– ಸಿಎಂ ಆಗ್ಲಿ, ಪಿಎಂ ಆಗ್ಲಿ ಯಾರೂ ಗೂಟ ಹೊಡ್ಕೊಂಡ್ ಇರಲ್ಲ
– ಬಿಹಾರ ಚುನಾವಣೆಗೆ ಮುಂಚೆಯೇ ಸ್ಫೋಟ ಹೇಗಾಯ್ತು? ಅಂತ ಪ್ರಶ್ನೆ
ಬೆಂಗಳೂರು: ಬಿಹಾರ ಚುನಾವಣೆಗೆ (Bihar Elections) ಒಂದು ದಿನ ಮುಂಚೆಯೇ ದೆಹಲಿಯಲ್ಲಿ ಸ್ಫೋಟ ಹೇಗಾಯಿತು ಎಂದು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪ್ರಶ್ನಿಸಿದರು.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಆಶ್ಚರ್ಯ ಆಗೋದು ಏನಂದ್ರೆ ಚುನಾವಣೆಗೆ ಒಂದು ದಿನ ಮುಂಚೆ ಇದು ಹೇಗಾಯ್ತು? ಅದೇನೇ ಇರಲಿ ಗಾಯಗೊಂಡವರ ಆರೋಗ್ಯ ಸರಿಹೋಗಲಿ ಅಂತ ಪ್ರಾರ್ಥನೆ ಮಾಡ್ತೀನಿ ಎಂದರು. ಇದನ್ನೂ ಓದಿ: ಉಗ್ರ ಸಂಘಟನೆಗಳೊಂದಿಗೆ ನಂಟು; ಈ ಹಿಂದೆ ವಜಾಗೊಂಡಿದ್ದ ಪ್ರೊಫೆಸರ್ ನೇಮಿಸಿಕೊಂಡಿತ್ತು ಅಲ್ ಫಲಾಹ್ ವಿವಿ
ರಾಜಕೀಯ ಕಾರಣಕ್ಕೆ ಸ್ಫೋಟ (Delhi Explosion) ಆಗಿದೆ ಅಂತ ಟುಸ ಪುಸ ಅಂತ ಸುದ್ದಿ ಬರ್ತಿದೆ. ಹಾಗೇನಾದರೂ ರಾಜಕೀಯಕ್ಕೆ ಮಾಡಿದ್ರೆ ಯಾರಿಗೂ ಒಳ್ಳೆಯದಾಗಲ್ಲ. ರಾಜಕೀಯದ ಲಾಭಕ್ಕೆ ಮಾಡಿದ್ರೆ ಅವರಿಗೂ ಒಳ್ಳೆಯದಾಗಲ್ಲ, ಅವರ ಕುಟುಂಬಕ್ಕೂ ಒಳ್ಳೆಯದಾಗಲ್ಲ, ಯಾರಿಗೂ ಒಳ್ಳೆಯದಾಗಲ್ಲ. ಯಾರೂ ಇಲ್ಲಿಯೇ ಗೂಟ ಹೊಡೆದುಕೊಂಡು ಇರಲ್ಲ. ಸಿಎಂ ಆಗ್ಲಿ, ಪ್ರಧಾನಿ ಆಗ್ಲಿ ಯಾರೂ ಶಾಶ್ವತ ಇಲ್ಲೇ ಗೂಟ ಹೊಡೆದು ಇರಲ್ಲ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: Delhi Blast | ಭೂತಾನ್‌ನಿಂದ ನೇರವಾಗಿ ಆಸ್ಪತ್ರೆಗೆ ಪ್ರಧಾನಿ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿದ ನಮೋ
ಟೆರರಿಸ್ಟ್‌ಗೆ ಜಾತಿಯೇ ಇಲ್ಲ, ಇಸ್ಲಾಂ ಧರ್ಮದಲ್ಲಿ ಟೆರರಿಸಂಗೆ ಯಾರೂ ಅವಕಾಶ ಕೊಟ್ಟಿಲ್ಲ. ಟೆರರಿಸಂ ಮಾಡುವವನು ಇಸ್ಲಾಂ ಧರ್ಮದವನೇ ಅಲ್ಲ. ಯಾವ ಧರ್ಮದಲ್ಲೂ ಹೀಗೆ ಮಾಡಿ ಅಂತ ಹೇಳಿಕೊಡಲ್ಲ. ಹಾಗೆ ಮಾಡಿದ್ರೆ ಅಂತಹವನು ಹುಳ ಬಿದ್ದು ಸಾಯ್ತಾನೆ ಎಂದು ಶಾಪ ಹಾಕಿದ್ರು.
ನವೆಂಬರ್ 11ಕ್ಕೆ ಬಿಹಾರ ಚುನಾವಣೆ ಇತ್ತು. ಒಂದು ದಿನಕ್ಕೆ ಮುಂಚೆಯೇ ಬ್ಲಾಸ್ಟ್ ಆಗಿದೆ. ಟೆರರಿಸ್ಟ್‌ಗಳಿಗೆ ರಾಜಕೀಯ ಸಂಪರ್ಕ ಇತ್ತು ಅನ್ನೋದನ್ನ ನಾನು ಕೇಳಿದ್ದೇನೆ. ಎಲ್ಲವೂ ಈಗ ಊಹಾಪೋಹಗಳು ಸೃಷ್ಟಿ ಆಗ್ತಿವೆ. ಹಾಗೇನಾದ್ರೂ ಆಗಿದ್ರೆ, ಯಾರಿಗೂ ಒಳ್ಳೇದಾಗಲ್ಲ. ರಾಜಕೀಯದಲ್ಲಿ ಇರುವವರು ಜಾತಿ ಮಾಡಬಾರದು ಎಂದು ಹೇಳಿದರು. ಇದನ್ನೂ ಓದಿ: ಸೃಜನ್ ಲೋಕೇಶ್ ನಿರ್ದೇಶಿಸಿ, ನಟಿಸಿದ ಜಿಎಸ್‌ಟಿ ಚಿತ್ರದ ಟ್ರೈಲರ್ ರಿಲೀಸ್


