ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರಿಳಿತವಾಗುತ್ತಿದೆ. ಈ ನಡುವೆ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿಗೆ ತಂದಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದೀಗ ಶಾಸಕ ಜಮೀರ್ ಅಹ್ಮದ್ ಖಾನ್ ಮಾಸ್ಕ್ ಧರಿಸದೇ ಗುಂಪು ಕಟ್ಟಿಕೊಂಡು ಕ್ರಿಕೆಟ್ ಪಂದ್ಯವಾಡಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ.
Advertisement
ಸರ್ಕಾರ ಜನಸಾಮಾನ್ಯರಿಗೆ ಕೊರೊನಾ ಟಫ್ ರೂಲ್ಸ್ ಜಾರಿಗೆ ಮಾಡಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಚಾಮರಾಜಪೇಟೆಯಲ್ಲಿ ಆನಂದಪುರಂ ವೆಲ್ ಫೇರ್ ಅಸೋಸಿಯೇಷನ್‍ನಿಂದ ನಿನ್ನೆ ಕ್ರಿಕೆಟ್ ಪಂದ್ಯಾಟ ಆಯೋಜನೆಯಾಗಿತ್ತು. ಪಂದ್ಯಾಟದಲ್ಲಿ ಜಮೀರ್ ಮಾಸ್ಕ್ ಕೂಡ ಧರಿಸದೆ ಜನರನ್ನು ಗುಂಪುಗೂಡಿಸಿಕೊಂಡು ಕ್ರಿಕೆಟ್ ಆಡಿದ್ದಾರೆ. ಜೊತೆಗೆ ತಾವು ಬ್ಯಾಟ್‌ನಿಂದ ಹೊಡೆದ ಚೆಂಡನ್ನು ಕ್ಯಾಚ್ ಹಿಡಿದಾತನಿಗೆ ಗರಿಗರಿ ನೋಟು ನೀಡಿದ್ದಾರೆ. ಇದನ್ನೂ ಓದಿ: ಅಶ್ಲೀಲ ಫೋಟೋ ವಾಟ್ಸಪ್ ಗ್ರೂಪ್‍ಗೆ ಹಾಕಿ ಪೇಚೆಗೆ ಸಿಲುಕಿದ ಬಿಜೆಪಿ ಮುಖಂಡ
Advertisement
Advertisement
ಮಾಸ್ಕ್ ಧರಿಸದೇ ಗುಂಪು ಕಟ್ಟಿಕೊಂಡು ಜಮೀರ್ ಆಂಡ್ ಟೀಮ್ ಕ್ರಿಕೆಟ್ ಆಡುತ್ತಿದ್ದಂತೆ ಅವರ ಬೆಂಗಾವಲಿಗೆ ಬಂದಿದ್ದಂತಹ ಪೊಲೀಸರು ಕೂಡ ಮೂಕಪ್ರೇಕ್ಷರಂತೆ ನೋಡಿ ಸುಮ್ಮನಿದ್ದರು. ಇತ್ತ ಜನಸಾಮಾನ್ಯರು ಮಾಸ್ಕ್ ಧರಿಸದೇ ಓಡಾಡಿದರೆ ಮಾರ್ಷಲ್‍ಗಳು ದಂಡ ಹಾಕುತ್ತಾರೆ. ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಯಾಕೆ ದಂಡ ಹಾಕುತ್ತಿಲ್ಲ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ
Advertisement