ಮುಂಬೈ: ಕೊರೊನಾ ಎಫೆಕ್ಟ್ ನಿಂದ ಹಲವು ಕ್ರೀಡಾ ಚಟುವಟಿಕೆಗಳನ್ನು ಮುಂದೂಡಲಾಗಿದೆ. ಆಟಗಾರರು ಕೂಡ ಮನೆಯಲ್ಲೇ ಇರುವುದರಿಂದ ಮತ್ತೆ ಕ್ರೀಡಾ ಚಟುವಟಿಕೆಗಳು ಆರಂಭವಾದರೆ ಫಾರ್ಮ್‍ಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಟೀಂ ಇಂಡಿಯಾ ಆಟಗಾರ ಚಹಲ್ ಹೇಳಿದ್ದಾರೆ.
ಆಟಗಾರರು ಬಹುಬೇಗ ಫಾರ್ಮ್‍ಗೆ ಮರಳಬೇಕಾದರೆ ಯಾವುದೇ ಟೂರ್ನಿಗೂ ಮುನ್ನ ಐಪಿಎಲ್ ನಿರ್ವಹಿಸಿದರೆ ಅದು ಸಹಕಾರಿಯಾಗುತ್ತದೆ ಎಂದು ಚಹಲ್ ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
ಇದೇ ವೇಳೆ ಚೆಂಡನ್ನು ಶೈನ್ ಮಾಡಲು ಆಟಗಾರರು ಬಳಸುವ ವಿಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಚಹಲ್, ಚೆಂಡು ಹಳೆಯದಾದಂತೆ ಶೈನ್ ಉಳಿಸಿಕೊಳ್ಳಲಿದ್ದಾರೆ ಬೌಲರ್ ಗಳಿಂದ ಸ್ವಿಂಗ್ ಮಾಡಲು ಸಾಧ್ಯವಿಲ್ಲ. ಆಗ ವಿಕೆಟ್ ಪಡೆಯುವುದು ಕೂಡ ಕಷ್ಟಸಾಧ್ಯವಾಗುತ್ತದೆ. ಉಳಿದಂತೆ ಬ್ಯಾಟ್ಸ್ ಮನ್ ಸಿಕ್ಸರ್ ಸಿಡಿಸಿದರೆ ಆತನೇ ಆ ಚೆಂಡನ್ನು ಮತ್ತೆ ತಂಡುಕೊಡುವಂತೆ ಬೇಕು ಎಂಬ ನಿಯಮ ಜಾರಿ ಮಾಡುವ ಅಗತ್ಯವಿದೆ ಎಂದು ಚಹಲ್ ತಮಾಷೆಯಾಗಿ ಹೇಳಿದ್ದಾರೆ.
Advertisement
ಕೊರೊನಾ ಕಾರಣದಿಂದ ಅಕ್ಟೋಬರ್ ನಲ್ಲಿ ಆರಂಭವಾಗಬೇಕಿರುವ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಅನುಮಾನ ಉಂಟಾಗುತ್ತಿದೆ. ಈಗಾಗಲೇ ಐಸಿಸಿ ಸಭೆ ನಡೆಸಿ ವಿಶ್ವಕಪ್ ಆಯೋಜನೆ ಕುರಿತು ಚರ್ಚೆ ನಡೆಸಿದರು ಆ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಅಲ್ಲದೇ ಕೊರೊನಾ ತೀವ್ರತೆ ಇದೇ ರೀತಿ ಮುಂದುವರಿದರೆ ಟಿ20 ವಿಶ್ವಕಪ್ 2021ರ ಫೆಬ್ರವರಿ-ಮಾರ್ಚ್ ನಲ್ಲಿ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಈ ಚಿಂತನೆಗೆ ಪ್ರಮುಖ ಕಾರಣ ಅಕ್ಟೋಬರ್ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಖಾಲಿ ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೆ ಟೂರ್ನಿ ಆಯೋಜಿಸಲು ಐಸಿಸಿ ಸಿದ್ಧವಿಲ್ಲ ಎನ್ನಲಾಗಿದೆ.