CinemaKarnatakaLatestLeading NewsMain Post

ಒಂದು ಸಾವಿರ ಚಿತ್ರಮಂದಿರಗಳಲ್ಲಿ ಝೈದ್ ಖಾನ್ ನಟನೆಯ ‘ಬನಾರಸ್’ ನಾಳೆ ರಿಲೀಸ್

ಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ (Zaid Khan) ನಟನೆಯ ‘ಬನಾರಸ್’ (Banaras) ಸಿನಿಮಾ ನಾಳೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡ ಕನ್ನಡದ ಜೊತೆ ಜೊತೆಗೆ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿನಲ್ಲೂ ಈ ಸಿನಿಮಾ ರಿಲೀಸ್ (Release) ಆಗುತ್ತಿರುವುದು ವಿಶೇಷ. ನಟನೊಬ್ಬನ ಮೊದಲ ಸಿನಿಮಾ ಈ ಪ್ರಮಾಣದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು ಎನ್ನುವುದು ದಾಖಲೆ.

ಜಯತೀರ್ಥ (Jayathirtha) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಬೇಕಿತ್ತು. ನಿರ್ದೇಶಕರು ಕೇವಲ ಇದು ಕನ್ನಡ ಸಿನಿಮಾ ಎಂದೇ ಸ್ಕ್ರಿಪ್ಟ್ ಮಾಡಿದ್ದರು. ಆದರೆ, ಸಿನಿಮಾ ಶೂಟ್ ಮಾಡ್ತಾ ಮಾಡ್ತಾ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು ಎನ್ನುತ್ತಾರೆ ಜಯತೀರ್ಥ. ಝೈದ್ ಖಾನ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೇ ಸಿನಿಮಾ ರಂಗಕ್ಕೆ ಲಾಂಚ್ ಆಗುತ್ತಿದ್ದಾರೆ. ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

ಕನ್ನಡದಲ್ಲಿ 180ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದ್ದರೆ, ಹಿಂದಿಯಲ್ಲಿ 500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ತಮಿಳು ಮತ್ತು ತೆಲುಗಿನಲ್ಲಿ ತಲಾ 150 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಾಗುತ್ತಿದೆ. ಮಲಯಾಳಂನಲ್ಲೂ 50ಕ್ಕೂ ಅಧಿಕ ಚಿತ್ರಮಂದಿರಗಳು ಸಿಕ್ಕಿವೆ ಅಂತೆ. ಹಾಗಾಗಿ ಸಾವಿರಾರು ಚಿತ್ರಮಂದಿರಗಳಲ್ಲಿ ನಾಳೇ ಬನಾರಸ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಪ್ರೇಕ್ಷಕರು ಸಿನಿಮಾ ಹೇಗೆ ಸ್ವೀಕರಿಸುತ್ತಾರೆ ಎಂದು ನಿರೀಕ್ಷಿಸುತ್ತಿದೆ.

Live Tv

Leave a Reply

Your email address will not be published. Required fields are marked *

Back to top button