ದಾವಣಗೆರೆ: ಗೋಮಾಂಸ ಪ್ರಕರಣವನ್ನು ಪ್ರಸ್ತಾಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿಂಹ ಎಂದು ಶಾಸಕ ಜಮೀರ್ ಅಹ್ಮದ್ ಕೊಂಡಾಡಿದರು.
ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಅಲ್ಪಸಂಖ್ಯಾತ ವಿಭಾಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಗೋಹತ್ಯೆಯನ್ನು ನಿಷೇಧ ಮಾಡಿದೆ. ಆದರೆ ಸಿದ್ದರಾಮಯ್ಯ ಅವರು, ನಾವು ಇಂದು ಗೋಮಾಂಸ ತಿಂದಿಲ್ಲ ಅಂದರೆ ನಾಳೆಯಾದರೂ ತಿನ್ನುತ್ತೇವೆ ಏನ್ ಮಾಡುತ್ತಿರೋ ಮಾಡ್ಕೋಳಿ ಎನ್ನುವ ಮೂಲಕ ಸರ್ಕಾರದ ವಿರುದ್ಧವೇ ಮಾತನಾಡಿದ್ದರು ಎಂದು ನೆನಪಿಸಿಕೊಂಡರು.
Advertisement
Advertisement
ಸಿದ್ದರಾಮಯ್ಯ ಅವರು ಒಂದು ಸಿಂಹ ಇದ್ದಂತೆ ಎಂದ ಅವರು ಟಿಪ್ಪು ಜಯಂತಿಯನ್ನು ಬ್ಯಾನ್ ಮಾಡಿ ಎಂದಾಗಲೂ ಸಿದ್ದರಾಮಯ್ಯ ನಮ್ಮ ಪರ ನಿಂತಿದ್ದಾರೆ. ಆಗಲೂ ಅವರು ಸರ್ಕಾರಕ್ಕೆ ಸವಾಲು ಹಾಕಿ, ನೀವು ಏನ್ ಮಾಡ್ತಿರಾ ಮಾಡ್ಕೊಳ್ಳಿ. ನಾನು ಟಿಪ್ಪು ಜಯಂತಿ ಮಾಡ್ತೀನಿ ಎಂದು ಬ್ಯಾಂಕ್ವೆಟ್ ಹಾಲ್‍ನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿದ್ದರು ಎಂದು ಹೊಗಳಿದರು. ಇದನ್ನೂ ಓದಿ: ಯಾರೇ ಆಗಲಿ ವೈಯಕ್ತಿಕವಾಗಿ ಮಾತಾಡೋದು ಸರಿಯಲ್ಲ- ಜಮೀರ್‌ಗೆ ನಲಪಾಡ್ ಟಾಂಗ್
Advertisement
Advertisement
2008ರಲ್ಲಿ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಬಂದಿದ್ದು, ನನಗೆ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನ ನೀಡಿದ್ದು ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿತು. ಕಾಂಗ್ರೆಸ್‍ನಲ್ಲಿ ನನಗಿಂತ ಹಿರಿಯರಾದ ತನ್ವೀರ್ ಸೇಠ್, ಹ್ಯಾರಿಸ್‍ನಂತಹವರು ಇದ್ದರು. ಆದರೂ ನನ್ನನ್ನು ಮಂತ್ರಿ ಮಾಡಿದ್ದರು. ಆಗ ರಣದೀಪ್ ಸುರ್ಜೆವಾಲ್ ಅವರು ಕರೆ ಮಾಡಿದ್ದಾಗ ನನ್ನನ್ನು ಮಂತ್ರಿ ಮಾಡಿರುವುದು ನನ್ನ ಬಳಿ ಹಣ ಇದೆ ಅಂತ ಅಲ್ಲ, ನನ್ನ ಹಿಂದೆ ಮುಸ್ಲಿಂ ಸಮಾಜ ಇದೆ ಎಂದು ಹೇಳಿದ್ದರು.
ಅಷ್ಟೇ ಅಲ್ಲದೇ ವೇಣುಗೋಪಾಲ್ ರಾವ್, ಪರಮೇಶ್ವರ್ ಕರೆ ಮಾಡಿ ಯಾವ ಖಾತೆ ನೀಡಬೇಕೆಂದು ಕೇಳಿದ್ದರು. ಆಗ ನಾನು ಮುಸ್ಲಿಮರ ಸೇವೆ ಮಾಡಲು ವಕ್ಫ್ ಖಾತೆ ಕೊಡಿ ಎಂದು ಕೇಳಿಕೊಂಡಿದ್ದೆ. ಆ ಸಮಯದಲ್ಲಿ ವಕ್ಫ್ ಆಸ್ತಿ ಒತ್ತುವರಿಯಾಗಿತ್ತು. ಆಗ ಜಮೀನು ಗುರುತಿಸಿ ಖಾತೆ ಮಾಡಿಸಿ ಉಳಿಸಿದೆ. ಆದರೆ ನಮ್ಮ ಹಣೆಬರಹ ಸರಿ ಇಲ್ಲ. ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು ಎಂದು ನೆನಪು ಮೆಲುಕು ಹಾಕಿದರು. ಇದನ್ನೂ ಓದಿ: ತಾಯಿ ಓದುವಂತೆ ಒತ್ತಾಯಿಸುತ್ತಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ – 2 ವಾರಗಳಲ್ಲಿ 3ನೇ ಸಾವು
ಇಡೀ ಕರ್ನಾಟಕದಲ್ಲಿ 105 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದ್ದು, ಪ್ರತಿ ಕ್ಷೇತ್ರಗಳಲ್ಲಿ ಕನಿಷ್ಠವೆಂದರೂ ಒಂದು ಲಕ್ಷದಷ್ಟು ಮುಸ್ಲಿಮರಿದ್ದಾರೆ. ನೀವೆಲ್ಲ ಸಿದ್ದರಾಮಯ್ಯ ಅವರ ಪರ ನಿಲ್ಲಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗೆ ವೋಟ್ ಮಾಡಿದ್ರೆ ಉಚಿತ ಕಟ್ಟಿಂಗ್ , ಶೇವಿಂಗ್ – ಅಭಿಮಾನಿಯಿಂದ ಆಫರ್
ಇನ್ನು ಒತ್ತುವರಿಯಾದ ವಕ್ಫ್ ಆಸ್ತಿಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡೋಣ ಅಂತ ಅಂದಿನ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೆ. ಆದರೆ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಬೇಕು ಹಣ ಕಡಿಮೆ ಆಗುತ್ತೆ ಎಂದು ಸಬೂಬು ನೀಡಿದ್ದರು. ಈ ವಿಚಾರವಾಗಿ ನಾನು ಸಿದ್ದರಾಮಯ್ಯ ಭೇಟಿ ಮಾಡಿದ್ದೆ, ಆಗ ಸಿದ್ದರಾಮಯ್ಯ ಅವರು, ನಾನು ಸಿಎಂ ಇದ್ದಾಗ ತಂದು ಕೊಟ್ಟಿದ್ದರೇ ಐದು ಸಾವಿರ ಕೋಟಿ ಕೊಡುತ್ತಿದ್ದೆ ಎಂದಿದ್ದರು. ಸಿದ್ದರಾಮಯ್ಯ ಕೊಟ್ಟಿರುವ ಭಾಗ್ಯಗಳು ಯಾರು ಕೊಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೊಂಡಾಡಿದರು.