ಬಳ್ಳಾರಿ: ಗ್ಯಾರಂಟಿಗಳಿಂದ ಅನುದಾನ ಸಿಗೋದು ಕಷ್ಟ ಆಗ್ತಿದೆ ಅಂತಾ ಸಿಎಂ ಸಿದ್ದರಾಮಯ್ಯ ಆಪ್ತ, ಸಚಿವ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಹೇಳುವ ಮೂಲಕ, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗ್ತಿದೆ ಅನ್ನೋದನ್ನ ಸ್ವತಃ ಒಪ್ಪಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಸಚಿವರು, ಗ್ಯಾರಂಟಿಗಾಗಿ (Guarantee scheme) ಪ್ರತಿವರ್ಷ 55 ರಿಂದ 60 ಸಾವಿರ ಕೋಟಿ ಅನುದಾನ ಬೇಕಾಗ್ತಿದೆ. ಹೀಗಾಗಿ ಗ್ಯಾರಂಟಿಗಳಿಂದಾಗಿ ಅನುದಾನ ಬರೋದು ಕಷ್ಟ ಆಗ್ತಿದೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ – ಡಿಸಿಎಂ ಪರ ಸಚಿವ ಎಂ.ಸಿ ಸುಧಾಕರ್ ಬ್ಯಾಟಿಂಗ್
ಇಲ್ಲಿನ ಶಾಸಕರು ಉತ್ತಮ ಕೆಲಸ ಮಾಡ್ತಿದ್ದಾರೆ. ಅವರು ಅನುದಾನಕ್ಕಾಗಿ ಕಾಲಿಗಾದ್ರೂ ಬಿಳ್ತಾರೆ. ಅಣ್ಣ ಇದು ನನ್ನ ಕ್ಷೇತ್ರದ ಸಮಸ್ಯೆ ಅಣ್ಣ, ನನಗೆ ಅನುದಾನ ಕೊಡಿ ಅಂತ ಕಾಲಿಗೆ ಬಿದ್ದು ಅನುದಾನ ಕೇಳ್ತಾರೆ ಅಂತಾ, ಕೂಡ್ಲಿಗಿ ಶಾಸಕ ಡಾ.ಎನ್.ಟಿ ಶ್ರೀನಿವಾಸ್ ಹೊಗಳೋ ಭರದಲ್ಲಿ ಗ್ಯಾರಂಟಿಯಿಂದ ಅನುದಾನ ಬರ್ತಿಲ್ಲ ಎಂದಿದ್ದಾರೆ.
ಸಚಿವ ಜಮೀರ್ ಅಹ್ಮದ್ ಅವರ ಈ ಹೇಳಿಕೆಯಿಂದ ಅನುದಾನ ಇಲ್ಲ ಅನ್ನೋ ವಿಪಕ್ಷ ನಾಯಕರ ಆರೋಪಕ್ಕೆ ಪುಷ್ಟಿ ಕೊಟ್ಟಂತಾಗಿದೆ. ಇದನ್ನೂ ಓದಿ: ನಮ್ಮ ಸರ್ಕಾರದ ಆಳ್ವಿಕೆಯಲ್ಲಿ ಅಭಿವೃದ್ಧಿಯ ವೇಗ ಬಹಳಷ್ಟು ಹೆಚ್ಚಾಗಿದೆ – ಎನ್‌ಡಿಎಗೆ ಮತ ನೀಡುವಂತೆ ನಿತೀಶ್ ಕುಮಾರ್ ವಿಡಿಯೋ ಸಂದೇಶ


