ಜೆಡಿಎಸ್, ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ: ಜಮೀರ್

Public TV
1 Min Read
ZAMEER AHMAD KHAN

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಳು ಸ್ಥಾನದಲ್ಲಿ ಸ್ಪರ್ಧಿಸಿರುವುದು ಅನುಮಾನ ಮೂಡಿಸಿದೆ. ಎಲ್ಲಾ 25 ಸ್ಥಾನಕ್ಕು ಅಭ್ಯರ್ಥಿ ಹಾಕಬೇಕಿತ್ತು. ಕೇವಲ 7 ಸ್ಥಾನಕ್ಕೆ ಹಾಕಿರುವುದು ಅನುಮಾನಸ್ಪದವಾಗಿ ಕಾಣುತ್ತಿದೆ. ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಆರೋಪಿಸಿದ್ದಾರೆ.

jds

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನವರಿಗೆ ಅಭ್ಯರ್ಥಿಗಳು ಇಲ್ಲವಾ? ಅಭ್ಯರ್ಥಿ ಇಲ್ಲದಿದ್ದರೆ ಇಲ್ಲ ಅಂತ ಸ್ಪಷ್ಟಪಡಿಸಲಿ. ನನಗೆ ಅನಿಸುತ್ತಿರುವುದು ಬಿಜೆಪಿಗೆ ಲಾಭ ಮಾಡಿಕೊಡಲು ಜೆಡಿಎಸ್ ಮಾಡಿರುವ ತಂತ್ರ ಅಂತ ಅನಿಸುತ್ತಿದೆ. ಮುಂದಿನ ವಿಧಾನಸಭ ಚುನಾವಣೆಯಲ್ಲಿ ಜೆಡಿಎಸ್ ಸಿಂಗಲ್ ಡಿಜಿಟ್ ಅಷ್ಟೆ ಗೆಲ್ಲುವುದು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮೌನ ಡೇಂಜರ್, ಎಚ್ಚರಿಕೆ ಇರಲಿ – ಡಿಕೆಶಿಗೆ ಕಾಲೆಳೆದ ಬಿಜೆಪಿ

BJP JDS

ಸಿದ್ದರಾಮಯ್ಯ ಅವರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್, ನನ್ನ ಸಿದ್ದರಾಮಯ್ಯ ಸಂಬಂಧ ಸಾಯುವವರೆಗು ಕೆಡುವುದಿಲ್ಲ. ಕೆಡಲು ಸಾಧ್ಯವು ಇಲ್ಲ. ಅಂದು ಸಿದ್ದರಾಮಯ್ಯ ಭಾಷಣಕ್ಕೆ ನಮ್ಮ ಬೆಂಬಲಿಗರು ಅಡ್ಡಿ ಮಾಡಿಲ್ಲ. ಸಿದ್ದರಾಮಯ್ಯ ಭಾಷಣ ಮೊಟಕುಗೊಳಿಸಿಲ್ಲ. ಪುನೀತ್ ರಾಜ್‍ಕುಮಾರ್ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಕಾರಣ 5 ನಿಮಿಷ ಮಾತನಾಡಿ ಹೋಗಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ನನ್ನ ಅಭಿಮಾನಿಗಳು ಜೈಕಾರ ಕೂಗಿದ್ದು ಕಂಡು ಸಿದ್ದರಾಮಯ್ಯ ಖುಷಿಯಾಗಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೊಟ್ಟೆಕಿಚ್ವು ಪಟ್ಟುಕೊಳ್ಳುವ ಮನುಷ್ಯ ಅಲ್ಲ. ಅವರಿಗೆ ಜೊತೆಗಾರರು ಬೆಳೆದರೆ ಸಂತೋಷವಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ನೆಪಮಾತ್ರಕ್ಕೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಜನರ ಸಂಕಷ್ಟವನ್ನು ಕೇಳಿಲ್ಲ. ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಘೋಷಣೆ ಮಾಡಿಲ್ಲ. ನಿನ್ನೆ ಸಿಎಂ ನೆಪಮಾತ್ರಕ್ಕೆ ಕೆಲವು ರಸ್ತೆಗಳಿಗೆ ಹೋಗಿ ಬಂದಿದ್ದಾರೆ. ಇದರಿಂದ ಯಾವ ಪ್ರಯೋಜನ ಇಲ್ಲ ಎಂದು ಸಿಎಂ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಥೂ ಥೂ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಮಯವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Share This Article
Leave a Comment

Leave a Reply

Your email address will not be published. Required fields are marked *