– ಚಿನ್ನದ ಸರ ಹಾಕಿ ಗೌರವ ಸಮರ್ಪಣೆ
ಬೆಂಗಳೂರು: ವಿಜಯನಗರ (Vijayanagara) ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಮಂಗಳವಾರ ಸ್ವಾತಂತ್ರ್ಯೋತ್ಸವ (Independence Day) ಧ್ವಜಾರೋಹಣದ ಬಳಿಕ ಕಮಲಾಪುರದಲ್ಲಿರುವ ಸ್ವಾತಂತ್ರ‍್ಯ ಯೋಧ ಗುಂಡೂರಾವ್ ದೇಸಾಯಿ (Gundu Rao Desai) ಅವರ ನಿವಾಸಕ್ಕೆ ತೆರಳಿ ಸನ್ಮಾನ ಮಾಡಿದರು.
- Advertisement -
ಫಲ-ತಾಂಬೂಲದ ಜೊತೆಗೆ ವೈಯಕ್ತಿಕವಾಗಿ ಚಿನ್ನದ ಸರ ಹಾಕಿ ಗೌರವಿಸಿ ಆಶೀರ್ವಾದ ಪಡೆದರು. ಬಳಿಕ ಅವರೊಂದಿಗೆ ಮಾತನಾಡಿದ ಜಮೀರ್, ನಿಮ್ಮ ತ್ಯಾಗ ಹಾಗೂ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ ಬಂದು ನಾವು ಅಧಿಕಾರ ಪಡೆಯುವಂತಾಗಿದೆ. ನಿಮ್ಮ ಹೋರಾಟದ ಫಲ ಇದು ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಕೊತ್ವಾಲ್ ಮಾದರಿಯ ಟ್ರೀಟ್ಮೆಂಟ್ ಕೊಡ್ತಾರೆಂದು ಭಯ: ಸಿ.ಟಿ.ರವಿ
- Advertisement -
- Advertisement -
ಗುಂಡೂರಾವ್ ದೇಸಾಯಿ ಅವರು ತಮ್ಮ ನಿವಾಸಕ್ಕೆ ಆಗಮಿಸಿದ ಸಚಿವರನ್ನು ಕಂಡು ಹರ್ಷ ವ್ಯಕ್ತಪಡಿಸಿ, ವಿಜಯನಗರ ಮಾದರಿ ಜಿಲ್ಲೆಯ ಸಂಕಲ್ಪ ತೊಟ್ಟಿರುವ ನಿಮಗೆ ಶುಭವಾಗಲಿ ಎಂದು ಹಾರೈಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ದಿವಾಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯತ್ ಸಿಇಒ ಸದಾಶಿವ ಪ್ರಭು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಯಚೂರಿಗೆ ಏಮ್ಸ್ ತರಲು ಸರ್ಕಾರ ಪ್ರಯತ್ನಿಸುತ್ತಿದೆ: ಡಾ.ಶರಣ ಪ್ರಕಾಶ್ ಪಾಟೀಲ್
- Advertisement -
Web Stories