ಚಾಮರಾಜನಗರ: ಹುಬ್ಬಳ್ಳಿ ಗಲಭೆಕೋರರ ಕುಟುಂಬಸ್ಥರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅವರಿಗೆ ಮರ್ಯಾದೆಯೂ ಇಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಕಿಡಿಕಾರಿದ್ದಾರೆ.
ಚಾಮರಾಜನಗರದ ಕನಕಗಿರಿಯಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಕಾನೂನು ಎಲ್ಲದಕ್ಕೂ ಉತ್ತರ ಕೊಡುತ್ತದೆ. ಅವರು ಈ ದೇಶದಲ್ಲಿ ಇರಲು ಎಷ್ಟು ಅರ್ಹರು ಎಂದು ಯೋಚಿಸಬೇಕಾಗುತ್ತದೆ. ಗಲಭೆಕೋರರ ಕುಟುಂಬಕ್ಕೆ ಫುಡ್‌ಕಿಟ್ ಹಂಚಿದವರಿಗೆ ಒಳ್ಳೆಯದಾಗಲಿ ಎಂದು ವ್ಯಂಗವಾಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಶತಾಯ ಗತಾಯ ಕಮಲ ಅರಳಿಸಲು ಬಿಜೆಪಿ ಪ್ಲಾನ್ – ಲಕ್ಷ್ಮೀ ಅಶ್ವಿನ್ ಗೌಡಗೆ ಗಾಳ
Advertisement
Advertisement
ಗೃಹಮಂತ್ರಿ ರಾಜೀನಾಮೆ ನೀಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಒಂದು ವರ್ಷ ಇದೆ. ಹೀಗಾಗಿ ಅವರು ಸುಮ್ಮನೇ ಏನೇನೋ ಹೇಳುತ್ತಿರುತ್ತಾರೆ. ಅವರ ಆರೋಪಕ್ಕೆ ಈಗಾಗಲೇ ಉತ್ತರ ನೀಡಲಾಗಿದೆ. ಅಕ್ರಮ ನಡೆದಿರುವ ವಿಚಾರ ತಿಳಿದ ತಕ್ಷಣ ವಿಚಾರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಇದನ್ನೂ ಓದಿ: ಆ್ಯಸಿಡ್ ದಾಳಿ ಮಾಡಿ, ಅಮಾನುಷ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಖಚಿತ: ಸುಧಾಕರ್