-ಪಾರ್ಕ್ ಮಾಡ್ಬೇಡಿ ಅನ್ನೋರು ಇಲ್ಲ
ಬೆಂಗಳೂರು: ಸಿಕ್ಕಸಿಕ್ಕ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುವಂತಿಲ್ಲ, ಕೆಟ್ಟು ನಿಂತ ವಾಹನಗಳನ್ನು ಪಾರ್ಕ್ ಮಾಡಿದರೆ ಗಂಟೆಗಳ ಲೆಕ್ಕದಲ್ಲಿ ಫೈನ್ ಹಾಕುತ್ತಾರೆ. ಆದರೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಅನ್ನು ಚಾಮರಾಜಪೇಟೆಯ ರೋಡ್‍ನಲ್ಲಿ ಪಾರ್ಕ್ ಮಾಡಲಾಗುತ್ತಿದೆ.
ರಸ್ತೆ ಕಿರಿದಾಗಿದರೂ ಬಿಂದಾಸ್ ಆಗಿ ಬಸ್‍ಗಳನ್ನು ಚಾಮರಾಜಪೇಟೆಯ ರಸ್ತೆಯಲ್ಲಿ ಪಾರ್ಕ್ ಮಾಡಲಾಗಿದೆ. ಹೀಗೆ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡುವ ವಾಹನಕ್ಕೆ ಒಂದು ಸಾವಿರ ದಂಡ ವಿಧಿಸಬೇಕು. ಆದರೆ ಜಮೀರ್ ಅವರ ಬಸ್ಸಿಗೆ ದಂಡ ಬಿಡಿ ಬಸ್ ಅನ್ನು ರಸ್ತೆಯಲ್ಲಿ ಪಾರ್ಕ್ ಮಾಡಬೇಡಿ ಎಂದು ಪೊಲೀಸರು ಹೇಳುತ್ತಿಲ್ಲ.
ಕೆಟ್ಟು ನಿಂತ ಬಸ್‍ಗಳನ್ನು ಕೂಡ ಇನ್ನೊಂದು ಸಿಗ್ನಲ್ ಪಕ್ಕದ ರಸ್ತೆಯಲ್ಲಿ ವರ್ಷಾನುಗಟ್ಟಲೆಯಿಂದ ಪಾರ್ಕ್ ಮಾಡಲಾಗಿದೆ. ಟ್ರಾಫಿಕ್ ನಿಯಮದ ಪ್ರಕಾರ ಕೆಟ್ಟು ನಿಂತ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡಿದರೆ, ಗಂಟೆಗಳ ಲೆಕ್ಕದಲ್ಲಿ ದಂಡ ವಿಧಿಸಬೇಕು. ಆದರೆ ಜಮೀರ್ ಬಸ್‍ಗೆ ಇದ್ಯಾವುದು ಅನ್ವಯವಾಗಲ್ವಾ ಎಂಬ ಪ್ರಶ್ನೆಯೊಂದು ಮೂಡಿದೆ.
ಬಸ್ ಪಾರ್ಕ್ ಮಾಡಿದರಿಂದ ವಾಹನ ಸವಾರರಿಗೆ ಸಂಚರಿಸಲು ಕಷ್ಟವಾಗುತ್ತದೆ. ಜಮೀರ್ ಅವರು ಸಂಚಾರ ಮಾಡುವ ಬಸ್ ಪಾರ್ಕ್ ಮಾಡುವ ಜೊತೆ ಕೆಟ್ಟು ಹೋದ ಬಸ್‍ಗಳನ್ನು ಕೂಡ ಪಾರ್ಕ್ ಮಾಡುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಬಸ್‍ಗಳನ್ನು ಪಾರ್ಕ್ ಮಾಡಲಾಗಿದೆ. ಆದರೆ ಇದೂವರೆಗೂ ಪೊಲೀಸರು ದಂಡ ವಿಧಿಸಿಲ್ಲ.