ಧಾರವಾಡ: ಜಮೀರ್ ಅಹ್ಮದ್ (Zameer Ahmed Khan ) ಎರಡನೇ ಟಿಪ್ಪು, ಔರಂಗಜೇಬ್ ಥರ ಮೆರೆಯುತ್ತಿದ್ದಾರೆ. ತಾಕತ್ ಇದ್ದರೆ ರೈತರ ಜಮೀನು ವಕ್ಫ್ ಬೋರ್ಡ್‌ಗೆ ರಿಜಿಸ್ಟರ್ ಮಾಡಲಿ ನೋಡೋಣ. ಇದು ಜಮೀರ್‌ಗೆ ನಮ್ಮ ಸವಾಲು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.
ರೈತರ ಪಹಣಿಯಲ್ಲಿ ವಕ್ಫ್ ಹೆಸರು ವಿಚಾರವಾಗಿ ಧಾರವಾಡದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪ್ರಮೋದ್ ಮುತಾಲಿಕ್ ಕೂಡಾ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ತಾಕತ್ ಇದ್ದರೆ ರೈತರ ಜಮೀನು ವಕ್ಫ್ ಬೋರ್ಡ್‌ಗೆ ರಿಜಿಸ್ಟರ್ ಮಾಡಲಿ ನೋಡೋಣ. ಇದು ಜಮೀರ್‌ಗೆ ನಮ್ಮ ಸವಾಲು. ಮುತವಲ್ಲಿಯಿಂದ ಪತ್ರ ಕೇಳಿದ್ದಾರೆ. ಆತ ಮುಸ್ಲಿಂ ಸಮಾಜ, ಮಸೀದಿಗೆ ಸಂಬಂಧಿಸಿದಾತ. ಈ ಎಲ್ಲದರ ಬಗ್ಗೆ ತನಿಖೆ ಆಗಿ ಕ್ರಮ ಆಗಬೇಕು. ರೈತರಿಗೆ ಮುಕ್ತ ಅವಕಾಶ ಸಿಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್
ಈ ವೇಳೆ ಅಧಿಕಾರಿಗಳ ಮೇಲೆ ಕಿಡಿಕಾರಿದ ಅವರು, ರಾಜ್ಯ ಸರ್ಕಾರಕ್ಕೆ ಕೂಡಾ ಎಚ್ಚರಿಕೆ ನೀಡಿದರು. ಇವತ್ತು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದ್ದೇವೆ. ರೈತ ಸಂಘ, ಭಾರತೀಯ ಕಿಸಾನ್ ಸಂಘ, ದಲಿತ ಸಂಘಟನೆಗಳು ಬೆಂಬಲ ಕೊಟ್ಟಿವೆ. ಹಿಂದೂ ಸಂಘಟನೆಗಳು, ಬಿಜೆಪಿಯ ಮಾಜಿ ಶಾಸಕರು ಭಾಗವಹಿಸಿದ್ದರು. ತಹಸೀಲ್ದಾರ್ ಮಾಡಿದ ತಪ್ಪು ತಿದ್ದುಪಡಿಗೆ ಆಗ್ರಹಿಸಿದ್ದೇವೆ. ರೈತರನ್ನು ನಾಲ್ಕು ವರ್ಷದಿಂದ ಓಡಾಡಿಸಿದ್ದಾರೆ. ತಹಸೀಲ್ದಾರ್ ಕಚೇರಿ-ವಕ್ಫ್ ಬೋರ್ಡ್ ಕಚೇರಿ ಮಧ್ಯೆ ಓಡಾಡಿಸಿದ್ದಾರೆ ಎಂದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ
ನೆಲದ ಮೇಲೆ ಕುಳಿತು ಪ್ರತಿಭಟಿಸುವವರೆಗೂ ಇವರು ಎಚ್ಚರಗೊಳ್ಳುವುದಿಲ್ಲವಾ? ಯಾರಿಗೆ ಅನ್ಯಾಯವಾಗಿದೆ ಇವರಿಗೆ ಗೊತ್ತಾಗುವುದಿಲ್ಲವಾ? ಎಸಿ, ಡಿಸಿ, ತಹಸೀಲ್ದಾರ್ ಇರೋದು ಏತಕ್ಕೆ ಎಂದ ಅವರು, ಧಾರವಾಡದ (Dharawada) ಎಸಿ ರೈತರ ಜೊತೆ ಉದ್ಧಟತನದಿಂದ ಮಾತನಾಡಿದ್ದಾರೆ. ರೈತರ ಬಗ್ಗೆ ಮಾತನಾಡುವಷ್ಟು ಧೈರ್ಯ ಬಂತಾ? ರೈತರನ್ನು ಓಡಾಡಿಸುವಷ್ಟು ಧೈರ್ಯ ಬಂತಾ? ಎಂದು ಕಿಡಿಕಾರಿದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ