ಇಸ್ಲಾಮಾಬಾದ್: 2023ರ ಏಕದಿನ ಏಷ್ಯಾಕಪ್ (ODI WorldCup) ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕವೂ ಪಾಕ್ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ರಾಜೀನಾಮೆ ನೀಡಿದ್ದಾರೆ. ಇದರಿಂದ ಪಾಕ್ ಕ್ರಿಕೆಟ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಲಾಹೋರ್‌ನಲ್ಲಿ (Lahore) ನಡೆದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಶ್ರಫ್, ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಅಧ್ಯಕ್ಷರಾಗಿ ನೇಮಕವಾದ ಝಾಕಾ ಅಶ್ರಫ್ ಸೇವೆ ಸ್ಮರಿಸಿ ಸಮಿತಿ ಸದಸ್ಯರು ಹಾಗೂ ಪೋಷಕ ಉಸ್ತುವಾರಿ ಪ್ರಧಾನ ಮಂತ್ರಿ ಅನ್ವರ್-ಉಲ್-ಹಕ್ ಕಾಕರ್ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಡೀಪ್‍ಫೇಕ್ ವೀಡಿಯೋ ಪ್ರಕರಣ- ಗೇಮ್ ಅಪ್ಲಿಕೇಶನ್ ವಿರುದ್ಧ ಎಫ್‍ಐಆರ್
Advertisement
Advertisement
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀನಾಮೆಗೆ ಕಾರಣವನ್ನೂ ಬಹಿರಂಗಪಡಿಸಿದರು. ನಾನು ಕ್ರಿಕೆಟ್‌ನ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದೆ. ಆದ್ರೆ ಈ ರೀತಿ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಈಗ ಕ್ರಿಕೆಟ್ ಮಂಡಳಿ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಚಾರ ಪ್ರಧಾನಿಗಳಿಗೆ ಬಿಟ್ಟದ್ದು, ಅವರು ಯಾರನ್ನ ನಾಮ ನಿರ್ದೇಶನ ಮಾಡುತ್ತಾರೋ ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
Advertisement
Advertisement
ವಿಶ್ವಕಪ್ ಬಳಿಕ ಕಳಪೆಯಾದ ಪಾಕ್ ತಂಡ: 2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದ್ರೆ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ಪಾಕಿಸ್ತಾನ ಮತ್ತೆ ನಂತರ ಸೋಲಿನ ಕೆಟ್ಟ ದಾಖಲೆಗಳನ್ನು ಹೆಗಲಿಗೇರಿಸಿಕೊಂಡಿತು. ಆನಂತರ ಈವರೆಗೆ ಪಾಕಿಸ್ತಾನ ಆಡಿದ ಒಟ್ಟು 14 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ 12 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದನ್ನೂ ಓದಿ: ಅಣ್ಣನ ಬೌಲಿಂಗ್‌ಗೆ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟ ಪಠಾಣ್ – ಸಚಿನ್ ಬಳಗಕ್ಕೆ 4 ವಿಕೆಟ್‌ಗಳ ಜಯ
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಪಾಕ್ ಹೀನಾಯ ಸೋಲಿನ ಬಳಿಕ ಲಾಹೋರ್‌ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ಗಳಾಗಿದ್ದ ಮಿಕ್ಕಿ ಆರ್ಥರ್, ಗ್ರಾಂಟ್ ಬ್ರಾಡ್‌ಬರ್ನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇದಾದ ಒಂದು ದಿನದ ಬಳಿಕ ಅಧ್ಯಕ್ಷರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದನ್ನೂ ಓದಿ: ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ