– ಕುಮಾರಸ್ವಾಮಿ ಜನರಿಗೆ ಯಾರು ಅಂತಾನೇ ಗೊತ್ತೆ ಇರಲಿಲ್ಲ
– ಪ್ರಧಾನಿ ಮಂತ್ರಿ ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು ನಾನೆ
– ನನ್ನ ರಾಜಕೀಯ ಗುರುಗಳು ದೇವೇಗೌಡ್ರ ಮತ್ತು ಸಿದ್ದರಾಮಯ್ಯ
ಹುಬ್ಬಳ್ಳಿ: ಕುಮಾರಸ್ವಾಮಿ ಅವರನ್ನು ಆನೆಯನ್ನಾಗಿ ಮಾಡಿದ್ದು ಯಾರು? ನಾನು, ಎಚ್‍ಡಿಕೆ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಸಿಎಮ್ ಆಗುವಾಗ ನಾನು ವಿರೋಧ ಮಾಡಿದ್ದೆ. ಅಲ್ಲದೇ ನಾನು ಮನೆಯಲ್ಲಿ ಕುಳಿತು ಕಣ್ಣೀರು ಸಹ ಹಾಕಿದ್ದೇನೆ ಎಂದು ಜಮೀರ್ ಜೆಡಿಎಸ್‍ನಲ್ಲಿ ಇದ್ದ ದಿನಗಳನ್ನು ನೆನೆದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳು ದೇವೇಗೌಡ್ರ ಮತ್ತು ಸಿದ್ದರಾಮಯ್ಯ. ದೇವೇಗೌಡ್ರು 100% ಸೆಕ್ಯೂಲರ್. ಜಯನಗರ ಬೈ ಎಲೆಕ್ಷನ್‍ನಲ್ಲಿ ಕುಮಾರಸ್ವಾಮಿ ಜನರಿಗೆ ಯಾರು ಅಂತಾನೇ ಗೋತ್ತೆ ಇರಲಿಲ್ಲ, ನಾನೇ ಮಾಜಿ ಪ್ರಧಾನಿ ಮಂತ್ರಿ ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು. 2004 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಉಪಚುನಾವಣೆಯಲ್ಲಿ ಸೂಟ್‍ಕೇಸ್ ರಾಜಕಾರಣ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
Advertisement
Advertisement
ನಾನು ಬಸ್ ಮಾಲೀಕ, ನಮ್ಮ ಅಜ್ಜನ ಕಾಲದಿಂದಲೂ ನಾವೂ ಮಾಲೀಕರು. ನಾನು ಯಾವತ್ತೂ ನಮ್ಮ ಬಸ್ ಕ್ಲೀನ್ ಮಾಡಿಲ್ಲ. ಅವರಿಗೆ ಎಲ್ಲಿ ಕುಳಿತುಕೊಳ್ಳಲು ಜಾಗ ಇರಲಿಲ್ಲ, ಕುಮಾರಸ್ವಾಮಿಯವರಂಗೆ ಬಿಬಿಎಂಪಿಯಲ್ಲಿ ಕಸ ಗೂಡಿಸುತ್ತಿರಲಿಲ್ಲ. ನಾನು ನಮ್ಮ ತಾತ ಬ್ರಿಟಿಷ್‍ರ ಕಾಲದಲ್ಲಿ ಗಾಡಿ ಇಟ್ಟುಕೊಂಡವರು. ಕುಮಾರಸ್ವಾಮಿ ನಮ್ಮ ಆಫೀಸ್‍ನಲ್ಲಿ ನಾಲ್ಕು ಗಂಟೆ ಕುಳಿತುಕೊಳ್ಳುತ್ತಿದ್ದರು. ನನಗೆ ಬೇಜಾರು ಆಗೋದು, ಅವರು ಡ್ರೈವರ್ ಅಂತಿದಾರಲ್ಲ. ನನಗೂ ನೋವಗಿದೆ. ಕುಮಾರಸ್ವಾಮಿ ಅವರನ್ನು ಸಾಕಿದ್ದೆ ನಾನು, ಕೂರಕ್ಕೆ ಜಾಗ ಇರಲಿಲ್ಲ ಅವರಿಗೆ, ಬಹಳಷ್ಟು ಇದೆ ಹೇಳೋಕೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್
Advertisement
ಒಬ್ಬ ರಾಜಕಾರಣಿ ಮಾತನಾಡುವ ಮಾತಾ ಇದು. ನಿಮ್ಮನ್ನ ಆನೆಯನ್ನಾಗಿ ಮಾಡಿದ್ದು ಯಾರು? ನಾನು, ಕುಮಾರಸ್ವಾಮಿ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಸಿಎಮ್ ಆಗುವಾಗ ನಾನು ವಿರೋಧ ಮಾಡಿದ್ದೆ. ಅಲ್ಲದೇ ನಾನು ಮನೆಯಲ್ಲಿ ಕುಳಿತು ಕಣ್ಣೀರು ಸಹ ಹಾಕಿದ್ದೇನೆ. ಕೊನೆಯ ಸಮಯದಲ್ಲಿ ನಾನು ಅನಿವಾರ್ಯವಾಗಿ ಹೋಗಬೇಕಾಯಿತು. ಕುಮಾರಸ್ವಾಮಿ ಯಾರು ಬೆಳೆಯುವುದನ್ನ ಸಹಿಸಿಕೊಳ್ಳುವುದಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳನ್ನ ಸೋತ ನಂತರ ಬೀದಿ ಪಾಲು ಮಾಡುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ
ನಾನು, ಬಾಲಣ್ಣ ನಮ್ಮ ಸ್ನೇಹಿತರಯ ಸೇರಿ ಒತ್ತಾಯ ಮಾಡಿದ್ದೇವು. ನಿಮ್ಮನ್ನ ಆನೆಯನ್ನಾಗಿ ಮಾಡಿದ್ದು ನಾವು. ಇಬ್ರಾಹಿಂ ಹೊರಗಡೆ ನಿಂತು ಹೇಳುತ್ತಿದ್ದಾರೆ. ಇಲ್ಲೆ ಇದ್ದಾಗ ಅಲ್ಪಸಂಖ್ಯಾತರ ಬಗ್ಗೆ ಕೇಳಬಹುದು. ಸಿದ್ದರಾಮಯ್ಯನವರನ್ನ ಬೆಳಿಗ್ಗೆ ಎದ್ದರೆ ಸಾಕು ಟಾರ್ಗೇಟ್ ಮಾಡುತ್ತಾರೆ. ಅವರನ್ನ ಟಾರ್ಗೇಟ್ ಮಾಡಿದರೆ ಹೆಚ್‍ಡಿಕೆಗೆ ಬೆನ್ ಫಿಟ್ ಆಗುತ್ತೆ ಅಂತ ತಿಳ್ಕೋಂಡಿದ್ದಾರೆ. ನಮ್ಮ ಅಲ್ಪಸಂಖ್ಯಾರನ್ನ ಕ್ಯಾಂಡೆಂಟ್ ಮಾಡಿ ಬೀದಿಗೆ ತರ್ತಾರೆ. ಸಿದ್ದರಾಮಯ್ಯರನ್ನ ತಾಲಿಬಾನ್‍ಗೆ ಕಳುಹಿಸಬೇಕು ಎನ್ನೋ ಶ್ರೀನಿವಾಸ ಪ್ರಸಾದ್ ಹೇಳಿಕೆ ವಿಚಾರ. ಯಾಕೆ ಕಳುಹಿಸಬೇಕು, ಅಲ್ಪಂಖ್ಯಾತರ ಬಗ್ಗೆ ಪ್ರೀತಿ ತೋರಿಸಿದರೆ ಹೀಗೇ ಹೇಳೋದೆ. ಈಶ್ವರಪ್ಪನನ್ನು ಯಾರು ಪ್ರಚಾರಕ್ಕೆ ಕರೆದಿಲ್ಲ, ಅವರನ್ನ ಕರೆದರೆ ಯಾರು ವೋಟ್ ಕೊಡುತ್ತಾರೆ ಅಂತ ಬಿಜೆಪಿಯೇ ಮಾತನಾಡಿಕೊಂಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ