RSS, ಭಜರಂಗದಳ ಬ್ಯಾನ್ ಮಾಡಲಿ: ಜಮೀರ್ ಅಹ್ಮದ್

Public TV
2 Min Read
ZAMEER

ಬೆಂಗಳೂರು: ಆರ್‌ಎಸ್‌ಎಸ್‌, ಭಜರಂಗದಳ ಬ್ಯಾನ್ ಮಾಡಲಿ. ನಮ್ಮ ಮನೆಗೆ ಬಂದು ಝಟ್ಕಾ ಕಟ್ ಬೇಕು ಎಂದರೆ ಮಾಡಿಕೊಡುತ್ತೇವೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಆರ್‌ಎಸ್‌ಎಸ್‌, ಭಜರಂಗದಳ ಬ್ಯಾನ್ ಮಾಡಬೇಕು. SDPI, PPI ಏಕೆ ಬ್ಯಾನ್ ಮಾಡಬೇಕು? ನಾವು ಮುಖ್ಯಮಂತ್ರಿಗಳಿಗೆ ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್ ಮಾಡಿ ಅಂತಾ ಮನವಿ ಕೊಟ್ಟಿಲ್ಲ. ಅವತ್ತು ಸಿಎಂ ಭೇಟಿಯಾಗಿದ್ದು ಹಿಜಬ್ ವಿಚಾರಕ್ಕೆ ಮಾತ್ರ ಎಂದು ಜಮೀರ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

ಅಜಾನ್ ಕಡಿಮೆ ಸೌಂಡ್ ಕೊಟ್ಟು ಮಾಡ್ತಾರೆ, ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 6ಗಂಟೆ ತನಕ ಮಾತ್ರ ಮೈಕ್ ಬಳಸುವಂತಿಲ್ಲ ಅಂತಿದೆ. ಬೆಳಗ್ಗೆ ಪ್ರಾರ್ಥನೆಗೆ ಕಡಿಮೆ ಸೌಂಡ್ ಕೊಟ್ಟು ಆಜಾನ್ ಮಾಡಲಾಗುತ್ತೆ ಅಂತಾ ಶಾಸಕ ಜಮೀರ್ ಅಹಮದ್ ಖಾನ್ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಪಿತೂರಿ ನಡೆಸಿದೆ: ಶ್ರೀನಿವಾಸ್ ಮಾನೆ

ZAMEER 2 1

ಹಲಾಲ್ ವಿಷಯ ಏಕೆ ಬಂತು? ಇದರಿಂದ ಏನ್ ಸಾಧನೆ ಮಾಡ್ತೀರಿ? ಅಂತಾ ಪ್ರಶ್ನಿಸಿದ್ರು. ಕೋಡಿಹಳ್ಳಿ ಚಂದ್ರಶೇಖರ್, ನಟ ಶಿವರಾಜ್ ಕುಮಾರ್ ಸೇರಿದಂತೆ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ನಾವು ಬಹಳ ವರ್ಷಗಳಿಂದ ಸಾಬ್ರುಗಳಿಂದಲೇ ಮಾಂಸ ತರೋದು ಅಂತೇಳಿದ್ದಾರೆ. ಬಹುತೇಕ ಹೈವೇಗಳಲ್ಲಿ ಹಿಂದೂಗಳ ಹೋಟೆಲ್‍ಗಳು ಇವೆ. ಗ್ರೀನ್ ಲೈಟ್ ಇದ್ದರೆ ಹಲಾಲ್ ಇದೆ ಅಂತಾ ಅರ್ಥ. ಲಾರಿ ಓಡಿಸೋರು ಹೆಚ್ಚು ಮುಸ್ಲಿಂ ಡ್ರೈವರ್‌ಗಳು ಇದ್ದಾರೆ. ಹಾಗಾಗಿ ಹಲಾಲ್ ಇರೋ ಕಡೆ ಹೋಗಿ ತಿಂತಾರೆ. ಹಲಾಲ್ ಇಲ್ಲ ಅಂದರೆ ಅವರು ಹಸಿದುಕೊಂಡು ಸತ್ತುಹೋಗ್ತಾರೆ. ವ್ಯಾಪಾರ ಮಾಡುವ ಹೊಟ್ಟೆ ಮೇಲೆ ಏಕೆ ಹೊಡೆಯುತ್ತೀರಿ? ನಾವೆಲ್ಲ ಅಣ್ಣತಮ್ಮಂದಿರಂತೆ ಬಾಳೋಣ, ಹಲಾಲ್ ನಿಂದ ಏನ್ ಸಾಧಿಸ್ತೀರಿ ಹೇಳಿ? ಅಂತಾ ಖಾರವಾಗಿ ಪ್ರಶ್ನಿಸಿದ್ದಾರೆ.

ZAMEER

ನಮ್ಮ ಮನೆಗೆ ಬಂದು ಹಲಾಲ್ ಬೇಡ ಎಂದರೆ ಜಟ್ಕಾನೇ ಮಾಡಿಕೊಡುತ್ತೇವೆ. ಹಲಾಲ್ ತಿನ್ನೋದು ಬಿಡೋದು ನಿಮ್ಮ ಇಚ್ಛೆ. ನನಗೆ ನಿನ್ನೆ ಯುಗಾದಿ ದಿನ ಒಬ್ಬ ಹಿಂದೂ ಸ್ನೇಹಿತ ಹಲಾಲ್ ಬಿರಿಯಾನಿ ಮಾಡಿ ಕಳ್ಸಿದ್ದ. ಹಲಾಲ್ ಇಷ್ಟ ಇದ್ದವರು ಹಲಾಲ್ ತಿಂತಾರೆ. ನಾವೇನೂ ಜಬರ್ ದಸ್ತಿ ಮಾಡಿ ಹಲಾಲ್ ತಿನ್ನಬೇಕು ಅಂತೇಳಲ್ಲ. ಆದರೆ ನಾವು ಹಲಾಲ್ ಬಿಟ್ಟು ಬೇರೆ ತಿನ್ನಲ್ಲ, ಹಲಾಲ್ ಇಲ್ಲ ಎಂದರೆ ಮುಸಾಲ್ಮಾನ್ ಹಂಗೆ ಸತ್ತೋಗ್ತಾನೆ ಅಂತಾ ಜಮೀರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *