ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರಿಗೆ ಮೂರು ಟಿಕೆಟ್ ಕೇಳಿದ್ದೇವೆ – ಜಮೀರ್ ಅಹಮದ್

Public TV
2 Min Read
Zameer Ahmed Khan

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಜನಸಂಖ್ಯೆಗೆ ಅನುಗುಣವಾಗಿ 3 ಸ್ಥಾನ ಮುಸ್ಲಿಮರಿಗೆ ಕೊಡಬೇಕು ಅಂತ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದು ಸಚಿವ ಜಮೀರ್ ಅಹಮದ್ ಖಾನ್‌ (Zameer Ahmed Khan)  ತಿಳಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಮುಸ್ಲಿಮರಿಗೆ (Muslims) 3 ಸ್ಥಾನ ಕೇಳಿದ್ದೇವೆ. ಬೆಂಗಳೂರು ಕೇಂದ್ರ, ಬೀದರ್, ಹಾವೇರಿ ಕ್ಷೇತ್ರಗಳಿಗೆ ಟಿಕೆಟ್ ಕೇಳಿದ್ದೇವೆ. ಹೈಕಮಾಂಡ್ ತೀರ್ಮಾನ ಮಾಡಬೇಕು. ನಮಗೆ ಟಿಕೆಟ್ (Election Ticket) ಕೇಳಿದ್ದೇವೆ ಅನ್ನೋದಕ್ಕಿಂತ ಗೆಲ್ಲಬೇಕು ಅನ್ನೋದು ಮುಖ್ಯ ಎಂದರು. ಇದನ್ನೂ ಓದಿ: ಬಿಜೆಪಿಯವರು ನಮಗೆ ದೇಶಭಕ್ತಿ ಹೇಳಿಕೊಡಬೇಕಿಲ್ಲ – ಎಫ್‌ಎಸ್‌ಎಲ್ ವರದಿ ಬಗ್ಗೆ ಸಿಎಂ ಹೇಳಿದ್ದೇನು?

SIDDU AND ZAMEER

27 ಜನ ಸಂಸದರು ರಾಜ್ಯಕ್ಕಾಗಿ ದನಿ ಎತ್ತುತ್ತಿಲ್ಲ:
ಈಗ ನಮ್ಮಲ್ಲಿ ಒಬ್ಬರು ಸಂಸದರು ಮಾತ್ರ ಇದ್ದಾರೆ. ಅವರಿಗೆ ಧ್ವನಿ ಎತ್ತಲು ಅವಕಾಶ ಕೊಡ್ತಿಲ್ಲ. ‌ಬಿಜೆಪಿಯ 25, ಸುಮಲಾ ಹಾಗೂ ಪ್ರಜ್ವಲ್‌ ರೇವಣ್ಣ ಅವರೂ ಎನ್‌ಡಿಎ ಭಾಗವಾಗಿರೋದ್ರಿಂದ ಅವರೂ ಬಿಜೆಪಿ ಜೊತೆಗಿದ್ದಾರೆ. ಒಟ್ಟು 27 ಜನ ಸಂಸದರು ಇದ್ದಾರೆ. 27 ಜನ ಸಂಸದರು ಕರ್ನಾಟಕ ವಿಚಾರವಾಗಿ ಧ್ವನಿ ಎತ್ತುತ್ತಿದ್ದಾರಾ? ನಮ್ಮ ಪಕ್ಷದವರು ಸಂಸತ್‌ನಲ್ಲಿದ್ದರೆ ಧ್ವನಿ ಎತ್ತಲು ಅನುಕೂಲವಾಗುತ್ತದೆ. ನಮ್ಮವರು ಜಾಸ್ತಿ ಇದ್ದರೆ ಧ್ವನಿ ಎತ್ತಬಹುದು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ನಮ್ಮ ರಾಜ್ಯದಿಂದ ನಮ್ಮವರು ಜಾಸ್ತಿ ಇದ್ದರೆ ಒಳ್ಳೆಯದು ಎಂದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರುತ್ತೆ, ಜನ ನಮ್ಮ ಪರ ಇದ್ದಾರೆ. ನಿಮಗೆ ಆಶ್ಚರ್ಯವಾದ ರಿಸಲ್ಟ್ ಬರುತ್ತದೆ. ಕನಿಷ್ಟ 20-22 ಸ್ಥಾನ ಲೋಕಸಭೆಯಲ್ಲಿ ಗೆಲ್ತೀವಿ. ವಿಧಾನಸಭೆಯಲ್ಲೂ 135 ಸ್ಥಾನ ಬರುತ್ತೆ ಅಂತ ಹೇಳಿದ್ದೆ. ಯಾರೂ ನಂಬಲಿಲ್ಲ, ಆದ್ರೆ 136 ಸ್ಥಾನ ಬಂತು. ಲೋಕಸಭೆಯಲ್ಲೂ ಖಂಡಿತಾ 20-22 ಸ್ಥಾನ ಬರುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತರಬಾರದು: ಒಕ್ಕಲಿಗರ ಸಮಿತಿ ಎಚ್ಚರಿಕೆ

ಅಚ್ಛೇದಿನ ಬೇಡ-ಹಳೆಯ ದಿನ ಕೊಡಿ:
ಬಿಜೆಪಿಯವರು ರಾಮಮಂದಿರ, ಹಿಂದೂ ಮುಸ್ಲಿಂಮರು ಅನ್ನೋದಷ್ಟೆ ಹೇಳ್ತಾರೆ. ಕಾಂಗ್ರೆಸ್‌ನವರು ಅಭಿವೃದ್ಧಿ ಕೆಲಸಗಳ ಮೇಲೆಯೇ ಮತ ಕೇಳ್ತೀವಿ, ಅಭಿವೃದ್ಧಿ ಮೇಲೆ ಗೆಲ್ತೀವಿ ಎಂದರು. ಇದೇ ವೇಳೆ ಮೋದಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಣ ಹಾಕ್ತೀನಿ ಅಂದರು ಹಾಕಿದ್ರಾ? ಗ್ಯಾಸ್ ಬೆಲೆ, ಪೆಟ್ರೋಲ್, ಡಿಸೇಲ್ ಬೆಲೆ ಎಷ್ಟು ಏರಿಕೆ ಆಗಿದೆ. ಅಚ್ಛೇದಿನ ಅಂದ್ರು, ಎಲ್ಲಿ ಬಂತು ಅಚ್ಛೇದಿನ? ನಮಗೆ ಅಚ್ಛೇದಿನ ಬೇಡ ಹಳೆಯ ದಿನವನ್ನೇ ಕೊಡಿ ಅಂತ ಜನ ಕೇಳ್ತಿದ್ದಾರೆ. ಸಬ್ ಕಾ ಸಾತ್‌, ಸಬ್ ಕಾ ವಿಕಾಸ್ ಅಂದ್ರೆ ಇದೇ ನಾ ಎಂದು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: 

Share This Article