ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಬನಾರಸ್ ಎಲ್ಲ ಭಾಷೆಗಳ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲಿಯೂ ವಿಶೇಷವಾಗಿ ಕನ್ನಡದ ಪ್ರೇಕ್ಷಕರಂತೂ ಝೈದ್ ಖಾನ್ ನಟನೆ ಕಂಡು ಭೇಷ್ ಅಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಪಳಗಿದ ನಟನಂತೆ ನಟಿಸಿರೋ ಝದ್ಗೆ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಝೈದ್ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮುಖ್ಯ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾರೆಂಬಂಥಾ ನಂಬಿಕೆಯೂ ಬಲಗೊಂಡಿದೆ.
Advertisement
ಇದೇ ಹೊತ್ತಿನಲ್ಲಿ ಝೈದ್ ಖಾನ್ ಅವರಿಗೆ ಬಾಲಿವುಡ್ಡಿನಿಂದ ಬಿಗ್ ಆಫರ್ ಒಂದು ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಝೈದ್ ಒಂದೊಳ್ಳೆ ಕಥೆ ಹಿಡಿದು ಝೈದ್ರನ್ನು ಸಂಪರ್ಕಿಸಿದ್ದಾರೆ. ಅದು ದೊಡ್ಡ ಬಜೆಟ್ಟಿನ ಚಿತ್ರ. ಪ್ರಸಿದ್ಧ ನಟಿಯೋರ್ವರು ಅದರಲ್ಲಿ ನಟಿಸಲಿದ್ದಾರಂತೆ. ಈ ಅವಕಾಶವನ್ನು ಝೈದ್ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ. ಆದರೂ ಕೂಡಾ ಝೈದ್ ಅದನ್ನು ನಿರಾಕರಿಸಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರೊಳಗೆ ಹಾಸುಹೊಕ್ಕಾಗಿರುವ ಕನ್ನಡತನ! ಅದನ್ನೂ ಓದಿ:400 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ‘ಕಾಂತಾರ’ ಸಿನಿಮಾ
Advertisement
Advertisement
ಝೈದ್ ಖಾನ್ರನ್ನು ಸಂಪರ್ಕಿಸಿದ್ದ ಆ ನಿರ್ದೇಶಕರು ವಿವರಿಸಿದ್ದೆಲ್ಲವೂ ಝೈದ್ಗೆ ಇಷ್ಟವಾಗಿತ್ತು. ಆದರೆ ಆ ಚಿತ್ರ ಹಿಂದಿಯಲ್ಲಿ ಮಾತ್ರವೇ ತಯಾರಾಗುತ್ತದೆಂಬ ವಿಚಾರ ಮಾತ್ರ ಝೈದ್ ಅವರಿಗೆ ಹಿಡಿಸಿರಲಿಲ್ಲ. ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಯಾರು ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಅತ್ತಲಿಂದ ಒಪ್ಪಿಗೆ ಬಂದಿರಲಿಲ್ಲ. ಆಗ ಝೈದ್ ಖಾನ್ `ನೀವು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರೋದು ಬನಾರಸ್ ಚಿತ್ರ. ಅದು ಪ್ರಧಾನವಾಗಿ ತಯಾರಾಗಿರೋದು, ಗೆದ್ದಿರೋದು ಕನ್ನಡಿಗರಿಂದಲೇ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ಧನಿಲ್ಲ’ ಎಂಬಂಥಾ ನಿಖರ ಉತ್ತರ ನೀಡಿ ಆ ಬಿಗ್ ಆಫರ್ ಅನ್ನು ತಿರಸ್ಕರಿಸಿದ್ದಾರಂತೆ. ಝೈದ್ ಖಾನ್ ಕನ್ನಡಪ್ರೇಮವನ್ನು, ಕನ್ನಡ ಚಿತ್ರರಂಗದ ಮೇಲೆ ಅವರಿಟ್ಟಿರುವ ಅಭಿಮಾನವನ್ನು ಮೆಚ್ಚಿಕೊಳ್ಳಲೇಬೇಕಿದೆ.