– ಒಬ್ಬೊಬ್ಬರಿಗೆ ಒಂದು ಚಟ, ಹಾಗೆ ಕುಮಾರಸ್ವಾಮಿ ಸೋಲಿಗೆ ಅಡಿಕ್ಟ್ ಆಗಿದ್ದಾರೆ
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಗೆ (H.D Kumaraswamy)ಸೋಲೋ ಚಟ. ಅಲ್ಲದೇ ಅಭ್ಯರ್ಥಿಗಳನ್ನು ನಿಲ್ಲಿಸೋದು, ಸೋಲಿಸೋದು, ಬಲಿ ಕೊಡೋದು ಅವರ ಚಟ ಎಂದು ಸಚಿವ ಜಮೀರ್ ಅಹಮದ್ (Zameer Ahmed Khan) ವ್ಯಂಗ್ಯವಾಡಿದ್ದಾರೆ.
Advertisement
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಜೊತೆ ತುಂಬಾ ಶಾಸಕರು ಇದ್ದಾರೆ ಎಂದಿದ್ದರು. ಅಲ್ಲದೇ ಲೋಕಸಭೆ ಚುನಾವಣೆ ಆದ ಮೇಲೆ ಈ ಸರ್ಕಾರ ಇರೋದಿಲ್ಲ, ಸರ್ಕಾರ ಬೀಳಿಸ್ತೀವಿ ಎಂದು ಹೇಳಿಕೊಂಡು ಬಂದಿದ್ದಾರೆ. ರಾಜ್ಯಸಭೆ ಚುನಾವಣೆ ಫಲಿತಾಂಶ ಏನ್ ಆಯ್ತು. ಒಂದೇ ಒಂದು ಎಂಎಲ್‍ಎ ಕರೆದುಕೊಳ್ಳೋಕೆ ಕುಮಾರಸ್ವಾಮಿಗೆ ಆಯ್ತಾ? ಬಿಜೆಪಿ ಅವರೇ ಇಬ್ಬರು ಶಾಸಕರು ಬಂದರು ಎಂದಿದ್ದಾರೆ. ಇದನ್ನೂ ಓದಿ: ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!
Advertisement
Advertisement
ಕುಮಾರಸ್ವಾಮಿ ಏನೋ ನಿರೀಕ್ಷೆ ಇಟ್ಟುಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇದು ಮೂರನೇ ಬಾರಿ ಕುಮಾರಸ್ವಾಮಿ ಸೋಲು ಅನುಭವಿಸುತ್ತಿರೋದು. ಒಬ್ಬೊಬ್ಬರಿಗೆ ಒಂದೊಂದು ಚಟ ಇರುತ್ತೆ. ಕುಮಾರಸ್ವಾಮಿಗೂ ಇಂತಹ ಚಟ ಇದೆ. ಕುಮಾರಸ್ವಾಮಿ ಸೋಲಿಗೆ ಅಡಿಕ್ಟ್ ಆಗಿದ್ದಾರೆ ಎಂದು ಅವರು ಕುಟುಕಿದ್ದಾರೆ.
Advertisement
ಯಾರನ್ನು ನಿಲ್ಲಿಸಬೇಕು, ಸೋಲಿಸಬೇಕು ಹಾಗೂ ಬಲಿಕೊಡಬೇಕು ಇದನ್ನೇ ಕುಮಾರಸ್ವಾಮಿ ಮಾಡೋದು. ಪಾಪ ಫಾರೂಕ್‍ಗೆ ಸಿಗಬೇಕಿತ್ತು. ಫಾರೂಕ್ ಎರಡು ಸಾರಿ ಬಲಿ ಆದರು. ಈಗ ಅಲ್ಪಸಂಖ್ಯಾತರು ಯಾರು ಸಿಗಲಿಲ್ಲ. ಅದಕ್ಕೆ ಕುಪ್ಪೇಂದ್ರ ರೆಡ್ಡಿ ಬಲಿಯಾದರು. ಕುಮಾರಸ್ವಾಮಿ ಯಾರನ್ನಾದರೂ ಬಲಿ ಹಾಕ್ತಾನೇ ಇರಬೇಕು ಎಂದು ಕಾಯುತ್ತಾ ಇರುತ್ತಾರೆ ಎಂದು ಕಿಡಿಕಾರಿದರು.
ನಮ್ಮ ಟೈಂ ಸರಿಯಿಲ್ಲ ಅಂದರೆ ದೇವಸ್ಥಾನದಲ್ಲೋ ಅಥವಾ ಶಾಸ್ತ್ರದಲ್ಲಿ ಯಾರೇ ನಿಮ್ಮ ಟೈಂ ಸರಿಯಿಲ್ಲ. ಅದಕ್ಕೆ ಒಂದು ಕುರಿನೋ. ಕೊಳಿನೋ ಬಲಿ ಕೊಡಿ ಎಂದು ಹೇಳ್ತಾರೆ. ಕುಮಾರಸ್ವಾಮಿ ಜನರನ್ನ ಬಲಿ ಕೊಡ್ತಿದ್ದಾರೆ ಎಂದು ಹೆಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- KRSಗೆ ಅಕ್ರಮವಾಗಿ ಅಳವಡಿಸಿದ್ದ ಮೋಟಾರ್‌ಗೆ ಕರೆಂಟ್ ಕಟ್, ಪಂಪ್ ಸೀಜ್