ಹುಬ್ಬಳ್ಳಿ: ಹಿಜಬ್ ಹಾಕುವುದು ಅವರ ರೈಟ್ಸ್, ನೂರಾರು ವರ್ಷದಿಂದ ಹಾಕಿಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಬ್ ಗಲಾಟೆ ವಿಚಾರವನ್ನು ಸರ್ಕಾರ ಸರಳವಾಗಿ ತೆಗೆದುಕೊಂಡಿತ್ತು. ಇದು ಕೋರ್ಟ್‍ನಲ್ಲಿ, ವಿಚಾರಣೆ ನಡೆಯುತ್ತಿದೆ ಕಾದು ನೋಡೋಣ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಹಿಜಬ್ ಹಾಕಿಕೊಂಡು ಬರುತ್ತಿದ್ದಾರೆ. ಇವರು ಮಕ್ಕಳಲ್ಲಿ ಜಾತಿ ಬೀಜ ಬಿತ್ತಿ ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದಾರೆ.
Advertisement
Advertisement
ನ್ಯಾಯಾಲಯದ ಆದೇಶ ನೂರಕ್ಕೆ ನೂರು ನಮ್ಮ ಪರ ಬರುತ್ತೆ ಅನ್ನೋ ನಂಬಿಕೆ ಇದೆ. ಬಿಜೆಪಿ ಅವರು ರಾಜಕೀಯ ಲಾಭಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹಿಜಬ್ ಹಾಕೋದು ಅವರ ರೈಟ್ಸ್, ನೂರಾರು ವರ್ಷದಿಂದ ಹಾಕಿಕೊಂಡು ಬರುತ್ತಿದ್ದಾರೆ. ರಾಮಮಂದಿರವೇ ಬೇರೆ ಹಿಜಬ್ ಬೇರೆಯಾಗಿದೆ. ರಾಮಮಂದಿರ ತೀರ್ಪು ಬಂದಾಗ ನಾವು ಸ್ವಾಗತ ಮಾಡಿದ್ದೆವು. ಪಕ್ಷ ಅಧಿಕಾರಕ್ಕೆ ಬರಬೇಕು ಅಂತ ಈಗ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನರಿಗೆ ಒಳ್ಳೆದಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ರಾಜರ ವಂಶವನ್ನು ನಾಶ ಮಾಡಲು ಹೋದ ಟಿಪ್ಪು ಸುಲ್ತಾನ್ ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ
Advertisement
Advertisement
ಸಿಎಂ ಇಬ್ರಾಹಿಂ 40 ಕೋಟಿ ಸಾಲದ ಬಗ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಮುಂದೆ ಸಾಲದ ಬಗ್ಗೆ ಬೇಡಿಕೆ ಇಟ್ಟಿಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ಏನೇ ತೀರ್ಮಾನ ಮಾಡಿದರು ಅದೇ ಫೈನಲ್. ಸಿಎಂ ಇಬ್ರಾಹಿಂ ಕಾಂಗ್ರೆಸ್‍ನಲ್ಲೇ ಇದ್ದಾರೆ ಎಲ್ಲೂ ಹೋಗಿಲ್ಲ, 10ದಿನದ ಹಿಂದೆ ಬೇಜಾರಾಗಿ ಹಾಗೆ ಹೇಳಿದ್ರು, ಸಿದ್ದರಾಮಯ್ಯ ಅವರನ್ನ ಬಿಟ್ಟು ಅವರು ಎಲ್ಲೂ ಹೋಗಲ್ಲ. ನನಗೆ ಸಿ ಎಂ ಇಬ್ರಾಹಿಂ ಅವರೇ ನಾಯಕರು, ಅವರು ನಮ್ಮ ಸಮಾಜದ ನಾಯಕರು. ನಮ್ಮ ನಾಯಕರು ಅಂತ ನಾನೇ ಒಪ್ಪಿಕೊಂಡಿದ್ದೀನಿ, ಅವರ ಅನುಭವದ ಮುಂದೆ ನಾನೇನು ಅಲ್ಲ ಎಂದಿದ್ದಾರೆ.