ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಸಮಿತಿ ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ. ಸಮಾಜದಲ್ಲಿ ಕಿಡಿಗೇಡಿಗಳ ಒಡೆದು ಆಳುವ ನೀತಿಗೆ ಕಿವಿಗೊಡದೆ, ಸೌಹಾರ್ದತೆ ಮೆರೆಯಲು ಮುಂದಾಗಿರುವುದು ಸಂತಸ ತಂದಿದೆ ಎಂದು ಶಾಸಕ ಜಮೀರ್ ಅಹ್ಮದ್ ಕರಗ ಉತ್ಸವ ಸಮಿತಿಯ ನಿರ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹೇಳಿರುವ ಜಮೀರ್ ಅಹ್ಮದ್, ಹಿಂದೂಪರ ಸಂಘಟನೆಗಳಿಂದ ಎಷ್ಟೇ ವಿರೋಧ ವ್ಯಕ್ತವಾದರೂ, ಕರಗ ಉತ್ಸವ ಸಮಿತಿ ಹಿಂದಿನ ರೀತಿ, ನೀತಿಗಳನ್ನು ಪಾಲಿಸುವುದಾಗಿ ತಿಳಿಸಿದೆ. ಆ ಮೂಲಕ ಈ ನೆಲದ ಸೌಹಾರ್ದತೆಯನ್ನು ಎತ್ತಿಹಿಡಿದಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ, ಯಾವುದೇ ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ: ಸಿದ್ದರಾಮಯ್ಯ
Advertisement
ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಸಮಿತಿ ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ. ಸಮಾಜದಲ್ಲಿ ಕಿಡಿಗೇಡಿಗಳ ಒಡೆದು ಆಳುವ ನೀತಿಗೆ ಕಿವಿಗೊಡದೆ, ಸೌಹಾರ್ದತೆ ಮೆರೆಯಲು ಮುಂದಾಗಿರುವುದು ಸಂತಸ ತಂದಿದೆ. 1/4#ಬೆಂಗಳೂರುಕರಗ pic.twitter.com/myHoLp7psW
— B Z Zameer Ahmed Khan (@BZZameerAhmedK) April 8, 2022
Advertisement
ಐತಿಹಾಸಿಕ ಬೆಂಗಳೂರು ಕರಗದ ಸಂದರ್ಭದಲ್ಲಿ ತಾಯಿಯನ್ನು ದರ್ಗಾಕ್ಕೆ ಕರೆದುಕೊಂಡು ಹೋಗುವುದು ವಾಡಿಕೆ. ಆದರೆ ಉತ್ಸವದ ವೇಳೆ ಕರಗವು ದರ್ಗಾಗೆ ಪ್ರವೇಶ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಇವೆಲ್ಲದಕ್ಕೂ ಡೋಂಟ್ ಕೇರ್ ಎಂದಿರುವ ಕರಗ ಉತ್ಸವ ಸಮಿತಿ ಮುಸ್ಲಿಮರ ಸಹಭಾಗಿತ್ವದಿಂದಲೇ ಉತ್ಸವ ನಡೆಸುವ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿರುವ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ: ಕೋಡಿಹಳ್ಳಿ
Advertisement