ನವದೆಹಲಿ: ಟೀಂ ಇಂಡಿಯಾದ (Team India) ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಹಾಗೂ ಮತ್ತು ನಟಿ ಧನಶ್ರೀ (Dhanashree Verma) ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಇದರ ನಡುವೆ ಧನಶ್ರೀ ಕುಟುಂಬ ಯುಜ್ವೇಂದ್ರ ಚಾಹಲ್ ಅವರ ಬಳಿ 60 ಕೋಟಿ ರೂ. ಜೀವನಾಂಶ ಕೇಳಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ವದಂತಿಯನ್ನು ಧನಶ್ರೀ ಕುಟುಂಬ ತಳ್ಳಿಹಾಕಿದೆ.
ಜೀವನಾಂಶದ ಬಗ್ಗೆ ಪ್ರಸಾರವಾಗುತ್ತಿರುವ ಆಧಾರ ರಹಿತ ಹೇಳಿಕೆಗಳು, ಸುದ್ದಿಗಳಿಂದ ನಮಗೆ ಬೇಸರವಾಗಿದೆ. ಅಂತಹ ಯಾವುದೇ ಜೀವನಾಂಶದ ಬೇಡಿಕೆಯಿಟ್ಟಿಲ್ಲ ಅಥವಾ ನೀಡಲಾಗಿಲ್ಲ ಎಂದು ಧನಶ್ರೀ ವರ್ಮಾ ಅವರ ಸಂಬಂಧಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?
Advertisement
Advertisement
ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂತಹ ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದು ತೀರಾ ಬೇಜವಾಬ್ದಾರಿಯಾಗಿದೆ. ಇದು ಅವರ ಕುಟುಂಬಗಳನ್ನು ಸಹ ಅನಗತ್ಯವಾಗಿ ಮುಜುಗರಕ್ಕೀಡು ಮಾಡುತ್ತದೆ. ಮಾಹಿತಿಯನ್ನು ಹರಡುವ ಮೊದಲು ಸಂಯಮ ಮತ್ತು ಸತ್ಯ ಪರಿಶೀಲನೆ ಮಾಡಬೇಕು. ಪ್ರತಿಯೊಬ್ಬರ ಖಾಸಗಿ ಜೀವನದ ಬಗ್ಗೆ ಗೌರವದಿಂದ ವರ್ತಿಸುವಂತೆ ನಾವು ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.
Advertisement
ಯುಜ್ವೇಂದ್ರ ಚಾಹಲ್ ಮತ್ತು ನರ್ತಕಿ-ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿದ್ದಾರೆ. ಫೆ.19ರ ಮಂಗಳವಾರ ವಿಚಾರಣೆಯನ್ನು ಅಂತಿಮಗೊಂಡಿತ್ತು.
Advertisement
ಚಹಲ್ ಆಸ್ತಿ ಎಷ್ಟಿದೆ?
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ದೇಶಕ್ಕಾಗಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಚಹಲ್ ಟೀಂ ಇಂಡಿಯಾದ ಟಾಪ್ ಬೌಲರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಹಲ್ 160 ಐಪಿಎಲ್ (IPL) ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.
2024ರ ಆವೃತ್ತಿಯಲ್ಲಿ ಚಹಲ್ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಈ ವೇಳೆ ಅವರಿಗೆ 6.5 ಕೋಟಿ ರೂ. ನೀಡಿತ್ತು. ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ 18 ಕೋಟಿ ರೂ. ನೀಡಿ ಚಹಲ್ ಅವರನ್ನು ಖರೀದಿಸಿತ್ತು.
ಚಾಹಲ್ ಅವರು 2019 ರಲ್ಲಿ ಜೀವನಶೈಲಿ ಬ್ರ್ಯಾಂಡ್ ‘ಚೆಕ್ಮೇಟ್’ ಅನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಅವರು ಫಿಟ್‌ನೆಸ್ ಅಪ್ಲಿಕೇಶನ್ ʼಗ್ರಿಪ್ʼ ಮತ್ತು ʼYUZOʼ ಬಟ್ಟೆ ಲೈನ್‌ನಲ್ಲಿ ಪಾಲನ್ನು ಹೊಂದಿದ್ದಾರೆ. ಚಹಲ್ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲಂಬೋರ್ಘಿನಿ ಸೆಂಟೆನಾರಿಯೊ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಉತ್ತಮ ಮೊತ್ತವನ್ನು ಪಡೆಯುತ್ತಿರುವ ಚಹಲ್ ಅವರ ನಿವ್ವಳ ಮೌಲ್ಯ ಸುಮಾರು 45 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.
ಧನಶ್ರೀ ಅಸ್ತಿ ಎಷ್ಟಿದೆ?
ನೃತ್ಯ ಸಂಯೋಜನೆ, ಬ್ರಾಂಡ್ ಪ್ರಚಾರ, ಸೋಶಿಯಲ್ ಮೀಡಿಯಾಗಳಿಂದ ಧನಶ್ರೀ ಆದಾಯ ಸಂಪಾದಿಸುತ್ತಿದ್ದಾರೆ. ಮಾಧ್ಯಮವೊಂದರ ಪ್ರಕಾರ ಧನಶ್ರೀ ಅವರು ಅಂದಾಜು 25 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.