ಜೈದ್ ಖಾನ್ (Zaid Khan) ನಟನೆಯ ‘ಕಲ್ಟ್’ (Cult) ಸಿನಿಮಾದ ಡ್ರೋನ್ ಹಾನಿ ಪ್ರಕರಣದ ಕುರಿತು ಇದೀಗ ಸಚಿವ ಜಮೀರ್ ಅಹ್ಮದ್ (Zameer Ahmad) ರಿಯಾಕ್ಟ್ ಮಾಡಿದ್ದಾರೆ. ಡ್ರೋನ್ ಆಪರೇಟರ್ ಸಂತೋಷ್‌ಗೆ ಮಗ ಜೈದ್ ಖಾನ್ ಸಹಾಯ ಮಾಡೋದಾಗಿ ಜಮೀರ್ ತಿಳಿಸಿದ್ದಾರೆ. ಇದನ್ನೂ ಓದಿ:BBK 11: ಬಿಗ್ ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ
Advertisement
‘ಕಲ್ಟ್ ಸಿನಿಮಾ ಚಿತ್ರೀಕರಣ ವೇಳೆ, ಡ್ರೋನ್‌ಗೆ ಹಾನಿ ಪ್ರಕರಣದ ಕುರಿತು ಜಮೀರ್ ಮಾತನಾಡಿ, ಡ್ರೋನ್ ವಿಚಾರ ನನ್ನ ಗಮನಕ್ಕೆ ಬಂದಿದೆ. ಚಿತ್ರೀಕರಣದ ವೇಳೆ ಡ್ರೋನ್ ಕ್ಯಾಮೆರಾಗೆ ಡ್ಯಾಮೆಜ್ ಆಗಿದೆ. ಡ್ರೋನ್ ಹಾರಿಸೋದು ಅವರ ಜವಾಬ್ದಾರಿ ಆಗಿದೆ. ಡ್ರೋನ್ ಜಾಸ್ತಿ ಹೈಟ್ ಹಾರಿಸಿ ಡ್ಯಾಮೆಜ್ ಆಗಿದೆ. ಅದಕ್ಕೆ ಯಾರು ಹೊಣೆಯಾಗ್ತಾರೆ? ಎಂದು ಪ್ರಶ್ನಿಸಿದರು.
Advertisement
Advertisement
ಆದರೂ ನಷ್ಟ ತುಂಬಿ ಕೊಡೋದಾಗಿ ನನ್ನ ಮಗ ಒಪ್ಪಿಕೊಂಡಿದ್ದಾನೆ. ತಪ್ಪು ಆಗಿದ್ದು ಡ್ರೋನ್ ಆಪರೇಟರ್ ಕಡೆಯಿಂದಲೇ ಎಂದಿದ್ದಾರೆ. ಅವನು ಬಡವ ಇದ್ದಾನೆ. ಅದಕ್ಕಾಗಿ ಸಹಾಯ ಮಾಡಬೇಕು. ನನ್ನ ಮಗನೇ ಸಹಾಯ ಮಾಡೋದಾಗಿ ತಿಳಿಸಿದ್ದಾರೆ. ಡ್ರೋನ್ ಕ್ಯಾಮೆರಾ ಕೊಂಡುಕೊಳ್ಳಲು ಸಹಾಯ ಮಾಡ್ತೀವಿ ಎಂದು ಜಮೀರ್ ಮಾತನಾಡಿದ್ದಾರೆ.
Advertisement
ಏನಿದು ಪ್ರಕರಣ?
ಇದೇ ತಿಂಗಳ ನ.25ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರತಂಡ ಶೂಟಿಂಗ್ ನಡೆಸುತ್ತಿತ್ತು. ಕಲ್ಟ್ ಚಿತ್ರಕ್ಕೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಹಲವು ಸಿನಿಮಾಗಳಿಗೆ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿರುವ ಸಂತೋಷ್ ಸ್ವಂತವಾಗಿ ಡ್ರೋನ್ ಹೊಂದಿದ್ದರು. 25 ಲಕ್ಷ ರೂ. ಸಾಲಸೋಲ ಮಾಡಿ ಡ್ರೋನ್ ಖರೀದಿಸಿದ್ದ ಸಂತೋಷ್ ಸಿನಿಮಾ ಶೂಟಿಂಗ್‌ಗಾಗಿ ದಿನಕ್ಕೆ 25,000 ರೂ. ಚಾರ್ಜ್ ಮಾಡುತ್ತಿದ್ದರು.
ಮಾರ್ಟಿನ್, ಯುವ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್, ಕಲ್ಟ್ ಚಿತ್ರಕ್ಕೂ ಶೂಟಿಂಗ್ ಮಾಡುವ ಕೆಲಸಕ್ಕೆ ಒಪ್ಪಿಕೊಂಡಿದ್ದರು. ಡ್ರೋನ್‌ನಲ್ಲಿ ಚಿತ್ರೀಕರಣ ಮಾಡುವುದು ರಿಸ್ಕ್ ಇದೆ ಅಂತ ಎಚ್ಚರಿಕೆ ಕೊಟ್ಟಿದ್ದರೂ ನಿರ್ದೇಶಕ ಮಾಡಲೇಬೇಕು ಎಂದು ಒತ್ತಾಯ ಮಾಡಿದ್ರು ಎನ್ನಲಾಗಿದೆ. ಶೂಟಿಂಗ್ ವೇಳೆ ಡ್ರೋನ್ ವಿಂಡ್ ಫ್ಯಾನ್‌ಗೆ ಟಚ್ ಆಗಿ ಪೀಸ್ ಪೀಸ್ ಆಗಿತ್ತು. ಇದಾದ ಬಳಿಕ ಸಂತೋಷ್‌ಗೆ ಕೊಂಚವೂ ನಷ್ಟ ಕಟ್ಟಿಕೊಡದ ಚಿತ್ರತಂಡ ಕಲ್ಟ್ ಚಿತ್ರವನ್ನ ಸಚಿವ ಜಮೀರ್ ಪುತ್ರ ಜೈದ್ ನಿರ್ಮಾಣ ಮಾಡುತ್ತಿದ್ರು. ಹೀಗಾಗಿ ಸಂತೋಷ್ ಜೈದ್ ಬಳಿಯೇ ಪರಿಹಾರ ನೀಡುವಂತೆ ಕೇಳಿಕೊಂಡಿದ್ದ. ಆದ್ರೆ ಸಂತೋಷ್ ಬಳಿ ವೈಟ್ ಪೇಪರ್ ಮೇಲೆ ಜಮೀರ್ ಪುತ್ರ ಜೈದ್ ಸಹಿ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದೂವರೆ ಲಕ್ಷ ರೂ. ಮೌಲ್ಯದ ಫುಟೇಜ್ ರೆಕಾರ್ಡಿಂಗ್ ಆಗಿದ್ದ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ, ಆಧಾರ್ ಕಾರ್ಡ್ ನಂಬರ್ ಸಹ ಬರೆಸಿಕೊಂಡು ಅವಮಾನ ಮಾಡಿದ್ದಾರೆ. ಇದರಿಂದ ಮನನೊಂದು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.