ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅವರು ಮುಸಲ್ಮಾನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಬಲಿ ಕೊಡೋದಕ್ಕೆ ಅವರಿಗೆ ಸಿಗೋದೆ ಅಲ್ಪಸಂಖ್ಯಾತರು ಎಂದು ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಎಂಎಲ್ಸಿ ಟಿಕೆಟ್ ಕೊಟ್ಟಿದ್ದಾರೆ. ಅಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲೋಕೆ ಸಾಧ್ಯವೇ? ಮುಸಲ್ಮಾನರ ಮೇಲೆ ಪ್ರೀತಿ ಇದ್ದರೆ ಹಾಸನದಲ್ಲಿ ಟಿಕೆಟ್ ಕೊಡಬೇಕಿತ್ತು. ರೇವಣ್ಣರ ಮಗನಿಗೆ ಟಿಕೆಟ್ ಕೊಡುವ ಬದಲು ಕಾರ್ಯಕರ್ತರಿಗೊ, ಮುಸ್ಲಿಂ ಅಭ್ಯರ್ಥಿಗೊ ಟಿಕೆಟ್ ಕೊಡಬಹುದಿತ್ತು. ಮೈಸೂರು, ಮಂಡ್ಯ ಅಥವಾ ತುಮಕೂರಿನಲ್ಲಿ ಕೊಡಬೇಕಿತ್ತು. ಮುಸ್ಲಿಮರಿಗೆ ಕೊಟ್ಟಂತೆಯೂ ಆಗಬೇಕು, ಬಿಜೆಪಿಗೆ ಸಹಾಯ ಮಾಡಿದಂತೆಯೂ ಆಗಬೇಕು ಎಂಬ ಕಾರಣಕ್ಕೆ ಸೋಲುವ ಕಡೆ ಟಿಕೆಟ್ ಕೊಟ್ಟಿದ್ದಾರೆ. ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಮುಸಲ್ಮಾನರೇ ಸಿಗೋದು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ
Advertisement
ಗೆಲ್ಲುವ ಕಡೆ ಕೊಟ್ಟರೆ ಕುಮಾರಸ್ವಾಮಿ ಅವರಿಗೂ ಪ್ರೀತಿ ಇದೆ ಅಂತ ಒಪ್ಪಿಕೊಳ್ಳುತ್ತೇನೆ. ರಾಮನಗರಕ್ಕೆ ರಾಜೀನಾಮೆ ಕೊಟ್ಟಾಗ ಅನಿತಕ್ಕನಿಗೆ ಟಿಕೆಟ್ ಕೊಡುವ ಬದಲು ಮುಸ್ಲಿಮರಿಗೆ ಕೊಡಬಹುದಿತ್ತು. ಜೆಡಿಎಸ್‍ನಿಂದ ನೂರಕ್ಕೆ ನೂರರಷ್ಟು ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ. ಜೆಡಿಎಸ್ ಗೆಲ್ಲುವ ಕಡೆ ಅಲ್ಪಸಂಖ್ಯಾತರು ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಡಿಶಾ ಸಿಎಂ ಬೆಂಗಾವಲು ವಾಹನ ಮೇಲೆ ಮೊಟ್ಟೆ ಎಸೆತ- ವೈರಲ್ ವೀಡಿಯೋ
Advertisement
Advertisement
ಮಂಡ್ಯ ಜನರು ಈಗಾಗಲೇ ಜೆಡಿಎಸ್ ತಿರಸ್ಕರಿಸಿದ್ದಾರೆ. ಹೆಚ್‌ಡಿಕೆ ಮುಖ್ಯಮಂತ್ರಿ ಆಗಿದ್ದಾಗಲೇ ನಿಖಿಲ್ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಜಮಾನದಲ್ಲಿ ಜೆಡಿಎಸ್ ಭದ್ರಕೋಟೆ ಆಗಿತ್ತು. ಕುಮಾರಸ್ವಾಮಿ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. 2006 ರಲ್ಲಿ ಕುಮಾರಸ್ವಾಮಿ ಒಳ್ಳೆ ಸರ್ಕಾರ ಕೊಟ್ಟಿದ್ದರು, ಇಲ್ಲ ಅಂತ ಹೇಳಲ್ಲ. ಆ ವೇಳೆ ಜನಪ್ರಿಯರೂ ಆಗಿದ್ದರು. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದು ಎಲ್ಲ ವರ್ಗದ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. 2018ರಲ್ಲಿ ವೆಸ್ಟನ್ ಹೋಟೆಲ್‍ನಲ್ಲಿ ಉಳಿದುಕೊಂಡು ಎಕ್ಸ್ ಪೋಸ್ ಆಗಿದ್ದರು. ಈಗ ಅದು ಹುಸಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.