ಬೆಂಗಳೂರು: ಪದೇ ಪದೇ ಮುಂದಿನ ಸಿಎಂ ಹೇಳಿಕೆ ಕೊಡುತ್ತಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ಈಗ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದ್ದಾರೆ.
Advertisement
ಜಮೀರ್ ಸವಾಲಿನಿಂದ ಸಿಟ್ಟಿಗೆದ್ದ ಡಿಕೆಶಿ ಟೀಂ ಜಮೀರ್‌ಗೆ ನೋಟಿಸ್ ಕೊಡಿ ಎಂದು ಒತ್ತಡ ಹೇರತೊಡಗಿದೆ. ಶತಾಯಗತಾಯ ಈ ಬಾರಿ ಶಾಸಕ ಜಮೀರ್ ಶೋಕಾಸ್ ನೋಟಿಸ್ ಜಾರಿ ಮಾಡಲೇಬೇಕು ಅವರಿಗೆ ಶಿಸ್ತು ಕ್ರಮದ ಬಿಸಿ ಮುಟ್ಟಿಸಲೇಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಶಿಸ್ತುಪಾಲನ ಸಮಿತಿ ಅಧ್ಯಕ್ಷ ರಹೆಮಾನ್ ಖಾನ್‍ಗೆ ಸ್ವತಹ ಕೆಪಿಸಿಸಿ ಅಧ್ಯಕ್ಷರೆ ಸೂಚನೆ ನೀಡಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್
Advertisement
Advertisement
ಇತ್ತ ಶಿಷ್ಯನ ಬಗ್ಗೆ ಸಿದ್ದರಾಮಯ್ಯ ಸ್ಟ್ಯಾಂಡ್ ಏನು ಅನ್ನೋದು ಈಗಿನ ಕುತೂಹಲವಾಗಿದೆ. ಈ ಹಿಂದೆ ಇಂತಹುದೆ ಸಂದರ್ಭದಲ್ಲಿ ಸಿದ್ದರಾಮಯ್ಯ ಮಧ್ಯ ಪ್ರವೇಶದಿಂದಾಗಿ ಜಮೀರ್ ಶಿಸ್ತುಪಾಲನ ಸಮಿತಿ ನೋಟಿಸ್‍ನಿಂದ ಬಚಾವ್ ಆಗಿದ್ದರು. ಆದರೆ ಈ ಬಾರಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಅವರ ತಂಡವೇ ಹಟಕ್ಕೆ ಬಿದ್ದಿದ್ದು, ಇದೀಗ ಸಿದ್ದರಾಮಯ್ಯ ಈ ಎಲ್ಲಾ ಒತ್ತಡವನ್ನು ಮೀರಿ ತಮ್ಮ ಶಿಷ್ಯನನ್ನು ಯಾವ ರೀತಿ ಬಜಾವ್ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಯೂತ್ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ- ರಾಜೀನಾಮೆಗೆ ಮುಂದಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
Advertisement
ಇನ್ನೊಂದೆಡೆ ನಿನ್ನೆ ತಡರಾತ್ರಿ ಮಾಜಿ ಸಚಿವ ಹಾಗೂ ಜಮೀರ್ ಆಪ್ತ ಚಲುವರಾಯಸ್ವಾಮಿ, ಡಿಕೆಶಿ ಭೇಟಿ ಮಾಡಿದ್ರು. ಈ ವೇಳೆ ಜಮೀರ್ ಟಾಕ್ ಫೈಟ್ ವಿವಾದ ಚರ್ಚೆಗೆ ಬಂದಿದೆ. ಜಮೀರ್ ಒಕ್ಕಲಿಗರ ವಿಚಾರಕ್ಕೆ ಬರಬಾರದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದಾದ ಬಳಿಕ ಫೋನ್ ಮೂಲಕ ಜಮೀರ್ ಜೊತೆ ಚಲುವರಾಯಸ್ವಾಮಿ ಮಾತನಾಡಿದ್ದಾರೆ ಎನ್ನಲಾಗಿದೆ. ಯಾವುದೇ ಸಮುದಾಯದ ಬಗ್ಗೆ ಮಾತಾಡದಂತೆ ಸ್ನೇಹಿತನಿಗೆ ಬುದ್ಧಿ ಹೇಳಿದ್ದು, ಇದರಿಂದ ಒಕ್ಕಲಿಗರ ಪ್ರಾಬಲ್ಯವಿರೋ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‍ಗೆ ಹಿನ್ನಡೆ ಆಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿ ಟಾಕ್ ವಾರ್ ನಿಲ್ಲಿಸುವಂತೆ ಸೂಚಿಸಿದ್ದಾರೆ.