Advertisements

ರೇವಣ್ಣ ಡಿಸಿಎಂ ಆಗುವುದನ್ನು ತಪ್ಪಿಸಿದ್ದೇ ಎಚ್‍ಡಿಕೆ: ಜಮೀರ್ ಬಾಂಬ್

– ಸ್ವಂತ ಅಣ್ಣ ರೇವಣ್ಣನನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ
– ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ, ಜೆಡಿಎಸ್ ಹೈಕಮಾಂಡ್ ಪದ್ಮನಾಭ ನಗರದಲ್ಲಿ
– RSS ವಿರುದ್ಧ ಮಾತಾನಾಡುತ್ತಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ

ಬೆಂಗಳೂರು: ಕುಮಾರಸ್ವಾಮಿ ಯಾರನ್ನು ಸಹಿಸಿಕೊಳ್ಳುವುದಿಲ್ಲ, ಅವರು ಸ್ವಂತ ಅಣ್ಣ ರೇವಣ್ಣನನ್ನೇ ಸಹಿಸಿಕೊಳ್ಳಲಿಲ್ಲ. ರೇವಣ್ಣ ಅವರು ಡಿಸಿಎಂ ಆಗುವುದನ್ನು ತಪ್ಪಿಸಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧವಾಗಿ ಬಾಂಬ್ ಸಿಡಿಸಿದ್ದಾರೆ.

Advertisements

ಕುಮಾರಸ್ವಾಮಿ RSS ವಿರುದ್ಧ ಮಾತಾನಾಡುತ್ತಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ ಆಗಿದೆ. ಅವರು ಯಾರನ್ನ ಬೆಳೆಸಿದ್ದಾರೆ? ಒಬ್ಬ ಒಕ್ಕಲಿಗರನ್ನೂ ಬೆಳೆಸಲಿಲ್ಲ. ಸ್ವಂತ ಅಣ್ಣ ರೇವಣ್ಣನನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ, ರೇವಣ್ಣ ಡಿಸಿಎಂ ಆಗ್ತಾರೆ ಅಂತ ಬಿಜೆಪಿಗೆ ಅಧಿಕಾರ ಕೊಡಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಗಂಭಿರ ಆರೋಪವನ್ನು ಮಾಡಿದ್ಧಾರೆ.

Advertisements

20-20 ಸರ್ಕಾರದಲ್ಲಿ ಅವರು ಬಿಜೆಪಿಗೆ ಯಾಕೆ ಅಧಿಕಾರ ಬಿಟ್ಟುಕೊಡಲಿಲ್ಲ ಗೊತ್ತಾ? ಬಿಜೆಪಿಗೆ ಬಿಟ್ಟುಕೊಡಬೇಕು ಅಂತಲ್ಲ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟರೆ ರೇವಣ್ಣ ಡಿಸಿಎಂ ಆಗುತ್ತಾರೆ ಅನ್ನೋದನ್ನ ಸಹಿಸಿಕೊಳ್ಳೋಕೆ ಕುಮಾರಸ್ವಾಮಿಗೆ ಆಗಲಿಲ್ಲ. ಮುಸ್ಲಿಂ ಆಗಿ ನಾನೇ ಹೇಳಿದೆ ಆಡಿದ ಮಾತಿನಂತೆ ಬಿಜೆಪಿಯವರಿಗೆ ಅಧಿಕಾರ ಬಿಟ್ಟು ಕೊಡೋಣ ಎಂದಿದ್ದೆ. ಅವರು ಕೇಳಲಿಲ್ಲ ಅದನ್ನ ಈಗ ಅನುಭವಿಸುತ್ತಿದ್ದಾರೆ ಎಂದು ಕುಮಾಸ್ವಾಮಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್

Advertisements

ಸಿದ್ದರಾಮಯ್ಯ ಜೆಡಿಎಸ್‍ನಲ್ಲಿ ಇದ್ದಾಗ ಜೆಡಿಎಸ್ 58 ಸೀಟ್ ಗೆದ್ದಿತ್ತು. ಅಮೇಲೆ 28, 40, 37 ಸೀಟು ಗೆದ್ದಿದ್ದಾರೆ ಯಾವಾಗಲಾದರು 58ಕ್ಕೆ ರೀಚ್ ಆಯ್ತ, ಸಿದ್ದರಾಮಯ್ಯ ಬಿಟ್ಟಮೇಲೆ? ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಇದೆ. ಜೆಡಿಎಸ್ ಹೈ ಕಮಾಂಡ್ ಪದ್ಮನಾಭ ನಗರದಲ್ಲೇ ಇದೆ ಎನ್ನುತ್ತಾರೆ. ಇಲ್ಲೇ ಘೋಷಣೆ ಮಾಡಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ನನ್ನನ್ನ ಜೆಡಿಎಸ್ ನಿಂದ ಸಿಎಂ ಮಾಡೋದಾದರೆ ಮೊದಲು ದೇವೇಗೌಡರು ಕುಮಾರಸ್ವಾಮಿ ಪ್ರೆಸ್ ಮೀಟ್ ಮಾಡಿ ಹೇಳಲಿ ಬಹಿರಂಗವಾಗಿ ಆಮೇಲೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು? ರಾಮನಗರ ಮುಸ್ಲಿಂ ಅಭ್ಯರ್ಥಿಗೆ ಬಿಟ್ಟು ಕೊಡಬೇಕಿತ್ತು. ಬೈ ಎಲೆಕ್ಷನ್‍ನಲ್ಲೂ ಅದರೂ ಬೇರೆ ಅಭ್ಯರ್ಥಿ ನಿಲ್ಲಲು ಹೇಳಬೇಕಿತ್ತು. ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ದರು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು. ಮುಸ್ಲಿಂ ಕಾಳಜಿ ತೋರಿಸಬೇಕಿತ್ತು. ಕುಮಾರಸ್ವಾಮಿ ಸ್ವಂತ ಅಣ್ಣಾ ರೇವಣ್ಣ ಸಹಿಸಿಕೊಳ್ಳಲಿಲ್ಲ. ಯಡಿಯೂರಪ್ಪಗೆ ಅಧಿಕಾರ ಬಿಟ್ಟು ಕೊಟ್ರೆ ರೇವಣ್ಣ ಡಿಸಿಎಂ ಆಗುತ್ತಾನೆ ಅಂತ ಅಧಿಕಾರ ಬಿಟ್ಟು ಕೊಡಲಿಲ್ಲ. ದೇವೇಗೌಡರು ಜಾತ್ಯತೀತ ನಾಯಕರಾಗಿದ್ದಾರೆ. ಕುಮಾರಸ್ವಾಮಿ ದೇವೇಗೌಡರಲ್ಲಿ ಒಂದು ಪರ್ಸೆಂಟ್ ಸಹ ಇಲ್ಲ. ಸಿಎಂ ಇಬ್ರಾಹಿಂ ಒಳ್ಳೆಯ ಭಾಷಣಕಾರರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್‍ಲ್ಲಿ ಇಟ್ಟಿದ್ದಾರೆ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ವಿರೋಧ ಮಾಡಿದವರು. ಹಾಗಾದ್ರೆ ಟಿಪ್ಪು ಜಯಂತಿಯಲ್ಲಿ ಯಾಕೆ ಭಾಗವಹಿಸಿದ್ರು ಎಂದು ಪ್ರಶ್ನೆ ಮಾಡಿದ್ಧಾರೆ. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ

ಜಾಫರ್ ಷರೀಫ್ ಅವರನ್ನ ರಾಜಕೀಯವಾಗಿ ಕೊಲೆ ಮಾಡಿದ್ರು. ಸಿಎಂ ಇಬ್ರಾಹಿಂ ಅವರನ್ನ ಅವರ ವಿರುದ್ಧ ನಿಲ್ಲಿಸಿ ಸೋಲಿಸಿದರು. ಜಾಫರ್ ಷರಿಫ್ ಬಗ್ಗೆ ಕಾಳಜಿ ತೋರಿಸಿದ್ರಾ? ಅವರ ಮೊಮ್ಮಗ ಹೆಬ್ಬಾಳದಲ್ಲಿ ಸೋಲಿಸಿದವರು ಜೆಡಿಎಸ್ ಅವರೇ ಆಗಿದ್ದಾರೆ. ಅವನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿ ಸೋಲಿಸಿದ್ದಾರೆ. ಫಾರೂಖ್ ಅವರನ್ನ ಡಿಸಿಎಂ ಮಾಡಿ ಗೃಹ ಮಂತ್ರಿ ಮಾಡುತ್ತೇವೆ ಎಂದು 2018 ಪ್ರಚಾರ ಸಮಯದಲ್ಲಿ ಹೇಳಿದ್ದರು ಮಾಡಿದ್ರಾ? ಗೆದ್ದ ಬಳಿಕ ಪರಿಷತ್ ಸದಸ್ಯ ಮಾಡಿದ್ದೇ ಜಾಸ್ತಿಯಾಗಿದೆ. ಫಾರೂಕ್ ಕಾಲಿಗೆ ಬಿದ್ದು ಕೇಳಿದ್ರೂ ಮಾಡಲಿಲ್ಲ, ಇದು ಮುಸ್ಲಿಂರ ಮೇಲೆ ಇರೋ ಕಾಳಜಿಯಾಗಿದೆ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಜಮೀರ್ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಅಗರ ಕೆರೆ ರಾಜಕಾಲುವೆಗಳು, ಸುತ್ತಲಿನ ಲೇಔಟ್ ಚರಂಡಿ ದುರಸ್ತಿಗೆ ಶೀಘ್ರ ಕ್ರಮ: ಬೊಮ್ಮಾಯಿ

Advertisements
Exit mobile version