ಹಾವೇರಿ: ಜನವರಿಯಲ್ಲಿ ದರ್ಶನ್ (Darshan) ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಸಿಗದಿದ್ರೆ ನಾನೇ ಖುದ್ದು ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ ಎಂದು ನಟ ಹಾಗೂ ಸಚಿವ ಜಮೀರ್ ಪುತ್ರ ಝೈದ್ ಖಾನ್ (Zaid Khan) ಹೇಳಿದ್ದಾರೆ.
ಹಾವೇರಿಯಲ್ಲಿ (Haveri) ಕಲ್ಟ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋವಿನಲ್ಲೂ ದರ್ಶನ್ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಟ್ಟಿದ್ದಾರೆ. ʻದರ್ಶನʼ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗೇ ಆಗುತ್ತದೆ. ಇವೆರಡನ್ನ ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿ ಇದೆ. ದರ್ಶನ್ ಅಣ್ಣನಿಗೆ ಜನವರಿಯಲ್ಲಿ ಬೇಲ್ ಸಿಗುವ ನಿರೀಕ್ಷೆಯಿದೆ ಎಂದರು. ಇದನ್ನೂ ಓದಿ: 45 ವರ್ಷಗಳ ಎಲ್‌ಡಿಎಫ್ ಆಡಳಿತ ಅಂತ್ಯ – ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್
ಇನ್ನೂ ಸಚಿವ ಜಮೀರ್ ಅಹ್ಮದ್ (Zameer Ahmed Khan) ಅವರ ಕಾಂಟ್ರವರ್ಸಿಗಳು ನಿಮ್ಮ ಸಿನಿಮಾಗೆ ಎಫೆಕ್ಟ್ ಆಗಿದ್ಯಾ ಎಂಬ ಪತ್ರಕರ್ತರ ಪ್ರಶ್ನೆ ಉತ್ತರಿಸಿ, ಖಂಡಿತಾ ಆಗಿದೆ. ನನ್ನ ಹಿಂದಿನ ಸಿನಿಮಾ ಮೇಲೆ ಅವರ ರಾಜಕೀಯದ ಬೆಳವಣಿಗಯಿಂದ ಪರಿಣಾಮವಾಗಿದೆ. ಜಮೀರ್ ಅವ್ರ ರಾಜಕೀಯ ಕಾಂಟ್ರವರ್ಸಿಗಳಿಂದ ನನ್ನ ಸಿನಿಮಾ ಬಾಯ್ಕಾಟ್ ಮಾಡಿದ್ರು. ಮನಸಲಿ ಕೇಲವು ಮಾತುಗಳು ಇವೆ. ಅವುಗಳನ್ನ ಬಾಯಲ್ಲಿ ಈಗ ಹೇಳೊಕೆ ಆಗಲ್ಲ. ಗೆದ್ದ ಮೇಲೆ ಹೇಳಿದ್ರೆ ಅದಕ್ಕೆ ತೂಕ ಇರುತ್ತದೆ. ಗೆದ್ದಾದ ಬಳಿಕ ಎಲ್ಲಾ ಹೇಳುತ್ತೇನೆ ಎಂದರು. ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ – ವಿ. ಸೋಮಣ್ಣ
ಇನ್ನೂ ಪೈರಸಿ ಮಾಡುವವರು ಮಾಡಲಿ, ಬೇಡ ಅಂದ್ರೆ ಬಿಡ್ತಾರಾ? ಅವರ ಕರ್ತವ್ಯ ಅವರು ಮಾಡಲಿ ಬಿಡಿ. ಆದರೆ ಅಪ್ಪಿತಪ್ಪಿ ಸಿಕ್ಕಿಬಿದ್ರೆ ಬಿಡಲ್ಲ ಅಂತ ವಾರ್ನಿಂಗ್ ಕೊಟ್ರು. ಇದನ್ನೂ ಓದಿ: ನಿಲ್ಲದ ಖರ್ಗೆ Vs RSS ಫೈಟ್ – ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ ಸಚಿವ ಪ್ರಿಯಾಂಕ್


