ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ನಗರದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೊಸ ಅವತಾರದಲ್ಲಿ ಬಂದಿದ್ದಾರೆ.
ಚಾಮರಾಜಪೇಟೆಯ ಟಿಪ್ಪು ನಗರದಲ್ಲಿ ನಡೆದ ಟೈಲರಿಂಗ್ ಮೆಷಿನ್ ವಿತರಣಾ ಕಾರ್ಯಕ್ರಮಕ್ಕೆ ಟಿಪ್ಪುವಿನಂತೆ ವೇಷ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಕುದುರೇಯೇರಿ ನಡುರಸ್ತೆಯಲ್ಲಿಯೇ ಜಮೀರ್ ವೀರಾವೇಷ ತೋರಿದ್ದಾರೆ.
ಎಸ್‍ಕೆಆರ್ ಮಾರ್ಕೆಟ್ ವಾರ್ಡ್ ಕಾರ್ಪೊರೇಟರ್ ನಸೀಮಾ ಆಯುಬ್ ಖಾನ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಜಮೀರ್ ಅವರು ಟಿಪ್ಪುವಿನ ವೇಷ ಧರಿಸಿ, ಕೈಯಲ್ಲಿ ಖಡ್ಗಗಳನ್ನು ಹಿಡಿದು, ನಡುರಸ್ತೆಯಲ್ಲಿಯೇ ಕುದುರೆಯೇರಿ ರಾಜಾಧಿರಾಜನಂತೆ ಪೋಸ್ ಕೊಟ್ಟಿದ್ದಾರೆ.
ಕಾರ್ಯಕ್ರಮದ ವೇಳೆ ಜಮೀರ್ ಅವರು 40 ಜನರಿಗೆ ಪ್ರತ್ಯೇಕವಾಗಿ 10 ಸಾವಿರ ಹಣ ನೀಡಿದ್ದಾರೆ. ಸದ್ಯ ಒಂದು ಕಡೆ ಜಮೀರ್ ಅವರ ಈ ವೇಷ ನಗೆಪಾಟಲಿಗೀಡಾದರೆ ಇನ್ನೊಂದೆಡೆ ಬಡವರಿಗೆ ಟೈಲರಿಂಗ್ ಮೆಷಿನ್ ವಿತರಣಾ ಸಂದರ್ಭದಲ್ಲಿ ಇಂತಹ ಅದ್ಧೂರಿತನ ಬೇಕಾ ಅನ್ನೋ ಚರ್ಚೆಗಳು ಕೇಳಿ ಬರುತ್ತಿವೆ.