ಮಂಡ್ಯ: ಸಿದ್ಧರಾಮಯ್ಯ ಸರ್ಕಾರದ ಯೋಜನೆಗಳನ್ನ ಹೊಗಳುವ ಭರದಲ್ಲಿ ಶಾಸಕ ಜಮೀರ್ ಅಹಮದ್ ಒಂದಲ್ಲ, ಎರಡಲ್ಲ, ಮೂರು ಮೂರು ಎಡವಟ್ಟು ಮಾಡಿದ್ದಾರೆ.
ಮಂಡ್ಯದ ಬೆಳ್ಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮೀರ್ ಆಡಿದ ಮಾತು ಸಭಿಕರನ್ನ ನಗೆಗಡಲಲ್ಲಿ ತೇಲುವಂತೆ ಮಾಡ್ತು. ಕ್ಷೀರ ಭಾಗ್ಯ ಎಂದು ಹೇಳಲು ಹೋಗಿ ಶೀಲ ಭಾಗ್ಯ ಎಂದು ಜಮೀರ್ ಉಚ್ಛಾರ ಮಾಡಿದ್ರು. ಅಷ್ಟಾದ್ರೂ ಪರವಾಗಿಲ್ಲ, ನಮ್ಮ ಸಿಎಂ ಸಾಹೇಬ್ರು ಅಂತ ಹೇಳೋದ್ ಬಿಟ್ಟು ಸಿಎಂ ಸಾಬ್ರು ಅಂದ್ರು. ಆಮೇಲೆ ಟಿಪ್ಪು ಜಯಂತಿ ಆಚರಣೆ ಅನ್ನೋದನ್ನ ಬಿಟ್ಟು ಚಿಪ್ಪು ಜಯಂತಿ ಅಂದ್ರು.
ಕೊನೆಗೆ ಸಿದ್ದರಾಮಯ್ಯ ಅವರನ್ನು ಗುರುಗಳು ಎಂದ ಜಮೀರ್ ಅಹಮದ್, ನಾನು-ಚಲುವಣ್ಣ ಸ್ವಂತ ಅಣ್ಣ ತಮ್ಮಂದಿರಂತೆ ಎಂದು ಡೈಲಾಗ್ ಹೊಡೆದ್ರು.
ರಾಜ್ಯದ ಜನ ನಮಗೆ ಒಳ್ಳೇದಾಬೇಕು ಎಂಬ ಅಭಿಪ್ರಾಯಪಟ್ಟಿದ್ದಾರೆ. ಜನತಾ ದಳದಲ್ಲಿ ಇದ್ದಿದ್ರು ನಾನು ಮುಸ್ಲಿಂ ಓಟ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಮುಂದೆಯೂ ಚಲುವರಾಯಸ್ವಾಮಿ ಶಾಸಕರಾಗುತ್ತಾರೆ ಎಂದು ಬ್ಯಾಟಿಂಗ್ ಮಾಡಿದ್ರು.
https://www.youtube.com/watch?v=01YOeP5Fj-M