ವಾಪಸ್ ಪಡೆದುಕೊಳ್ಳಲು ಮುಂದಾಗಿದೆ ಎಂದು ನನಗೂ ಮಾಹಿತಿ ಬಂದಿದೆ ಎಂದರು.
Advertisement
Advertisement
ನಾನು ಇತ್ತೀಚಿಗೆ ಎನ್‌ಆರ್‌ಸಿ ವಿರೋಧಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾ ಇದ್ದೀನಿ. ಆ ಕಾರಣಕ್ಕೆ ಭದ್ರತೆಯನ್ನ ವಾಪಸ್ ಪಡೆದುಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಭದ್ರತೆ ಇದ್ದರೂ ನಾನು ಎನ್‌ಆರ್‌ಸಿಯನ್ನ ವಿರೋಧಿಸುತ್ತೇನೆ, ಇಲ್ಲದೇ ಹೋದರು ವಿರೋಧಿಸಿ ಪ್ರತಿಭಟನೆ ಮಾಡುತ್ತೇನೆ ಎಂದು ಜಮೀರ್ ಅಹಮ್ಮದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ವ್ಯಕ್ತಿ ಆದಿತ್ಯ ರಾವ್ ಬುಧವಾರ ಬಂದು ಡಿಜಿ ಕಚೇರಿಯಲ್ಲಿ ಸರೆಂಡರ್ ಆಗಿದ್ದಾನೆ. ಬಾಂಬರ್ ಸಿಗುವುದಕ್ಕೂ ಮುನ್ನ ಬಾಂಬ್ ಇಟ್ಟಿರುವರು ಮುಸ್ಲಿಂರು ಅನ್ನೋ ರೀತಿಯಲ್ಲಿ ಬಿಂಬಿಸತೊಡಗಿದರು. ದೇವರು ದೊಡ್ಡವನು ಬಾಂಬರ್ ಡಿಜಿ ಕಚೇರಿಯಲ್ಲಿ ಸರೆಂಡರ್ ಆಗಿದ್ದಾನೆ. ಬಾಂಬರ್ ಸಿಗದೇ ಹೋಗಿದ್ದರೆ ಮುಸ್ಲಿಂರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಅವರು ಮಾಡುತ್ತಿದ್ದರು ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.