ನವದೆಹಲಿ: ಬ್ಯಾಟಿಂಗ್‍ನಲ್ಲಿ ನಿನ್ನ ರೆಕಾರ್ಡ್ ಹೇಳದಷ್ಟಿವೆ ಎಂದು ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್, ಭಾರತದ ವೇಗದ ಬೌಲರ್ ಜಸ್‍ಪ್ರೀತ್ ಬುಮ್ರಾ ಕಾಲೆಳೆದಿದ್ದಾರೆ.
ಬುಮ್ರಾ 24 ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಟ್ಟು 59 ರನ್ ಗಳಿಸಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲೂ ಬುಮ್ರಾ ಸರಾಸರಿ 5 ರನ್ ಗಡಿ ದಾಟಿಲ್ಲ. ಹೀಗಾಗಿ ಇನ್‍ಸ್ಟಾಗ್ರಾಮ್ ಲೈವ್ ಚಾಟ್‍ನಲ್ಲಿ ಯುವಿ, “ನೀನು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು 10 ರನ್, ಟೆಸ್ಟ್ ಪಂದ್ಯದಲ್ಲಿ 10 ರನ್ ಮತ್ತು ಐಪಿಎಲ್‍ನಲ್ಲಿ 16 ರನ್ ಗಳಿಸಿರುವೆ. 80 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 82 ರನ್ ದಾಖಲಿಸಿರುವೆ” ಎಂದು ತಮಾಷೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ 26 ವರ್ಷದ ಬುಮ್ರಾ “ನಾನು ಗೋವಾ ತಂಡದ ವಿರುದ್ಧ 20 ಎಸೆತಗಳಲ್ಲಿ 42 ರನ್ ಗಳಿಸಿದ್ದೆ” ಎಂದು ಹೇಳಿದರು.
Advertisement
Advertisement
ಗೊತ್ತು ಬಿಡಪ್ಪ ಎಂದು ಯುವಿ ಮತ್ತೆ ಕಾಲೆಳೆದರು. ಆಗ ಬುಮ್ರಾ, ಕಳೆದ ಮ್ಯಾಚ್‍ನಲ್ಲಿ ನಾನು ಬೌಂಡರಿ ಬಾರಿಸಿದ್ದನ್ನು ನೀವು ನೋಡಿಲ್ಲವೇ? ತಂಡಕ್ಕೆ ಅಗತ್ಯಬಿದ್ದಾಗ ನಾನು ಚನ್ನಾಗಿ ಬ್ಯಾಟಿಂಗ್ ಮಾಡುತ್ತೇನೆ ಎಂದರು.
Advertisement
ಬ್ಯಾಟಿಂಗ್‍ನಲ್ಲಿ ಕಳಪೆ ಪ್ರದರ್ಶನ ಹೊರತುಪಡಿಸಿ ಬುಮ್ರಾ ಬಾಲಿಂಗ್‍ನಲ್ಲಿ ಸೈ ಎನಿಸಿಕೊಂಡಿದ್ದಾರೆ. 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟ ಬುಮ್ರಾ 128 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 231 ವಿಕೆಟ್ ಉರುಳಿಸಿದ್ದಾರೆ.